ನಗರದ ಹಂಪನಕಟ್ಟೆಯ ಕಟ್ಟಡ ಕುಸಿತ ಇಬ್ಬರಿಗೆ ಗಾಯ

4:44 PM, Tuesday, June 4th, 2013
Share
1 Star2 Stars3 Stars4 Stars5 Stars
(No Ratings Yet)
Loading...

Building collapses at hampankaಮಂಗಳೂರು : ರವಿವಾರ ಒಂದೇ ಸಮನೆ ಸುರಿದ ಮಳೆಯಿಂದಾಗಿ ಶಿಥಿಲಗೊಂಡ ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿಯಿರುವ ಕಟ್ಟಡದ ಮೇಲಂತಸ್ಥಿನ ಮಳಿಗೆಯ ಮುಂಭಾಗ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ.

ಸೋಮವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು ಘಟನೆಯಿಂದ ಜಾನ್(62) ಹಾಗು ಪವನ್ ಕುಮಾರ್ ಎಂಬಿಬ್ಬರು ಗಾಯಗೊಂಡಿದ್ದು, ಇವರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದಾಗಿ ಜಾನ್ ರ ಕಾಲಿನ ಮೂಳೆ ಮುರಿದಿದ್ದು, ಪವನ್ ಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಸಿದ ಕಟ್ಟಡವು ಬಹಳಷ್ಟು ಹಳೆಯದಾಗಿದ್ದು, ಇದೀಗ ಪಕ್ಕದ ಕಟ್ಟಡವು ಶಿಥಿಲಗೊಂಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English