ಸ್ವಾರ್ಥಕ್ಕಾಗಿ ಸಂಘಟನೆಯ ಬಳಕೆ : ಬಿಲ್ಲವರ ಯೂನಿಯನ್ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಆರೋಪ

6:42 PM, Thursday, March 28th, 2013
Share
1 Star2 Stars3 Stars4 Stars5 Stars
(No Ratings Yet)
Loading...

All India Billawa Unionಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾಗಿರುವ ನವೀನ್ ಚಂದ್ರ ಸುವರ್ಣ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ತಮ್ಮ ಸ್ವಹಿತಾಸಕ್ತಿ ಗಾಗಿ  ಯೂನಿಯನ್ ನ ಕ್ರಮಗಳಿಗೆ ವಿರುದ್ದವಾಗಿ, ಕಾನೂನು ಬಾಹಿರ ಸಭೆಗಳನ್ನು ನಡೆಸುತ್ತಿದ್ದಾರೆ ಇದನ್ನು ಸರಿಪಡಿಸಿಕೊಳ್ಳದಿದ್ದಲಿ ಮುಂದಿನ ದಿನಗಳಲ್ಲಿ  ಅಧಕ್ಷರು ಇದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಬಿಲ್ಲವರ ಸಂಘಟನೆಗಳ ಏಕೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಎಚ್ಚರಿಸಿದರು.

ಅವರು ಗುರುವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೂನಿಯನ್ ನ ಅಧ್ಯಕ್ಷರಾಗಿರುವ ನವೀನ್ ಚಂದ್ರ ಸುವರ್ಣ ರವರು ಪೊಲೀಸರು ಹಾಗು ತಮ್ಮ ಕೆಲವು ಬೆಂಬಲಿಗರೊಡನೆ ಸೇರಿಕೊಂಡು ಯೂನಿಯನ್ ನ ಇತರೆ ಸದಸ್ಯರ ಗಮನಕ್ಕೆ ಬಾರದಂತೆ ವಾರ್ಷಿಕ ಸಭೆಗಳನ್ನು ನಡೆಸುತ್ತಿದ್ದಾರೆ ಈ ಕುರಿತು ಕಳೆದ ವರ್ಷ ಜಿಲ್ಲಾ ರಿಜಿಸ್ಟ್ರಾರ್ ಅವರಿಗೆ ದೂರು ನೀಡಿದ್ದು ಆ ಕುರಿತು ಪರಿಶೀಲಿಸಿದ ಅವರು ಸಭೆಯು ಅಸಿಂಧು ಎಂದಿದ್ದರು. ಆದರು ಈ ಬಾರಿಯೂ ಕೆಲವು ಸದಸ್ಯರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಬಂಧ ಹೇರಿ ಕೆಲವರನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಯೂನಿಯನ್ ನಿಂದ ಅಮಾನತುಗೊಳಿಸಿದ್ದಾರೆ ಈ ಮೂಲಕ ಅವರು ಸಮಸ್ತ ಬಿಲ್ಲವರ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಅವರ ಈ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೂಪದ ಹೋರಾಟವನ್ನು ಎದುರಿಸಬೇಕಾದೀತು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವರ ಸಂಘಟನೆಗಳ ಏಕೀಕರಣ ಸಮಿತಿ ಅಧ್ಯಕ್ಷ ಎಂ.ಸೀತಾರಾಮ್, ಕೆ.ಈಶ್ವರ ಸಾಲಿಯಾನ್, ದಿನೇಶ್ ಅಂಚನ್, ಪುರುಷೋತ್ತಮ ಪೂಜಾರಿ, ಸುಧಾಕರ ಅಮೀನ್, ಉಪಾಧ್ಯಕ್ಷರುಗಳಾದ ಚಂದ್ರೇಶ್, ಬಿ.ಪಿ.ದಿನಕರ್ ಹಾಗೂ ಇತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English