ಮಣಿಪಾಲ: ಉಡುಪಿ ಪರಿಸರ ನರ್ಸರಿಗಳನ್ನು ಸ್ಥಾಪಿಸುವುದಕ್ಕೆ ಸೂಕ್ತವಾಗಿದೆ. ನರ್ಸರಿಯ ಜೊತೆ ಕಸಿ ಕಟ್ಟುವುದರ ಪರಿಜ್ಞಾನ ಹೊಂದಿದಲ್ಲಿ ಉತ್ತಮ ಆದಾಯ ಗಳಿಸಲು ಸಾಧ್ಯ. ಈ ಬಗ್ಗೆ ಯುವಕರು ಗಮನಹರಿಸಬೇಕು. ನಗರ ಪ್ರದೇಶದಲ್ಲಿ ಕೈತೋಟ ಬೆಳೆಸಲು ಅವಕಾಶ ಇರುವವರು ಮನೆಯಂಗಳದಲ್ಲಿ ಪಪ್ಪಾಯಿ, ಬಸಳೆ, ಹರಿವೆ, ಬೆಂಡೆ ಇತ್ಯಾದಿ ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದು ಹಾಗೂ ಇವುಗಳ ದಿನ ನಿತ್ಯ ಬಳಕೆಯಿಂದ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ ಎಂದು ಬ್ರಹ್ಮಾವರಕ ಕೃಷಿ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಹೇಳಿದ್ದಾರೆ.
ಮಣಿಪಾಲ ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ನಡೆದ ಒಂದು ದಿನದ ತರಕಾರಿ ಬೆಳೆಗಳ ಮಾಹಿತಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ವಿಶ್ವಸ್ಥ ಕೆ.ಎಂ.ಉಡುಪ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ತರಕಾರಿ ಬೆಳೆಗಳನ್ನು ಬೆಳೆಸುವಾಗ ಆಧುನಿಕ ಕೃಷಿ ಪದ್ಧತಿಯ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಉತ್ತಮ ಫಸಲನ್ನು ಪಡೆದು ಆದಾಯ ಹೆಚ್ಚಳ ಸಾಧ್ಯ ಎಂದರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀಬಾಯಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಬಿವಿಟಿ ಆಡಳಿತಾಧಿಕಾರಿ ಐ.ಜಿ.ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಧನಂಜಯ, ಡಾ. ಚೈತನ್ಯ, ಕೃಷಿ ತಜ್ಞ ವೈಕುಂಠ ಹೇರ್ಳೆ ಭಾಗವಹಿಸಿದ್ದರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀಬಾಯಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಬಿವಿಟಿ ಆಡಳಿತಾಧಿಕಾರಿ ಐ.ಜಿ.ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English