ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಭಾಗ್ ಮಿಲ್ಖಾ ಭಾಗ್ ಚಲನಚಿತ್ರದ ಪ್ರದರ್ಶನವನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ಭಾನುವಾರ ಪ್ರತಿಭಟನೆ ನಡೆಯಿತು.
ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಹಾಡನ್ನು ಒಳಗೊಂಡಿರುವ ಭಾಗ್ ಮಿಲ್ಖಾ ಭಾಗ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡಿದೆ. ಇದರಲ್ಲಿ ಹಿಂದೂ ಧರ್ಮದ ಹವನದ ವಿಧಿಯನ್ನು ಭಯಾನಕ ಕೃತ್ಯದೊಂದಿಗೆ ಸೇರಿಸಲಾಗಿದ್ದು, ಚಲನಚಿತ್ರ ಮಂಡಳಿಯು ಈ ಸಿನಿಮಾವನ್ನು ಕೂಡಲೇ ರದ್ದುಗೊಳಿಸಬೇಕು ಇಲ್ಲವೇ ಈ ಹಾಡನ್ನು ಸಿನಿಮಾದಿಂದ ತೆಗೆದುಬಿಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಹರ್ಷವರ್ಧನ್ ಶೆಟ್ಟಿ ಪ್ರತಿಭಟನೆಯಲ್ಲಿ ತಿಳಿಸಿದರು.
ಪತ್ರಿಭಟನೆಯಲ್ಲಿ ಸಂಗೀತ ಪ್ರಭು, ಪ್ರಸನ್ನ ಕಾಮತ್, ಜಗದೀಶ್ ಶೆಟ್ಟಿ, ಡಾ.ಜ್ಞಾನೇಶ್ವರ್, ಪ್ರವೀಣ್ ಮೂಡಿಗೆರೆ, ವಿಜಯ ಲಕ್ಷ್ಮೀ ಮುಂತಾದವರು ಭಾಗವಹಿಸಿದರು.ಮ
Click this button or press Ctrl+G to toggle between Kannada and English