ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮೂರನೇ ಆರೋಪಿ ಸೆರೆ

4:55 PM, Thursday, June 27th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

anandaಉಡುಪಿ: ಮಣಿಪಾಲದಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಭಂದಿಸಿದಂತೆ  ಪೊಲೀಸರು ಮೂರನೇ ಆರೋಪಿಯಾದ ಆನಂದನನ್ನು ಇಂದು ಸಂಜೆ ಪರ್ಕಲದ ಬಡಗಬೆಟ್ಟುವಿನಿಂದ ಬಂಧಿಸಿದ್ದಾರೆ,

ಪ್ರಮುಖ ಆರೋಪಿ ಆನಂದ ತನ್ನ ಸ್ನೆಹಿತರ ಬಂಧನದ ಸುದ್ದಿ ತಿಳಿದು ತಾನು ಬಂಧನದಿಂದ ತಪ್ಪಿಸಲು ಮನೆಯ ಸಮೀಪದ ಕಾಡಿನಲ್ಲಿ ಮರವೊಂದಕ್ಕೆ ನೇಣು ಹಾಕಲು ಪ್ರಯತ್ನಿಸುವಾಗ ಸ್ಥಳಿಯರು ಗಮನಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಮಣಿಪಾಲ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಿದ್ದಾರೆ.

ಹಿಂದಿನ ಸುದ್ದಿ ಸಂಜೆ : 4 :55 ಕ್ಕೆ

ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಇಬ್ಫರು ಆರೋಪಿಗಳ ಬಂಧನ

Manipal Rapistಉಡುಪಿ: ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಣಿಪಾಲದ ಹಿರಿಯಡ್ಕದ ಮದಗದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕು . ಇಲ್ಲವಾದಲ್ಲಿ ಶುಕ್ರವಾರ ಮಣಿಪಾಲ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.

ಆರೋಪಿಗಳ ಬಂಧನಕ್ಕೆ ವಿದ್ಯಾರ್ಥಿ ಸಂಘಟನೆಗಳು ಎಲ್ಲಾ ಕಡೆಗಳಿಂದ ತೀವ್ರ ಒತ್ತಡ ತಂದ  ಹಿನ್ನೆಲೆಯಲ್ಲಿ ಗುರುವಾರ ಪೊಲೀಸರು ಇಬ್ಬರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.

ಉಡುಪಿಯ ಯೋಗೀಶ್ ಮತ್ತು ಹರೀಶ್ ಬಂಧಿಸಲ್ಪಟ್ಟ ಆರೋಪಿಗಳಾಗಿದ್ದಾರೆ . ಪ್ರಕರಣದ ಮೂರನೇ ಆರೋಪಿ ಆನಂದ ಎಂಬಾತ ಗೋವಾದಲ್ಲಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಗೋವಾಕ್ಕೆ ತೆರಳಿದ್ದಾರೆ. ವಿದ್ಯಾರ್ಥಿನಿಗೆ ಆನಂದನ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯಡ್ಕ ಪೊಲೀಸರು ಹರೀಶ್ ನನ್ನು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾನೆ. ಅಂದು ರಾತ್ರಿ ಮೂರು ಮಂದಿ ಕುಡಿದ ಮತ್ತಿನಲ್ಲಿ ಅತ್ಯಾಚಾರ ನಡೆಸಿದ್ದಾಗಿ  ಒಪ್ಪಿಕೊಂಡಿರುವುದಾಗಿ  ಪೊಲೀಸರು ಹೇಳಿದ್ದಾರೆ.

ಯೋಗೀಶ್ ಯುವತಿಯನ್ನು ರಿಕ್ಷಾದೊಳಗೆ ಎಳೆದು ತಂದಿದ್ದ. ಹರೀಶ ರಿಕ್ಷಾ ಚಲಾಯಿಸುತ್ತಿದ್ದ. ಹರೀಶ್ ಮಾತ್ರ ಯುವತಿಗೆ ಲೈಂಗಿಕ ಕಿರುಕುಳ ನೀಡಿಲ್ಲವೆಂದು ವಿಚಾರಣೆ ವೇಳೆ ಹೇಳಿದ್ದಾನೆ. ಆದರೆ ಈ ಕೃತ್ಯ ನಡೆದಾಗ ತಾನು ಅಲ್ಲಿದ್ದೆ ಎಂದು ಹರೀಶ್ ಹೇಳಿದ್ದಾಗಿ ಪೊಲೀಸರು ವಿವರ ನೀಡಿದ್ದಾರೆ.

ಆರೋಪಿ ಯೋಗೀಶ್ ರೌಡಿಶೀಟರ್ ಆಗಿದ್ದು ಕೆಲಸದಲ್ಲಿ ರಿಕ್ಷಾ ಚಾಲಕನಾಗಿದ್ದಾನೆ.  ಅತ್ಯಾಚಾರ ಚಿತ್ರೀಕರಣವನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಣ ಮಾಡಿದ್ದಾನೆ.

ಬಂಧನಕ್ಕೆ ಮೊದಲು ಹಿರಿಯಡ್ಕ ಠಾಣೆಯ ಎಎಸ್ ಐ ಯೋಗೀಶ್ ಮನೆಗೆ ಭೇಟಿ ನೀಡಿದ್ದರು. ಆದರೆ ಆತ ಅಲ್ಲಿರಲಿಲ್ಲ. ಪೊಲೀಸರು ಮೊಬೈಲ್ ಗೆ ಕರೆ ಮಾಡಿದಾಗ ಹೆದರಿದ ಯೋಗೀಶ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹರೀಶ್ ಮನೆಯಲ್ಲಿ ಆಟೋ ರಿಕ್ಷಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English