ಎಸ್.ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು-ಘರ್ಷಣೆ, ಪೊಲೀಸರಿಂದ ಲಘು ಲಾಠಿ ಪ್ರಹಾರ

3:10 PM, Monday, May 27th, 2013
Share
1 Star2 Stars3 Stars4 Stars5 Stars
(No Ratings Yet)
Loading...

 Kaikamba ಬಂಟ್ವಾಳ : ಭಾನುವಾರ ಸಂಜೆ ಬಿ.ಸಿ ರೋಡ್ ಸಮೀಪದ ಕೈಕಂಬದಲ್ಲಿ ಎಸ್.ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ಏರ್ಪಟ್ಟ ಪರಿಣಾಮ ಕೈಕಂಬದಲ್ಲಿ ಕೆಲ ಸಮಯ ಉದ್ವಿಗ್ನ ವಾತವರಣ ಕಂಡುಬಂದಿತು.

ಕಲ್ಲಡ್ಕ ಪರಿಸರದಿಂದ ಬಂದ ಎಸ್ ಡಿಪಿಐ ಪಕ್ಷದ ತಂಡವೊಂದು ಭಾನುವಾರ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಕೈಕಂಬದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೊಡನೆ ಮಾತಿಗಿಳಿದಿದ್ದು, ಕೆಲ ಅವಧಿಯಲ್ಲಿಯೇ ಎರಡು ತಂಡಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟು ನಂತರ ಪರಸ್ಪರರ ನಡುವೆ ಹೊಡೆದಾಟ ಪ್ರಾರಂಭವಾಗಿದೆ. ಇನ್ನೊಂದೆಡೆ ಎರಡೂ ತಂಡಗಳಿಗೆ ಸೇರಿದ ನಾನಾ ಕಡೆಗಳ ಯುವಕರ ತಂಡ ಸ್ಥಳಕ್ಕಾಗಮಿಸದ್ದರಿಂದ ಘರ್ಷಣೆ ತೀವ್ರಗೊಂಡು ಪರಸ್ಪರರ ನಡುವೆ ಕಲ್ಲು ತೂರಾಟ, ಬಾಟ್ಲಿ ಎಸೆತ ಆರ‍ಂಭವಾಗಿ ಕೈಕಂಬ ಪ್ರದೇಶದಲ್ಲಿ ಭಯದ ವಾತವರಣ ನಿರ್ಮಾಣವಾಯಿತು.

ಪರಿಸ್ಥಿತಿಯ ವಸ್ತುಸ್ಥಿತಿಯನ್ನರಿತ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಬಂಟ್ವಾಳ ಪೊಲೀಸರು ಲಘು ಲಾಠಿ ಚಾರ್ಜ್ ಮಾಡುವ ಮೂಲಕ ಗುಂಪನ್ನು ಚದುರಿಸಿದರು. ಘರ್ಷಣೆಯಲ್ಲಿ ಎಸ್ ಡಿಪಿಐ ಕಾರ್ಯಕರ್ತ ಇಸಾಕ್ ಗೋಳ್ತಮಜಲು ಎಂಬುವವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಕೈಕಂಬದಲ್ಲಿನ ಬಸ್ ನಿಲ್ದಾಣವೊಂದು ಹಾನಿಗೊಳಗಾಗಿದೆ. ಚುನಾವಣೆ ಸಂದರ್ಭದಲ್ಲಿನ ದ್ವೇಷಗಳೆ ಈ ಘಟನೆಗೆ ಕಾರಣವೆನ್ನಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English