ಸುಳ್ಯ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಸ್ಟಾಲ್ ಹೊಂದಿರುವ ಅಲೆಟ್ಟಿ ಗ್ರಾಮದ ಮೊರಂಗಲ್ಲು ನಿವಾಸಿ ಕುಸುಮಾಧರ(26) ಎಂಬಾತ ಸಂಬಂಧಿ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ಆಕೆಯ ನಗ್ನ ಚಿತ್ರಗಳನ್ನು ಫೇಸ್ ಬುಕ್ ಗೆ ಅಪಲೋಡ್ ಮಾಡಿ ಸಿಕ್ಕಿಬಿದ್ದಿದ್ದಾನೆ.
ಸುಳ್ಯ ಅರಣ್ಯ ಇಲಾಖೆಯಲ್ಲಿ ಗುಮಾಸ್ತೆಯಾಗಿರುವ ಅರಂತೋಡು ಗ್ರಾಮದ ಬಿಳಿಯಾರು ನಿವಾಸಿ ಯುವತಿ ಈ ಬಗ್ಗೆ ದೂರು ನೀಡಿದ್ದು, ಸುಳ್ಯ ಪೊಲೀಸರು ಕುಸುಮಾಧರನನ್ನು ಆತನ ಟೀ ಸ್ಟಾಲ್ ನಿಂದ ಗುರುವಾರ ಬಂಧಿಸಿದ್ದಾರೆ. ಈತನ ವಿರುದ್ಧ ಅತ್ಯಾಚಾರ ಮತ್ತು ಜೀವ ಬೆದರಿಕೆ ದೂರು ದಾಖಲು ಮಾಡಲಾಗಿದೆ.
ಯುವತಿ ಮತ್ತು ಕುಸುಮಾಧರ ಸಂಬಂಧಿಕರಾಗಿದ್ದು, ಕುಸುಮಾಧರ ಆಕೆಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಮನೆಯವರು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರ ಸೇಡು ತೀರಿಸಿಕೊಳ್ಳಲು ನಿರ್ಜನ ಮನೆಯೊಂದಕ್ಕೆ ಕರೆದಿದ್ದ ಕುಸುಮಾಧರ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಳು.
ಕುಸುಮಾಧರ ಆಕೆಯ ನಗ್ನ ಚಿತ್ರಗಳನ್ನು ಗುಪ್ತ ಕ್ಯಾಮಾರಾದಲ್ಲಿ ಸೆರೆ ಹಿಡಿದು ಫೇಸ್ ಬುಕ್ ನಲ್ಲಿ ಅಪ ಲೋಡ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English