ಮಂಗಳೂರು-ಮಣಿಪಾಲ ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆಯ ಕಡೆಗಣನೆ

12:43 PM, Monday, March 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

express-busಮಂಗಳೂರು: ರಾಜ್ಯದಲ್ಲಿ ಸಂಚರಿಸುವ ಎಲ್ಲ ಖಾಸಗಿ ಹಾಗೂ ಸರಕಾರಿ ಬಸ್‌ಗಳಲ್ಲಿ ಸಾಮಾನ್ಯವಾಗಿ ಕನ್ನಡದ ನಾಮಫಲಕಗಳು ಇರುತ್ತವೆ. ಆದರೆ, ಮಂಗಳೂರು-ಉಡುಪಿ-ಮಣಿಪಾಲ ನಡುವೆ ಸಂಚರಿಸುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಇಂಗ್ಲಿಷ್‌ ನಾಮಫಲಕಗಳೇ ರಾರಾಜಿಸುತ್ತಿವೆ.

ಸಾಮಾನ್ಯವಾಗಿ ನಗರದ ಸಿಟಿ ಬಸ್‌ ಸೇರಿದಂತೆ ಸರಕಾರಿ ಬಸ್‌ಗಳಲ್ಲಿ ಆಂಗ್ಲ ಭಾಷೆಯಲ್ಲಿ ನಾಮಫಲಕ ನಮೂದಾಗಿದ್ದರೂ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ ಇಲ್ಲಿನ ಕೆಲವು ಖಾಸಗಿ ಬಸ್‌ಗಳು ಆಂಗ್ಲಭಾಷಾ ಮೋಹಕ್ಕೆ ತುತ್ತಾಗಿರುವುದು ಸಾರ್ವಜನಿಕರ ಅದರಲ್ಲಿಯೂ ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿ ಯಾಗಿದೆ. ಪ್ರಯಾಣಿಕರೆಲ್ಲರಿಗೂ ಆಂಗ್ಲ ಭಾಷೆಯ ಬಗ್ಗೆ ಜ್ಞಾನವಿರುವುದಿಲ್ಲ. ಹಾಗಾಗಿ ಉಡುಪಿ ಅಥವಾ ಮಣಿಪಾಲಕ್ಕೆ ಹೋಗುವ ಇಂಗ್ಲಿಷ್‌ ಬಾರದ ಪ್ರಯಾಣಿಕರು ಬಸ್‌ ಹತ್ತಲು ಪರದಾಡುವ ಸ್ಥಿತಿ ಉಂಟಾಗಿದೆ.

ಮಂಗಳೂರಿನಿಂದ ಮಣಿಪಾಲಕ್ಕೆ ಸಂಚರಿಸುವ ಕೆಲವು ಖಾಸಗಿ ಬಸ್‌ಗಳಲ್ಲಿರುವ ನಾಮ ಫಲಕಗಳನ್ನು ಗಮನಿಸಿ ಬಸ್‌ ಹತ್ತಿದರೆ ಪ್ರಯಾಣಿಕರು ಗೊಂದಲಕ್ಕೀಡಾಗುತ್ತಾರೆ. ಏಕೆಂದರೆ, ಕೆಲವೊಂದು ಖಾಸಗಿ ಬಸ್‌ಗಳು ನಾವು ಟಿಕೆಟ್‌ ತೆಗದ ಸ್ಥಳಕ್ಕೆ ಕ್ರಮಿಸುವುದೇ ಇಲ್ಲ. ಮಂಗಳೂರು-ಮಣಿಪಾಲ ಖಾಸಗಿ ಬಸ್‌ನಲ್ಲಿ ಮಣಿಪಾಲಕ್ಕೆ ನಿರ್ವಾಹಕರು ಟಿಕೆಟ್‌ ಕೊಟ್ಟರೂ ಮಾರ್ಗ ಮಧ್ಯೆ ಎಂದರೆ ಉಡುಪಿಯಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಮಣಿಪಾಲಕ್ಕೆ ಬೇರೆ ಬಸ್‌ನಲ್ಲಿ ತೆರಳಿ ಎನ್ನುತ್ತಾರೆ. ಕೆಲವೊಂದು ಬಾರಿ ಬಸ್‌ ನಿರ್ವಾಹಕರೇ ಮಣಿಪಾಲಕ್ಕೆ ತೆರಳುವ ಬೇರೆ ಬಸ್‌ ಗಳನ್ನು ಸಂಪರ್ಕಿಸಿ, ಪ್ರಯಾಣಿಕರನ್ನು ಕಳುಹಿಸಿದರೆ, ಇನ್ನೂ ಕೆಲವೊಮ್ಮೆ ಪ್ರಯಾಣಿಕನೇ ಬೇರೆ ಬಸ್‌ಗಳ ಕೈ ಹಿಡಿಯಬೇಕಾಗುತ್ತದೆ.

ಕೆಲವು ತಿಂಗಳ ಹಿಂದೆ ಬಸ್‌ ನಿಲ್ದಾಣಗಳಿಗೆ ತೆರಳಿ ಕನ್ನಡ ನಾಮಫಲಕ ಹೊಂದಿರದ ಖಾಸಗಿ ಬಸ್‌ಗಳ ಕಾರ್ಯಾಚರಣೆ ನಡೆಸಿದ್ದೆವು. ಅನಂತರ ಕಟ್ಟುನಿಟ್ಟಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಮಾಲಕರಿಗೆ ಸೂಚನೆ ನೀಡಿದ್ದೇವೆ. ಬಸ್‌ ಪರವಾನಿಗೆ ನೀಡುವ ಸಮಯದಲ್ಲಿ ಯಾವ ಮಾರ್ಗಗಳನ್ನುಸೂಚಿಸಲಾಗುತ್ತದೆಯೋ ಅಲ್ಲೇ ಕಡ್ಡಾಯವಾಗಿ ತೆರಳಬೇಕು. ಇಲ್ಲವಾದರೆ ಪ್ರಯಾಣಿಕರು ಆರ್‌ಟಿಒಗೆ ದೂರು ನೀಡಬಹುದು. ಕೂಡಲೇ ಕ್ರಮಕೈಗೊಳ್ಳಲಾಗುವುದು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English