ಡಾ.ಜಿ.ಎಸ್. ವೃದ್ದಾಶ್ರಮದ ವತಿಯಿಂದ ಮೂವರು ಗಣ್ಯರಿಗೆ ಅಭಯಶ್ರೀ ಪ್ರಶಸ್ತಿ

3:10 PM, Wednesday, May 15th, 2013
Share
1 Star2 Stars3 Stars4 Stars5 Stars
(No Ratings Yet)
Loading...

Abhayashree Awardsಮಂಗಳೂರು : ವೃದ್ಧರ ಹಾಗು ದೀನ ದಲಿತರ ಆಶ್ರಯಧಾಮವಾಗಿರುವ, ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಡಾ.ಗಿರಿಧರ್ ರಾವ್ ಸಂಜೀವಿ ಬಾಯಿ ವೃದ್ದಾಶ್ರಮದ ವತಿಯಿಂದ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿರುವ ಅಭಯ ಆಶ್ರಯದ ಸಂಸ್ಥಾಪಕ ದಿ.ಬೇಕಲ್  ಲಿಂಗಪ್ಪಯ್ಯ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ. ರಾಮ್ ದಾಸ್ ಪೈ ಈ ಮೂವರಿಗೆ ಅಭಯ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಡಾ.ಜಿ.ಎಸ್. ವೃದ್ದಾಶ್ರಮದ ಸಂಚಾಲಕ ಶ್ರೀನಾಥ್ ಹೆಗ್ಡೆ  ತಿಳಿಸಿದರು.

ಮಂಗಳವಾರ ವೃದ್ದಾಶ್ರಮದಲ್ಲಿ ಕರೆದ ಪತ್ರಿಕಾಘೋಷ್ಠಿ ಮಾತನಾಡಿದ ಅವರು,  ಮೇ 19 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿರುವುದಾಗಿ ತಿಳಿಸಿದ ಅವರು, ಇದೇ ವೇಳೆಯಲ್ಲಿ ವಿವಿಧ ಸಂಸ್ಥೆಗಳ ದೇಣಿಗೆಯ ಸಹಾಯದಿಂದ ನಿರ್ಮಿಸಲಾದ ಆಶ್ರಮದ ನವೀಕೃತ ಕಟ್ಟಡದ ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು. ಬೇಕಲ ಲಿಂಗಪ್ಪಯ್ಯ ಮತ್ತು ಕೆಲವು ಸಹೃದಯಿಗಳ ನೆರವಿನಿಂದ 1972 ರಲ್ಲಿ ಪ್ರಾರಂಭವಾದ ಈ ಆಶ್ರಮವು ಪ್ರಸ್ತುತ 200 ಮಂದಿ ನಿರ್ಗತಿಕರಿಗೆ ಆಶ್ರಯವನ್ನು ನೀಡಿದೆ.

ಪತ್ರಿಕಾಘೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಕಾಮತ್, ಉಪಾಧ್ಯಕ್ಷ ರಘುರಾಮ್ ಕಾಜವ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English