ಮಣಿಪಾಲ : ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಬಂಧನ

Thursday, October 15th, 2020
Fazal

ಉಡುಪಿ, : ಮಣಿಪಾಲದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಉಡುಪಿ  ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ದಂಧೆಯಲ್ಲಿ ತೊಡಗಿದ ವ್ಯಕ್ತಿಯನ್ನು ಉಡುಪಿ ತಾಲೂಕಿನ ಬ್ರಹ್ಮಾವರದ ಮಹಮ್ಮದ್ ಫಝಲ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆರೋಪಿ ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲೆಂದು ತಂದಿದ್ದ ನಿಷೇಧಿತ ಎಂಡಿಎಂಎ ಮಾತ್ರೆಗಳು, ಬ್ರೌನ್ ಶುಗರ್ ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂದಿದ್ದಾರೆ. ಅಲ್ಲದೇ ಮಾರಾಟ ಸಂವಹನಕ್ಕೆಂದು ಬಳಸಲಾಗುತ್ತಿದ್ದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಡ್ರಗ್ಸ್ ಹಾಗೂ ಸೊತ್ತುಗಳ ಅಂದಾಜು ಮೌಲ್ಯ […]

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕೊವೀಡ್ -19 ಸೋಂಕು ದೃಢ

Tuesday, July 21st, 2020
Sugunendra Thirtha swamy

ಉಡುಪಿ :  ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೆ  ಕೊವೀಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಸೋಮವಾರ ರಾತ್ರಿ  ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸುಗುಣೇಂದ್ರ ಶ್ರೀಗಳಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಮಂಗಳವಾರ ವರದಿ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿದೆ. ಸ್ವಾಮೀಜಿಗಳು ಇಂದಿನಿಂದ ಪಾಡಿಗಾರು ಮಠದಲ್ಲಿ ಚಾರ್ತುಮಾಸ […]

ಉಡುಪಿ : ಹುಲಿವೇಷ ತಂಡದ ವಾಹನ ಪಲ್ಟಿ; ಓರ್ವ ಸಾವು

Wednesday, September 4th, 2019
udupi

ಉಡುಪಿ : ಹುಲಿವೇಷಧಾರಿಗಳಿದ್ದ ವಾಹನ ಪಲ್ಟಿಯಾಗಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನೇಜಾರಿನಲ್ಲಿ ನಡೆದಿದೆ. ಪಡುಬಿದ್ರಿಯ ಸುಮಂತ್ (22) ಮೃತ ವೇಷಧಾರಿ. ಗಣೇಶ ವಿಸರ್ಜನೆಯ ಮೆರವಣಿಗೆಯ ಪ್ರಯುಕ್ತ ಇವರು ಸಂತೆಕಟ್ಟೆಗೆ ಟೆಂಪೋದಲ್ಲಿ ತೆರಳುತ್ತಿದ್ದರು. ವಾಹನದಲ್ಲಿ 12ಕ್ಕೂ ಹೆಚ್ಚು ಮಂದಿ ವೇಷಧಾರಿಗಳಿದ್ದರು. ನೇಜಾರು ಆಟದ ಮೈದಾನದ ಬಳಿ ಘಟನೆ ಸಂಭವಿಸಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಐವರು ವೇಷಧಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಮಣಿಪಾಲ ಸೆವೆನ್ತ್ ಆರ್‌ಸಿ ಇಸ್ಪೀಟ್ ಕ್ಲಬ್‌ನ ಮಾಲಕ ಗುರುಪ್ರಸಾದ್ ಭಟ್ ಹತ್ಯೆ

Sunday, July 29th, 2018
Guruprasad

ಉಡುಪಿ : ಉಡುಪಿ ಶಾಸಕ ರಘುಪತಿ ಭಟ್ ಹತ್ತಿರದ ಸಂಬಂಧಿ ರೌಡಿ ಶೀಟರ್  ಹಿತೇಂದ್ರ ಪ್ರಸಾದ್  ಶಿಷ್ಯ  ಮಣಿಪಾಲ ಸೆವೆನ್ತ್ ಆರ್‌ಸಿ ಹೆಸರಿನ ಇಸ್ಪೀಟ್ ಕ್ಲಬ್‌ನ ಮಾಲಕ ಗುರುಪ್ರಸಾದ್ ಭಟ್ (46)  ಎಂಬವರನ್ನು  ನಾಲ್ಕು ಜನರ  ದುಷ್ಕರ್ಮಿಗಳ ತಂಡ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಂದು ಮಧ್ಯಾಹ್ನ ಭಾನುವಾರ ಮಧ್ಯಾಹ್ನ 12.30 ಕ್ಕೆ ನಡೆದಿದೆ. ಪೆರಂಪಳ್ಳಿ ರಸ್ತೆಯ ಝೆಪ್ಟಾ ಲಾಂಗ್ ಕಟ್ಟಡದಲ್ಲಿರುವ ಸೆವೆನ್ತ್ ಹೆವೆನ್ ಹೊಟೇಲಿನ ಮೊದಲ ಮಹಡಿಯ ಈ ಇಸ್ಪೀಟ್ ಕ್ಲಬ್ಬ್ ಕಾರ್ಯಾಚರಿಸುತ್ತಿತ್ತು. ಕೊಲೆಗೀಡಾದ ಗುರುಪ್ರಸಾದ್ ಭಟ್ (46)  […]

ಮನೆಯಂಗಳದಲ್ಲಿ ತರಕಾರಿ ಬೆಳೆಸಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಎಚ್.ಎಸ್.ಚೈತನ್ಯ

Friday, May 25th, 2018
vikas-trust

ಮಣಿಪಾಲ: ಉಡುಪಿ ಪರಿಸರ ನರ್ಸರಿಗಳನ್ನು ಸ್ಥಾಪಿಸುವುದಕ್ಕೆ ಸೂಕ್ತವಾಗಿದೆ. ನರ್ಸರಿಯ ಜೊತೆ ಕಸಿ ಕಟ್ಟುವುದರ ಪರಿಜ್ಞಾನ ಹೊಂದಿದಲ್ಲಿ ಉತ್ತಮ ಆದಾಯ ಗಳಿಸಲು ಸಾಧ್ಯ. ಈ ಬಗ್ಗೆ ಯುವಕರು ಗಮನಹರಿಸಬೇಕು. ನಗರ ಪ್ರದೇಶದಲ್ಲಿ ಕೈತೋಟ ಬೆಳೆಸಲು ಅವಕಾಶ ಇರುವವರು ಮನೆಯಂಗಳದಲ್ಲಿ ಪಪ್ಪಾಯಿ, ಬಸಳೆ, ಹರಿವೆ, ಬೆಂಡೆ ಇತ್ಯಾದಿ ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದು ಹಾಗೂ ಇವುಗಳ ದಿನ ನಿತ್ಯ ಬಳಕೆಯಿಂದ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ ಎಂದು ಬ್ರಹ್ಮಾವರಕ ಕೃಷಿ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಹೇಳಿದ್ದಾರೆ. ಮಣಿಪಾಲ ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟಿನಲ್ಲಿ […]

ಹತ್ತಾರು ಮಂದಿ ಬಲಿ ಪಡೆದ ನಿಫಾ ವೈರಸ್‌ ಮೊದಲು ಪತ್ತೆ ಹಚ್ಚಿದ್ದು ಮಣಿಪಾಲದ ವೈದ್ಯರು!

Wednesday, May 23rd, 2018
manipal

ಮಂಗಳೂರು: ಕೇರಳದಲ್ಲಿ ಹತ್ತು ಮಂದಿಯನ್ನು ಬಲಿ ಪಡೆದಿರುವ ಮಾರಕ ನಿಫಾ ವೈರಸ್‌‌‌‌‌‌ನ್ನು ಅತ್ಯಂತ ಕ್ಷಿಪ್ರವಾಗಿ ಪತ್ತೆ ಹಚ್ಚಿದ್ದು ಉಡುಪಿಯ ಮಣಿಪಾಲದ ವೈದ್ಯರು. ಅಪರೂಪದ ಈ ಕಾಯಿಲೆ ಬಗ್ಗೆ ಮಾಹಿತಿ ಬಂದ ಕೇವಲ ಹತ್ತೇ ತಾಸಿನಲ್ಲಿ ಮಣಿಪಾಲದ ವೈದ್ಯರ ತಂಡ ಈ ಕಾಯಿಲೆಯನ್ನು ಗುರುತಿಸುವಲ್ಲಿ ಯಶ ಕಂಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ನಿಫಾ ವೈರಸ್ ಕರ್ನಾಟಕ ಕರಾವಳಿಗೂ ಹಬ್ಬುವುದನ್ನು ತಡೆಯಲು ಸಾಧ್ಯವಾಗಿದೆ. ಮಣಿಪಾಲ್ ಸೆಂಟರ್ ಫಾರ್ ವೈರಸ್ ರೀಸರ್ಚ್‌ನ ಡಾ. ಅರುಣ್ ಕುಮಾರ್ ಈ ಕಾಯಿಲೆ ಚಿಕಿತ್ಸೆಯ […]

ಮಂಗಳೂರು-ಮಣಿಪಾಲ ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆಯ ಕಡೆಗಣನೆ

Monday, March 12th, 2018
express-bus

ಮಂಗಳೂರು: ರಾಜ್ಯದಲ್ಲಿ ಸಂಚರಿಸುವ ಎಲ್ಲ ಖಾಸಗಿ ಹಾಗೂ ಸರಕಾರಿ ಬಸ್‌ಗಳಲ್ಲಿ ಸಾಮಾನ್ಯವಾಗಿ ಕನ್ನಡದ ನಾಮಫಲಕಗಳು ಇರುತ್ತವೆ. ಆದರೆ, ಮಂಗಳೂರು-ಉಡುಪಿ-ಮಣಿಪಾಲ ನಡುವೆ ಸಂಚರಿಸುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಇಂಗ್ಲಿಷ್‌ ನಾಮಫಲಕಗಳೇ ರಾರಾಜಿಸುತ್ತಿವೆ. ಸಾಮಾನ್ಯವಾಗಿ ನಗರದ ಸಿಟಿ ಬಸ್‌ ಸೇರಿದಂತೆ ಸರಕಾರಿ ಬಸ್‌ಗಳಲ್ಲಿ ಆಂಗ್ಲ ಭಾಷೆಯಲ್ಲಿ ನಾಮಫಲಕ ನಮೂದಾಗಿದ್ದರೂ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ ಇಲ್ಲಿನ ಕೆಲವು ಖಾಸಗಿ ಬಸ್‌ಗಳು ಆಂಗ್ಲಭಾಷಾ ಮೋಹಕ್ಕೆ ತುತ್ತಾಗಿರುವುದು ಸಾರ್ವಜನಿಕರ ಅದರಲ್ಲಿಯೂ ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿ ಯಾಗಿದೆ. […]

ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಮಾವೇಶದ ಸಂಭ್ರಮ

Monday, October 30th, 2017
Finomenal

ಮಂಗಳೂರು: ಮೂರು ದಿನಗಳ ವಾರ್ಷಿಕ ಹಣಕಾಸಿನ ಸಮಾವೇಶ ’ಫಿನೊಮೆನಲ್’ ನ 3 ನೇ ಆವೃತ್ತಿಯು ಇತ್ತೀಚೆಗೆ ಟಿಎ ಪೈ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್‌ನಲ್ಲಿ ನಡೆಯಿತು. ‘ಆಡಳಿತ ನಡೆಸಿ, ಬಲಪಡಿಸಿ, ರೂಪಾಂತರಿಸಿ’ಎಂಬ ಥೀಮ್ ಹೊಂದಿರುವ ಈ ಫಿನಾಮಿನಲ್ ತಮ್ಮ ಜ್ಞಾನವನ್ನು ಪ್ರದರ್ಶಿಸಲು ಫೈನಾನ್ಸ್ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸುತ್ತದೆ, ಜೊತೆಗೆ ತಮ್ಮ ಹಿರಿಯ ಉದ್ಯಮ ವೃತ್ತಿಪರರೊಂದಿಗೆ ಸಂಪರ್ಕ ಹೊಂದಲೂ ಸಾಧ್ಯವಾಗುತ್ತದೆ. ಈ ಉಪಕ್ರಮವು ಒಟ್ಟಾರೆಯಾಗಿ ಅರ್ಥಶಾಸ್ತ್ರಜ್ಞರು, ಸಿಎಕ್ಸ್‌ಒಗಳು, ಬ್ಯಾಂಕರ್‌ಗಳು, ನಿಯಂತ್ರಕರು ಮತ್ತು ನಿಧಿ ವ್ಯವಸ್ಥಾಪಕರನ್ನು ಒಂದೇ ವೇದಿಕೆಗೆ ತರುವ ಮೂಲಕ ಇತ್ತೀಚಿನ ಪ್ರವೃತ್ತಿಗಳು, ಸಮಸ್ಯೆಗಳು, ಸವಾಲುಗಳು […]

ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮೂರನೇ ಆರೋಪಿ ಸೆರೆ

Thursday, June 27th, 2013
Manipal Rapist

ಉಡುಪಿ: ಮಣಿಪಾಲದಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಭಂದಿಸಿದಂತೆ  ಪೊಲೀಸರು ಮೂರನೇ ಆರೋಪಿಯಾದ ಆನಂದನನ್ನು ಇಂದು ಸಂಜೆ ಪರ್ಕಲದ ಬಡಗಬೆಟ್ಟುವಿನಿಂದ ಬಂಧಿಸಿದ್ದಾರೆ, ಪ್ರಮುಖ ಆರೋಪಿ ಆನಂದ ತನ್ನ ಸ್ನೆಹಿತರ ಬಂಧನದ ಸುದ್ದಿ ತಿಳಿದು ತಾನು ಬಂಧನದಿಂದ ತಪ್ಪಿಸಲು ಮನೆಯ ಸಮೀಪದ ಕಾಡಿನಲ್ಲಿ ಮರವೊಂದಕ್ಕೆ ನೇಣು ಹಾಕಲು ಪ್ರಯತ್ನಿಸುವಾಗ ಸ್ಥಳಿಯರು ಗಮನಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಮಣಿಪಾಲ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿ […]

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಕೆ.ಜೆ.ಜಾರ್ಜ್

Sunday, June 23rd, 2013
Home Minister KJ George

ಉಡುಪಿ:  ಮಣಿಪಾಲದಲ್ಲಿ ಜೂನ್ 20 ರಂದು ನಡೆದ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಗೃಹ ಸಚಿವ ಕೆ.ಜೆ.ಜಾರ್ಜ್  ಮಣಿಪಾಲ ಆಸ್ಪತ್ರೆಗೆ ಇಂದು ಬೆಳಿಗ್ಗೆ ಭೇಟಿ ನೀಡಿ ದೌರ್ಜನ್ಯಕ್ಕೊಳಗಾಗಿರುವ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದು, ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು. ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಎಂಟು […]