‘ರಘರಾಮಾಭಿನಂದನಮ್’ ಯಕ್ಷಗಾನ ಸಂಮಾನ ಕಾರ್ಯಕ್ರಮ ಉದ್ಘಾಟನೆ

12:58 PM, Saturday, July 6th, 2013
Share
1 Star2 Stars3 Stars4 Stars5 Stars
(No Ratings Yet)
Loading...

Ragghurambhinandanamಮಂಗಳೂರು : ರಘರಾಮಾಭಿನಂದನಮ್ ಸಂಮಾನ ಸಮಿತಿಯ ವತಿಯಿಂದ ಮಂಗಳೂರು ಪುರಭವನದಲ್ಲಿ ಜುಲೈ 5 ರಿಂದ 7ರವರೆಗೆ ನಡೆಯುವ ರಘರಾಮಾಭಿನಂದನಮ್ ಕಾರ್ಯಕ್ರಮವನ್ನು ಎಡನೀರು ಸಂಸ್ಥಾನದ ಶ್ರೀ ಶ್ರೀ ಕೇಶವಾನಂದಭಾರತೀ ತೀರ್ಥರು ಹಾಗೂ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಯಕ್ಷಗಾನರಂಗದಲ್ಲಿ ಮೂರು ದಶಕಗಳ ಸೇವೆಗೈದ ಪುತ್ತಿಗೆ ರಘುರಾಮಹೊಳ್ಳರ ಸಾಧನೆಯ ಅವಲೋಕನ ಈ ಮೂರು ದಿನಗಳಲ್ಲಿ ನಡೆಯಲಿದೆ.

Raghurambhinandanamಉದ್ಘಾಟನೆಯ ಬಳಿಕ ಮಾತನಾಡಿದ ಪೇಜಾವರ ಶ್ರೀಗಳು ಕಲಾಭಿರುಚಿಯಿಂದ ಮನುಷ್ಯ ಆಯುಶ್ಯ ವೃದ್ಧಿಸಲು ಸಾಧ್ಯ. ಹೊಳ್ಳರ ಮೂರು ದಶಕಗಳ ಪರಿಶ್ರಮದಲ್ಲಿ ಅವರು ತನ್ನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಅವರಿಗಾಗಿ ಇಲ್ಲಿ ನಡೆಯುತ್ತಿರುವ ಕಾರ್ಯ ಸಮಂಜಸವಾದದ್ದು ಎಂದು ಶ್ರೀಗಳು ತಮ್ಮ ಆಶೀರ್ವಚನ ನುಡಿಗಳಲ್ಲಿ ಹೇಳಿದರು.

ರಘರಾಮಾಭಿನಂದನಮ್ ಸಂಮಾನ ಸಂಪುಟ ಬಿಡುಗಡೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ನೆರವೇರಿಸಿದರು.

Raghurambhinandanamಯಕ್ಷಗಾನ ಬಯಲಾಟ ಅಕಾಡೆಮೆಯ ಅಧ್ಯಕ್ಷ ಪ್ರೋ. ಎಂ.ಎಲ್. ಸಾಮಗ ಕಾರ್ಯಕ್ರಮದ ಅಧಕ್ಷತೆಯನ್ನು ವಹಿಸಿದ್ದರು.

ಎಡನೀರು ಸಂಸ್ಥಾನ ಶ್ರೀ ಶ್ರೀ ಕೇಶವಾನಂದಭಾರತೀ ತೀರ್ಥರು ಆಶೀರ್ವಚನವಿತ್ತರು.

ಕನ್ನಡ ರಾಜ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಶುಭಾಂಸನೆ ಗೈದರು. ಅಭಿನಂದನಾ ಗ್ರಂಥದ ಬಗ್ಗೆ ಸಂ ಪುಟದ ಸಂಪಾದಕ ಉಜಿರೆ ಅಶೋಕ ಭಟ್ಟ ಹಾಗೂ ಸರವು ಕೃಷ್ಣ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದ ಕೇಂದ್ರ ಬಿಂದು ಭಾಗವತ ಪುತ್ತಿಗೆ ರಘರಾಮ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆ ಹಿರಣ್ಯ ವೆಂಕಟೇಶ್ವರ ಭಟ್ಟ, ಸ್ವಾಗತ, ಭಾಸ್ಕರ ರೈ ಕುಕ್ಕುವಳ್ಳಿ. ಧನ್ಯವಾದ, ರವಿಅಲೆವೂರಾಯರಿಂದ ನಡೆಯಿತು

ರಘರಾಮಾಭಿನಂದನಮ್ ಕಾರ್ಯಕ್ರಮ ಜಲೈ 7 ರಂದು ಕೊನೆಗಳ್ಳಲಿದೆ.

Raghurambhinandanam

Raghurambhinandanam

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English