ಮಂಗಳೂರು : ಉಪ್ಪಿನಂಗಡಿಯ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಅನಿಲ ಟ್ಯಾಂಕರ್ ದುರಂತವು ೮ ಜೀವಗಳನ್ನು ಬಲಿತೆಗೆದುಕೊಂಡಿತಲ್ಲದೆ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಯನ್ನು ನಾಶಪಡಿಸಿದೆ. ಇಷ್ಟಾದರು ಇದಕ್ಕೆ ಕಾರಣವಾದ ಕಂಪೆನಿಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಈ ನಿರ್ಲಕ್ಶ್ಯ ಮುಂದುವರಿದಲ್ಲಿ ಈ ದುರ್ಘಟನೆಗೆ ಕಾನೂನು ಪ್ರಕಾರ ಕಂಪೆನಿಯನ್ನೆ ಹೊಣೆಯನ್ನಾಗಿ ಮಾಡಬೇಕಾದೀತು ಎಂದು ಜಿಲ್ಲಧಿಕಾರಿ ಹರ್ಷ ಗುಪ್ತ ಎಚ್ಚರಿಸಿದ್ದಾರೆ.
ಅವರು ಈ ಸಂಬಂಧ ಬುಧವಾರ ತಮ್ಮ ಕಚೇರಿಯಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲೂ ಕಂಪನಿಗಳು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸದಿರುವ ಬಗ್ಗೆ ಆಸಮಧಾನ ವ್ಯಕ್ತಪಡಿಸಿದ ಅವರು ತಂತ್ರಜ್ಞಾನದ ನೆರವಿನಿಂದ ಭೀಕರ ಅವಘಡಗಳನ್ನು ತಡೆಯಲು ಸಾಧ್ಯವಿದೆ ಎಂದರು. ಕಂಪೆನಿಯ ಆಫ್ ಸೈಟ್ ಎಮರ್ಜೆನ್ಸಿ ಪ್ಲಾನ್ ಕರ್ತವ್ಯ ನಿರ್ವಹಿಸಿದ ರೀತಿ ಹಾಗು ಎಸ್‌ಒಪಿ (ಸ್ಟಾಂಡಡ್ ì ಆಪರೇಟಿಂಗ್ ಪ್ರೊಸಿಜರ್) ಪಾಲನೆಯಾಗಿಲ್ಲ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ತಿರುವುಗಳನ್ನು ಸುಧಾರಿಸುವಂತೆ, ಉಪ್ಪಿನಂಗಡಿಯಲ್ಲಿ ಅಗ್ನಿಶಾಮಕ ಠಾಣೆಯೊಂದನ್ನು ಸ್ಥಾಪಿಸುವಂತೆ ಸೂಚನೆ ನೀಡಿದ ಅವರು ತಹಸೀಲ್ದಾರ್ ಅವರಿಂದ ಸಮಗ್ರ ನಷ್ಟದ ಅಂದಾಜು ವಿವರ ಪಡೆದು ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಎಲ್ಲಾ ಕ್ರಮಕೈಗೊಳ್ಳಲಾಗುವುದು ಎಂದರು.ಸಾರಿಗೆ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಟ್ಯಾಂಕರ್‌ಗಳನ್ನು ನಿಲ್ಲಿಸಿ, ಇಬ್ಬರು ಚಾಲಕರು ಮತ್ತು ಕ್ಲೀನರ್ ಇದ್ದಾರೆಯೇ ಎಂದು ಪರಿಶೀಲಿಸುವುದಲ್ಲದೆ, ಅವರ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲಿಸಬೇಕು ಒಂದು ವೇಳೆ ಕಾನೂನು ಉಲ್ಲಂಘಿಸಿದಲ್ಲಿ ಟ್ಯಾಂಕರ್‌ಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿದರು.
ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅಪರ ಜಿಲ್ಲಾಧಿಕಾರಿ ದಯಾನಂದ ಕೆ. ಎ., ಮಹಾನಗರಪಾಲಿಕೆ ಆಯುಕ್ತ ಡಾ| ಹರೀಶ್, ಡಿಸಿಪಿ ಮುತ್ತುರಾಯ, ಬಿಪಿಸಿಎಲ್, ಐಒಸಿ ಕಂಪೆನಿಯ ಪ್ರತಿನಿಧಿಗಳು, ಎಂಆರ್‌ಪಿಎಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English