ಉಡುಪಿ : ಉಡುಪಿ ಶಾಸಕ ರಘುಪತಿ ಭಟ್ ಹತ್ತಿರದ ಸಂಬಂಧಿ ರೌಡಿ ಶೀಟರ್ ಹಿತೇಂದ್ರ ಪ್ರಸಾದ್ ಶಿಷ್ಯ ಮಣಿಪಾಲ ಸೆವೆನ್ತ್ ಆರ್‌ಸಿ ಹೆಸರಿನ ಇಸ್ಪೀಟ್ ಕ್ಲಬ್‌ನ ಮಾಲಕ ಗುರುಪ್ರಸಾದ್ ಭಟ್ (46) ಎಂಬವರನ್ನು ನಾಲ್ಕು ಜನರ ದುಷ್ಕರ್ಮಿಗಳ ತಂಡ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಂದು ಮಧ್ಯಾಹ್ನ ಭಾನುವಾರ ಮಧ್ಯಾಹ್ನ 12.30 ಕ್ಕೆ ನಡೆದಿದೆ.
ಪೆರಂಪಳ್ಳಿ ರಸ್ತೆಯ ಝೆಪ್ಟಾ ಲಾಂಗ್ ಕಟ್ಟಡದಲ್ಲಿರುವ ಸೆವೆನ್ತ್ ಹೆವೆನ್ ಹೊಟೇಲಿನ ಮೊದಲ ಮಹಡಿಯ ಈ ಇಸ್ಪೀಟ್ ಕ್ಲಬ್ಬ್ ಕಾರ್ಯಾಚರಿಸುತ್ತಿತ್ತು.
ಕೊಲೆಗೀಡಾದ ಗುರುಪ್ರಸಾದ್ ಭಟ್ (46) ಉಡುಪಿ ಪುತ್ತೂರು ಗ್ರಾಮ ಸುಬ್ರಹ್ಮಣ್ಯ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮೀಪದ ನಿವಾಸಿ ದಿ.ಶ್ರೀಧರ್ ಭಟ್ ಎಂಬವರ ಪುತ್ರ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಸುಜಿತ್ ಪಿಂಟೋ ಮತ್ತು ಆತನ ಸಹಚರರು ಗುರುಪ್ರಸಾದ್ ಭಟ್ ಇಸ್ಪೀಟ್ ಕ್ಲಬ್ಬ್ ಗೆ ಆಗಮಿಸಿ ಅವಚ್ಯಾ ಶಬ್ದಗಳಿಂದ ಬೈದು ಬೆದರಿಕೆ ಹಾಕಿತ್ತು.
ಗುರುಪ್ರಸಾದ್ ಹಲವು ಮಂದಿಯ ಜೊತೆ ಹಣಕಾಸು ವ್ಯವಹಾರ ಹೊಂದಿದ್ದು, ಇದೇ ಕಾರಣಕ್ಕೆ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆಂಬುದು ತಿಳಿದುಬಂದಿದೆ. ಗುರುಪ್ರಸಾದ್, ಹಲವು ಮಂದಿಯಿಂದ ಹಣ ಪಡೆದು ಹಿಂತಿರುಗಿಸದೆ ದ್ವೇಷ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಕಂಡ್ಲೂರು ಚೆಕ್‌ಪೋಸ್ಟ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕೊಡಂಕೂರು ನ್ಯೂ ಕಾಲನಿಯ ಪ್ರದೀಪ್ ಪೂಜಾರಿ (36), ಕಲ್ಯಾಣಪುರದ ಸುಜಿತ್ ಪಿಂಟೋ (35) ಹಾಗೂ ಕುಂಜಿಬೆಟ್ಟು ಕಕ್ಕುಂಜೆಯ ರಾಜೇಶ್ ಪೂಜಾರಿ (30) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬಿಳಿ ಬಣ್ಣದ ಟೂರಿಸ್ಟ್ ಒಮ್ನಿ ಕಾರಿನಲ್ಲಿ ಬಂದಿದ್ದರು. ಗುರುಪ್ರಸಾದ್ ಭಟ್‌ಗೆ ಹಲ್ಲೆ ನಡೆಸಿ ಕುತ್ತಿಗೆಯ ಹಿಂಭಾಗಕ್ಕೆ ಚೂರಿಯಿಂದ ಇರಿದು ಅದೇ ಕಾರಿನಲ್ಲಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡ ಗುರುಪ್ರಸಾದ್ ರನ್ನು ಅದೇ ಕಟ್ಟಡದಲ್ಲಿರುವ ಹೊಟೇಲಿನ ಅಡುಗೆ ಕೆಲಸ ಗಾರರು ಕೂಡಲೇ ಗುರುಪ್ರಸಾದ್‌ರ ಕಾರಿನಲ್ಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ರಕ್ತಸ್ರಾವದಿಂದ ಗುರು ಪ್ರಸಾದ್ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಗುರುಪ್ರಸಾದ್ ಭಟ್ ಹಾಯ್ ಮಾರುತ ಪತ್ರಿಕೆಯ ಹಿತೇಂದ್ರ ಪ್ರಸಾದ್ ಜೊತೆ ಗುರುತಿಸಿಕೊಂಡಿದ್ದರು. ಇವರು ‘ಸತ್ಯ ನ್ಯೂಸ್’ ಹಾಗೂ ‘ನಮ್ಮ ಉಡುಪಿ’ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದರು. ಮುಂದೆ ಕಾರ್ ಗ್ಯಾಸ್, ಇನ್ವೈಟರ್, ಸೈಬರ್, ಭೂವ್ಯವಹಾರ, ಮರದ ಕೆತ್ತನೆ ಫ್ಯಾಕ್ಟರಿ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸಿದ್ದರು. ಇತ್ತೀಚೆಗೆ ಮರದ ಕೆತ್ತನೆಯ ಫ್ಯಾಕ್ಟರಿಯನ್ನು ಮಾರಾಟ ಮಾಡಿದ್ದ ಗುರು ಭಟ್, 2018ರ ಮಾ.12ರಂದು ಈ ಇಸ್ಪೀಟ್ ಕ್ಲಬ್‌ನ್ನು ದಿನ ಬಾಡಿಗೆಗೆ ವಹಿಸಿಕೊಂಡಿದ್ದರು.
ಶನಿವಾರ ತಡರಾತ್ರಿವರೆಗೂ ಗೆಳೆಯರೊಂದಿಗೆ ಇಸ್ಪೀಟು ಆಟ ಆಡುತ್ತಿದ್ದ ಗುರುಪ್ರಸಾದ್ ನಸುಕಿನ ವೇಳೆ ಸುಮಾರು ಮೂರು ಗಂಟೆಗೆ ಗೆಳೆಯರೆಲ್ಲ ಮನೆಗೆ ಹೋದ ನಂತ ಗುರುಪ್ರಸಾದ್ ಕ್ಲಬ್‌ನಲ್ಲೇ ಮಲಗಿದ್ದರು. ಭಾನುವಾರ ಬೆಳಗ್ಗೆ 9ಗಂಟೆಗೆ ಅವರು ಮತ್ತೆ ಆಟದಲ್ಲಿ ತೊಡಗಿಸಿಕೊಂಡಿದ್ದರು. ಮಧ್ಯಾಹ್ನ 12ಗಂಟೆ ವೇಳೆಗೆ ಎಲ್ಲರೂ ಹೋದ ಬಳಿಕ ಕ್ಲಬ್‌ನ ಕೆಲಸದವರಾದ ಶಂಕರ ಹಾಗೂ ಜಯ ಅವರೊಂದಿಗೆ ಕ್ಲಬ್‌ನಲ್ಲೇ ಇದ್ದರು. ಇದೇ ಸಮಯ ಬಳಸಿಕೊಂಡು ದುಷ್ಕರ್ಮಿ ಗಳು ಕೊಲೆ ಮಾಡಿದ್ದಾರೆ. ಕೊಲೆ ಮಾಡುವ ವೇಳೆ ಕೆಲಸದವರಿಬ್ಬರು ಭೀತಿಯಿಂದ ಅಲ್ಲಿಂದ ಓಡಿ ಹೋಗಿದ್ದರು.
ಈ ಕಟ್ಟಡದಲ್ಲಿ ಸೆವೆನ್ ಹೆವೆನ್ ಬಾರ್, ಹೊಟೇಲು, ಪಬ್, ಲಾಡ್ಜಿಂಗ್, ಕ್ಲಬ್‌ಗಳಿದ್ದು, ಪ್ರತಿಯೊಂದು ಕಡೆಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ ಕೊಲೆ ನಡೆದ ಕ್ಲಬ್‌ನಲ್ಲಿಯೂ ಸುಮಾರು ಐದು ಸಿಸಿ ಕ್ಯಾಮೆರಾಗಳಿವೆ.
ದುಷ್ಕರ್ಮಿಗಳು ಬಂದ ಬಿಳಿಬಣ್ಣ ಓಮ್ನಿ ಕಾರು, ಅದರ ನಂಬರ್ ಲಾಡ್ಜ್ ಹೊರಭಾಗದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದರೆ, ಕ್ಲಬ್ ಒಳಗಿನ ಸಿಸಿ ಕ್ಯಾಮೆರಾದಲ್ಲಿ ನಾಲ್ವರು ದುಷ್ಕರ್ಮಿಗಳು ಗುರುಪ್ರಸಾದ್ ಭಟ್‌ಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿಯುವ ಹಾಗೂ ಮೂವರು ಗುರು ಪ್ರಸಾದ್ ಭಟ್‌ರನ್ನು ಮೊಣಕಾಲಿನಲ್ಲಿ ಕುಳ್ಳಿರಿಸಿ ಕುತ್ತಿಗೆಯನ್ನು ಬಗ್ಗಿಸಿ, ಓರ್ವ ಚೂರಿಯಿಂದ ಅವರ ಕುತ್ತಿಗೆಯ ಹಿಂಭಾಗಕ್ಕೆ ಬಲವಾಗಿ ಇರಿಯುವ ದೃಶ್ಯ ಕೂಡ ದಾಖಲಾಗಿದೆ.
ಕಟ್ಟಡ ಹಾಗೂ ಕ್ಲಬ್‌ನ ಸಿಸಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿದರು. ಅಲ್ಲದೆ ನಿನ್ನೆ ರಾತ್ರಿ ಬೆದರಿಕೆ ಕರೆ ಬಂದಿರುವ ಗುರುಪ್ರಸಾದ್ ಭಟ್ ಮೊಬೈಲ್‌ನ್ನು ಕೂಡ ಪೊಲೀಸರು ವಶಪಡಿಸಿಕೊಂಡು, ಅದರಲ್ಲಿನ ಕಾಲ್‌ರೆಕಾರ್ಡ್‌ಗಳನ್ನು ಕೂಡ ಆಲಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚಣೆ ನಡೆಸಿದ್ದರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಮಣಿಪಾಲ ನಿರೀಕ್ಷಕ ಸುದರ್ಶನ್, ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಆಸ್ಪತ್ರೆಯ ಶವಗಾರಕ್ಕೆ ಆಗಮಿಸಿದ ಶಾಸಕ ರಘುಪತಿ ಭಟ್ ಮಾಧ್ಯಮದವರೊಂದಿಗೆ ಮಾತನಾಡಿ, ಮೃತ ಗುರು ಭಟ್ ನಮ್ಮ ಸಂಬಂಧಿಕರಾಗಿದ್ದರೂ ನಮ್ಮ ಕುಟುಂಬದೊಂದಿಗೆ ಅವರ ವ್ಯವಹಾರದ ಬಗ್ಗೆ ಮಾತನಾಡುತ್ತಿರಲಿಲ್ಲ. ಇದೆಲ್ಲ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ ಎಂದರು.
ಮೃತ ಗುರುಪ್ರಸಾದ್ ಭಟ್ ಗೆ ಇಬ್ಬರು ಪುತ್ರಿಯರಿದ್ದು ಒಬ್ಬಳು ಪ್ರಥಮ ಪಿಯುಸಿ ಇನ್ನೊಬ್ಬಳು ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಪತ್ನಿ ಮನೆಯ್ಲಲಿಯೇ ಕೆಲಸ ಮಾಡುತ್ತಿದ್ದರು.
Click this button or press Ctrl+G to toggle between Kannada and English