ಮಂಗಳೂರು: ಮೂರು ದಿನಗಳ ವಾರ್ಷಿಕ ಹಣಕಾಸಿನ ಸಮಾವೇಶ ’ಫಿನೊಮೆನಲ್’ ನ 3 ನೇ ಆವೃತ್ತಿಯು ಇತ್ತೀಚೆಗೆ ಟಿಎ ಪೈ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್‌ನಲ್ಲಿ ನಡೆಯಿತು.
‘ಆಡಳಿತ ನಡೆಸಿ, ಬಲಪಡಿಸಿ, ರೂಪಾಂತರಿಸಿ’ಎಂಬ ಥೀಮ್ ಹೊಂದಿರುವ ಈ ಫಿನಾಮಿನಲ್ ತಮ್ಮ ಜ್ಞಾನವನ್ನು ಪ್ರದರ್ಶಿಸಲು ಫೈನಾನ್ಸ್ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸುತ್ತದೆ, ಜೊತೆಗೆ ತಮ್ಮ ಹಿರಿಯ ಉದ್ಯಮ ವೃತ್ತಿಪರರೊಂದಿಗೆ ಸಂಪರ್ಕ ಹೊಂದಲೂ ಸಾಧ್ಯವಾಗುತ್ತದೆ. ಈ ಉಪಕ್ರಮವು ಒಟ್ಟಾರೆಯಾಗಿ ಅರ್ಥಶಾಸ್ತ್ರಜ್ಞರು, ಸಿಎಕ್ಸ್‌ಒಗಳು, ಬ್ಯಾಂಕರ್‌ಗಳು, ನಿಯಂತ್ರಕರು ಮತ್ತು ನಿಧಿ ವ್ಯವಸ್ಥಾಪಕರನ್ನು ಒಂದೇ ವೇದಿಕೆಗೆ ತರುವ ಮೂಲಕ ಇತ್ತೀಚಿನ ಪ್ರವೃತ್ತಿಗಳು, ಸಮಸ್ಯೆಗಳು, ಸವಾಲುಗಳು ಮತ್ತು ಉದ್ಯಮದಲ್ಲಿನ ಅವಕಾಶಗಳ ಬಗ್ಗೆ ಪರಸ್ಪರ ಚರ್ಚಿಸಲು ಅವಕಾಶ ಕಲ್ಪಿಸುತ್ತದೆ.
ಹಣಕಾಸಿನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಪ್ರವೃತ್ತಿಗಳ ಮೇಲೆ ಹಣಕಾಸಿನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ತಜ್ಞರ ಜೊತೆಗೆ ಸಂವಹನ ಮಾಡಲು ವಿದ್ಯಾರ್ಥಿಗಳಿಗೆ ಇದೊಂದು ಅದ್ಭುತ ಅವಕಾಶವಾಗಿದೆ. ಸಾಕಷ್ಟು ವಿಚಾರಗಳ ಕುರಿತು ಉದ್ಯಮ ತಜ್ಞರ ಜೊತೆಗಿನ ವಿದ್ಯಾರ್ಥಿಗಳ ಚರ್ಚೆ?ಸಂವಾದವನ್ನು ಖಾತ್ರಿಪಡಿಸುವ ಮೂಲಕ, ಕಾರ್ಪೊರೇಟ್ ಹಣಕಾಸು ಮತ್ತು ಬಿ-ಸ್ಕೂಲ್ ಶಿಕ್ಷಣದ ನಡುವಿನ ಅಂತರವನ್ನು ಸರಿದೂಗಿಸಲು ಫಿನಾಮಿನಲ್ ಅನ್ನು ರೂಪಿಸಲಾಗಿದೆ.
ಬಾರ್ಕ್‌ಲೇಸ್ ಬ್ಯಾಂಕ್ ಪಿಎಲ್ಸಿ-ರಿಸ್ಕ್ ಸೊಲ್ಯೂಶನ್ಸ್ ಗ್ರೂಪ್‌ನ ನಿರ್ದೇಶಕ ಶ್ರೀ ಹರೀಶ್ ಮದ್ನಾನಿ, ಪಾಲಿಸಿಬಜಾರ್‌ನ ಮ್ಯೂಚುವಲ್ ಫಂಡ್-ಬಿಸಿನೆಸ್ ಹೆಡ್ ಶ್ರೀ ಮನೀಶ್ ಕೊಟಾರಿ, ನ್ಯಾಷನಲ್ ಆಸ್ಟ್ರೇಲಿಯಾ ಬ್ಯಾಂಕ್‌ನ ಕಂಪ್ಲಯೆನ್ಸ್- ಇಂಡಿಯಾ ಹೆಡ್ ಮಿತುಲ್ ದೇಸಾಯಿ, ಬ್ಲೂಮ್‌ಬರ್ಗ್ ಎಲ್‌ಪಿ- ಇಕ್ವಿಟಿ ಸೇಲ್ಸ್‌ನ ಸೇಲ್ಸ್ ಅಸೋಸಿಯೇಟ್ ಶ್ರೀ ನಿತಿನ್ ಪರಮೇಶ್ವರ್, ಕೋಟಾಕ್ ಮಹೀಂದ್ರಾ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ಫಿಕ್ಸ್ಡ್ ಇನ್‌ಕಮ್ ಮತ್ತು ಹೆಡ್-ಪ್ರಾಡಕ್ಟ್ಸ್ ಸಿಐಒ ಶ್ರೀಮತಿ ಲಕ್ಷ್ಮಿ ಐಯರ್ ಸೇರಿಂದತೆ ಅನೇಕ ಶ್ರೇಷ್ಠ ಉದ್ಯಮ ತಜ್ಞರು ಈ ವರ್ಷದ ಸಮಾವೇಶದಲ್ಲಿ ಹಲವಾರು ಭಾಗವಹಿಸಿದ್ದರು.
ಸಾಂಸ್ಥಿಕ ಗವರ್ನನ್ಸ್‌ನಲ್ಲಿ ಬದಲಾಗುತ್ತಿರುವ ಪ್ರವೃತ್ತಿಗಳ ಕುರಿತು ಮಾತನಾಡಿದ ಪ್ರೊಫೆಸರ್ ಮತ್ತು ಹಣಕಾಸು ಮತ್ತು ಕಾರ್ಯತಂತ್ರದ ಅಧ್ಯಕ್ಷರಾದ ಪ್ರೊಫೆಸರ್ ರಾಜೀವ್ ಶಾ, ‘ಬೋರ್ಡ್ (ಮಂಡಳಿ) ಸದಸ್ಯರ ಕೌಶಲ್ಯಗಳು ಮತ್ತು ಬೋರ್ಡ್‌ಗಳಲ್ಲಿನ ಲಿಂಗ ವೈವಿಧ್ಯತೆಗಳಂತಹ ಸಮಸ್ಯೆಗಳನ್ನು ಹೂಡಿಕೆದಾರರು ಬಹಳ ಗಂಭೀರವಾಗಿ ಮತ್ತು ಹೆಚ್ಚು ಹತ್ತಿರದಿಂದ ನೋಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಅಪಾಯದ ನಿರ್ವಹಣೆಯು ಮಂಡಳಿಗಳ ನೇರ ಗಮನದಲ್ಲಿದೆ. ಅಡಿಟ್ ಸಮಿತಿಗಳು ಮತ್ತು ಒಟ್ಟಾರೆ ಜವಾಬ್ದಾರಿಗಳ ಬಗ್ಗೆ ಪ್ರಚಾರವೂ ಹೆಚ್ಚುತ್ತಿದೆ. ಕೆಲ ಅವ್ಯವಹಾರಗಳ ಸರಣಿಯ ನಂತರ ಉತ್ತಮ ಆಡಳಿತದ ಅಗತ್ಯವು ಪ್ರಾಮುಖ್ಯತೆ ಪಡೆಯುತ್ತಿದೆ. ಉದಾಹರಣೆಗೆ 2009 ರಲ್ಲಿನ ಸತ್ಯಂ ವಿವಾದ. ಈ ವಿವಾದದ ನಂತರ 2013 ರಲ್ಲಿ ಕಂಪನಿ ಆಕ್ಟ್ ಅನ್ನು ಪುನರುಜ್ಜೀವನಗೊಳಿಸಲಾಯಿತು. ಆದಾಗ್ಯೂ, ಉತ್ತಮ ನಿಯಮಗಳನ್ನು ಸಹ ಸರಿಯಾದ ಮೇಲ್ವಿಚಾರಣೆ ಮತ್ತು ಸೂಕ್ತ ರೀತಿಯ ನಿಯಂತ್ರಣದ ಮೂಲಕ ಅನುಸರಿಸಬೇಕಾಗುತ್ತದೆ.
ಈ ಅಂತರವನ್ನು ಇನ್ಫೋಸಿಸ್ ಮತ್ತು ಟಾಟಾ ಸಮೂಹದ ಇತ್ತೀಚಿನ ಸಮಸ್ಯೆಗಳಿಂದ ಎತ್ತಿ ತೋರಿಸಲಾಯಿತು.’ ಎಂದು ಹೇಳಿದರು. ಈ ಫಿನಾಮಿನಲ್‌ನ ‘ಆಡಳಿತ ನಡೆಸಿ, ಬಲಪಡಿಸಿ, ರೂಪಾಂತರಿಸಿ’ ಎಂಬ ಥೀಮ್ ಮೇಲೆ ಬೆಳಕು ಚೆಲ್ಲಿ ಮಾತನಾಡಿದ ಮುಖ್ಯ ಅತಿಥಿ, ಹಣಕಾಸು ತಜ್ಞ ಶ್ರೀ ಗಂಟಿ ಮೂರ್ತಿ, ‘ಉತ್ತಮ ಆಡಳಿತವು ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಪರಿವರ್ತಿಸುತ್ತದೆ. ನಾವು ವ್ಯವಸ್ಥೆಯಲ್ಲಿನ ಆ ಕಟ್ಟುಪಾಡುಗಳನ್ನು ಕೇವಲ ಒಳಗೊಳ್ಳುವುದಷ್ಟೇ ಅಲ್ಲ, ಅದರ ಜೊತೆಗೆ ಗುಣಾತ್ಮಕವಾಗಿ ಇರುವುದು ಒಳ್ಳೆಯ ಆಡಳಿತವಾಗುತ್ತದೆ. ಹೀಗಾಗಿ, ಹಣಕಾಸು ಉತ್ಸಾಹಿಗಳಾಗಿ, ನಾವು ಆಡಳಿತದ ಮಾನದಂಡಗಳನ್ನು ಸುಧಾರಿಸುವುದರ ಮೂಲಕ ಮುಂದೆ ಸಾಗಬೇಕಾಗುತ್ತದೆ ಮತ್ತು ಬದಲಾವಣೆ ತರಲು ಉತ್ತಮ ಆಡಳಿತವನ್ನು ಮುಂದುವರಿಸಲು ಸಾಮೂಹಿಕ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ.’ ಎಂದು ತಿಳಿಸಿದರು.
ಮೂರು ದಿನಗಳ ಈ ವಾರ್ಷಿಕ ಸಮಾವೇಶದಲ್ಲಿ ವಿವಿಧ ಅಂತರ ಕಾಲೇಜು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮುಖ್ಯವಾಗಿ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು- ಟಿಎಪಿಎಂಐ- ಬ್ಲೂಮ್‌ಬರ್ಗ್ ಓಲಂಪಿಯಾರ್ಡ್: ಇದರಲ್ಲಿ ಸುಮಾರು 10ಕ್ಕಿಂತ ಹೆಚ್ಚಿನ ಬಿ-ಸ್ಕೂಲ್‌ಗಳ ಬ್ಲೂಮ್‌ಬರ್ಗ್ ಚ್ಯಾಂಪಿಯನ್ಸ್ ಭಾಗವಹಿಸಿದ್ದರು. ಈ ವರ್ಷ, ಬ್ಲೂಮ್‌ಬರ್ಗ್ ಒಲಿಂಪಿಯಾಡ್ ವಿಜೇತರು ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್. ಅಕ್ರಿಷನ್ 1.o : ಈ ಅಂತರ -ಕಾಲೇಜು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಲೀನ ಅಥವಾ ಅಕ್ವಿಸಿಶನ್ ಪ್ರದೇಶದಲ್ಲಿ ಹಣಕಾಸು ಸಲಹೆಗಾರರ ಪಾತ್ರವನ್ನು ವಹಿಸಿದ್ದರು. ಐಐಎಂ-ಕಲ್ಕತ್ತಾ ಈ ವರ್ಷದ ಅಕ್ವಿಸಿಶನ್1.0 ಗೆದ್ದಿತು.
ಆಡಳಿತ ನಡೆಸಿ, ಅದು ಹಕ್ಕು: ಈ ಸ್ಪರ್ಧೆಯಲ್ಲಿ ಆಡಳಿತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೋರ್ಡ್ / ಅಲ್ಪಸಂಖ್ಯಾತರ ಪಾಲುದಾರರ ಪ್ರತಿನಿಧಿಯ ಪಾತ್ರವನ್ನು ವಿದ್ಯಾರ್ಥಿಗಳು ವಹಿಸಿದ್ದರು. ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಅಂಬರೀಶ್ ಮತ್ತು ನಂದನ್ ಅವರು ಈ ವರ್ಷದ ಪ್ರಶಸ್ತಿ ಗೆದ್ದರು.
ಇದಿಷ್ಟೇ ಅಲ್ಲದೇ, ಸಮಾವೇಶದಲ್ಲಿ ಅತಿಥಿ ಉಪನ್ಯಾಸಗಳು ಮತ್ತು ಸಂವಾದಾತ್ಮಕ ಕಾರ್ಯಾಗಾರಗಳು ನಡೆದವು. ’ಸುಸ್ಥಿರತೆ ಮತ್ತು ಆಡಳಿತ’, ’ಕಾರ್ಪೊರೇಟ್ ಗವರ್ನನ್ಸ್ ವ್ಯವಹಾರದ ನೀತಿಗಳು’, ’ಹಣಕಾಸು ಮಾರುಕಟ್ಟೆ ಮೇಲ್ವಿಚಾರಣೆ ಮತ್ತು ನಿಯಂತ್ರಣ’, ’ಆಂತರಿಕ ನಿಯಂತ್ರಣಗಳು ಮತ್ತು ವಿಷಯಗಳು ಸೇರಿದಂತೆ ಅನೇಕ ವಿಷಯಗಳ ಮೇಲೆ ಅತಿಥಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಚರ್ಚೆಗಳು ನಡೆದವು.
Click this button or press Ctrl+G to toggle between Kannada and English