ಮಂಗಳೂರು : ಎಸಿಪಿ ಜಗನ್ನಾಥ್ ರಿಂದ ದೌರ್ಜನ್ಯಕ್ಕೊಳಗಾದ ಪಾಂಡೇಶ್ವರ ಠಾಣಾ ಎ.ಎಸ್.ಐ ಶ್ರೀಕಲಾ ರವರಿಗೆ ಕಿರುಕುಳ ನೀಡಿದ ಎಸಿಪಿ ಟಿ.ಆರ್. ಜಗನ್ನಾಥ್ ರವರ ಮೇಲೆ ಈ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಡಿವೈಎಫ್ ಐ ಜಿಲ್ಲಾ ಘಟಕ ಹಾಗೂ ಜಿಲ್ಲಾ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ತೀವ್ರ ರೀತಿಯ ಹೋರಾಟ ನಡೆಯುತ್ತಿದೆ. ಅಲ್ಲದೆ ಪೊಲೀಸ್ ಇಲಾಖೆ ಲೈಂಗಿಕ ಕಿರುಕುಳದ ವಿರುದ್ದ ಕಠಿಣ ಕ್ರಮ, ಎಚ್ಚರಿಕೆ ನೀಡುತ್ತಿರುವ ಇಂತಹ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೆ ತನ್ನ ಕೈ ಕೆಳಗಿನ ಸಿಬ್ಬಂಧಿಗೆ ಕಿರುಕುಳ ನೀಡುತ್ತಿರುವುದು ಜಿಲ್ಲೆಯೇ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಆದ್ದರಿಂದ ಸರ್ಕಾರ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗು ದುಡಿಯುವ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳದ ವಿರುದ್ದ ಪ್ರಬಲ ಕಾನೂನು ರಚಿಸಬೇಕು ಮತ್ತು ಮಂಗಳೂರು ಎಸಿಪಿ ಟಿ.ಆರ್ ಜಗನ್ನಾಥ್ ಅವರ ವಿರುದ್ದ ಸರಿಯಾದ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಹೇಳಿದರು.
ಎಸಿಪಿ ಜಗನ್ನಾಥ್ ಕರ್ತವ್ಯ ನಿರ್ವಹಿಸಿದ ಎಲ್ಲಾ ಠಾಣೆಗಳಲ್ಲೂ ಕಿರುಕುಳ ನೀಡಿದ ಆರೋಪಗಳು ಕೇಳಿಬಂದಿದ್ದು, ಎಲ್ಲಾ ಠಾಣೆಗಳಲ್ಲೂ ಅಮಾಯಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ, ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪಗಳು ಕೇಳಿಬಂದಿದ್ದು ಈ ರೀತಿ ಕಾನೂನಿಗೆ ಗೌರವ ಕೊಡದ, ಮಹಿಳೆಯರಿಗೆ ಕಿರುಕುಳ ನೀಡುವ ಎಸಿಪಿ ಜಗನ್ನಾಥ್ ರನ್ನು ಪಾಂಡೇಶ್ವರ ಎ.ಎಸ್.ಐ ಶ್ರೀ ಕಲಾ ನೀಡಿರುವ ದೂರಿನ ಆಧಾರದ ಮೇಲೆ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಈ ಸಂದರ್ಭದಲ್ಲಿ ಮನವಿಯೊಂದನ್ನು ಜಿಲ್ಲಾಧಿಕಾರಿಯವರಿಗೆ ಪ್ರತಿಭಟನಾಕಾರರು ಸಲ್ಲಿಸಿದರು.
Click this button or press Ctrl+G to toggle between Kannada and English