ಕೈಕೊ ಮತ್ತು ಸುಭಾಷ್ನಗರದಲ್ಲಿ ಕಡಲ್ಕೊರೆತ ತಡೆಗೆ ಸೋಮವಾರ ಕೆಲಸ ಆರಂಭಿಸಿ: ಯು ಟಿ ಖಾದರ್

12:05 AM, Saturday, June 15th, 2013
Share
1 Star2 Stars3 Stars4 Stars5 Stars
(5 rating, 4 votes)
Loading...

Ut khaderಮಂಗಳೂರು : ಕಡಲ್ಕೊರೆತದಿಂದ ತೀವ್ರವಾಗಿ ಹಾನಿಗೊಂಡಿರುವ ಕೈಕೋ ಸುಭಾಷ್ ನಗರದಲ್ಲಿ ಸೋಮವಾರದಿಂದಲೇ ತಾತ್ಕಾಲಿಕ ಕಾಮಗಾರಿ ಆರಂಭಿಸುವಂತೆ ಆರೋಗ್ಯ ಸಚಿವ ಶ್ರೀ ಯು ಟಿ ಖಾದರ್ ಅವರು ಬಂದರು ಅಧಿಕಾರಿಗಳಿಗೆ ಆದೇಶ ನೀಡಿದರು.

ಈ ಸಂಬಂಧ ಇಂದು ಸರ್ಕ್ಯುಟ್  ಹೌಸ್ ನಲ್ಲಿ ನಡೆಸಿದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುಭಾಷ್ ನಗರ ಹಾಗೂ ಹಿಲರಿ ನಗರದ ತೀವ್ರ ಕೊರತೆವಿರುವ ಪ್ರದೇಶಗಳಲ್ಲಿ ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟವಾಗದಂತೆ ತಾತ್ಕಾಲಿಕ ತಡೆ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕೆಂದು ಸೂಚಿಸಿದ ಅವರು, ನಿಯಮಗಳನ್ನು ಜನರಿಗೋಸ್ಕರ ಸಡಿಲಗೊಳಿಸಿ ಎಂದೂ ಅಧಿಕಾರಿಗಳಿಗೆ ಹೇಳಿದರು.

ಬಂದರು ಅಧಿಕಾರಿಗಳು ಮೂರು ಸ್ಥಳಗಳಲ್ಲಿ ತಾತ್ಕಾಲಿಕ ಕಾಮಗಾರಿಗೆ ಒಟ್ಟು 55 ಲಕ್ಷದ ಯೋಜನೆಯನ್ನು ಸಚಿವರ ಮುಂದಿಟ್ಟರು.

ಕಡಲ್ಕೊರೆತ ತಡೆಗೆ 100 ಕೋಟಿ ರೂಗಳ ಶಾಶ್ವತ ಯೋಜನೆಯನ್ನು ಎಡಿಬಿಯಡಿ ರೂಪಿಸಲಾಗಿದ್ದು, ಪ್ರಸಕ್ತ ಸೆಪ್ಟೆಂಬರ್ ತಿಂಗಳಲ್ಲಿ ಪ್ರಥಮ ಹಂತದ ಯೋಜನೆ ಆರಂಭಗೊಳ್ಳಲಿರುವುದರಿಂದ ಈ ಬಾರಿ ಏನಿದ್ದರೂ ತಾತ್ಕಾಲಿಕ ತಡೆ ರೂಪಿಸಿ ಜನರನ್ನು ಸಂರಕ್ಷಿಸಿ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಡೆಂಗ್ಯು ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ವಿಚಾರಿಸಿದ ಸಚಿವರು ಇಲಾಖೆ ಇನ್ನಷ್ಟು ಚುರುಕಾಗಿ ಕಾರ್ಯೋನ್ಮುಖರಾಗಿ ಎಂದರು. ಆರೋಗ್ಯ ಇಲಾಖೆ ಇನ್ನು ಮುಂದೆ ಒಂದು ವರ್ಷದ ಮೊದಲೇ ಸಾಂಕ್ರಾಮಿಕ ರೋಗ ತಡೆಗೆ ಯೋಜನೆ ತಯಾರಿಸಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ, ಸಿಇಒ, ಅಪರ ಜಿಲ್ಲಾಧಿಕಾರಿ, ಬಂದರು ಅಧಿಕಾರಿಗಳು ಹಾಗೂ ಉಳ್ಳಾಲದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English