ರೋಶನಿ ನಿಲಯದಲ್ಲಿ ಎನ್.ಎಸ್.ಎಸ್ ಘಟಕದ ವನಮಹೋತ್ಸವ ಮತ್ತು ವಾರ್ಷಿಕ ಕಾರ್ಯಕ್ರಮಗಳಿಗೆ ಚಾಲನೆ

7:47 PM, Monday, July 8th, 2013
Share
1 Star2 Stars3 Stars4 Stars5 Stars
(No Ratings Yet)
Loading...

Roshani Nilaya NSS Programmeಮಂಗಳೂರು : ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಮಂಗಳೂರು ಇದರ ರಾಷ್ಟ್ರೀಯ ಸೇವಾ ಯೋಜನೆ, ಎನ್.ಎಸ್.ಎಸ್ ಘಟಕದ ವತಿಯಿಂದ 2013-14ನೇ ಸಾಲಿನ ವಾರ್ಷಿಕ ಯೋಜನೆಗಳ ಉದ್ಘಾಟನೆ ಮತ್ತು ವನಮಹೋತ್ಸವ ಆಚರಣೆ ಜುಲೈ 8, ಸೋಮವಾರ ಮರಿಯಾ ಪೈವಾ ಕುಸೇರಿಯೋ ಸಭಾಂಗಣ, ರೋಶನಿ ನಿಲಯ, ಮಂಗಳೂರು ಇಲ್ಲಿ ನಡೆಯಿತು.

ಜಿಲ್ಲಾ ಉಸ್ತುವಾರಿ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ ವನಮಹೋತ್ಸವ ಮತ್ತು ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನಾನು ವಿದ್ಯಾರ್ಥಿಯಾಗಿದ್ದಾಗ ಶಿಸ್ತು ಮತ್ತು ಜೀವನವನ್ನು ಕಲಿತಿದ್ದು ಎನ್.ಎಸ್.ಎಸ್ ಕಾರ್ಯಕ್ರಮಗಳಿಂದ. ಅದು ನನಗೆ ಈಗಲೂ ನನ್ನ ಜೀವನ ಶೈಲಿಯಲ್ಲಿ ನಿರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.

Roshani Nilaya NSS Programmeಮಂಗಳೂರು ದಕ್ಷಿಣ ವಿಧಾನ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮತ್ತು ಘಟಕದ ಗೃಹ ಪತ್ರಿಕೆಗೆ ಚಾಲನೆ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಂಡ ಶಿಸ್ತು, ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತದೆ. ಶಾಲೆಗಳಲ್ಲಿ ವನಮಹೋತ್ಸವಗಳನ್ನು ಆಚರಿಸುವುದು ಭವಿಷ್ಯದ ಸ್ವಚ್ಚ ಸಮಾಜ ನಿರ್ಮಾಣಕ್ಕೆ ಕೈಗನ್ನಡಿ ಎಂದು ಹೇಳಿದರು.

ದಿಕ್ಸೂಚಿ ಭಾಷಣವನ್ನು ಧರ್ಮಸ್ಥಳ ಮಂಜುನಾಥ ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿ ಡಾ. ಬಿ.ಎ. ಕುಮಾರ ಹೆಗ್ಡೆ ನಿರ್ವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಶನಿ ನಿಲಯದ ಪ್ರಾಂಶುಪಾಲೆ ಡಾ. ಸೋಫಿಯಾ ಎನ್. ಫೆರ್ನಾಂಡೀಸ್ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಡಾ. ಲಕ್ಷ್ಮೀನಾರಾಯಣ ಭಟ್, ಪ್ರೋ. ವಿನೀತಾ ಕೆ. ಬಾಗವಹಿಸಿದ್ದರು.

ಡಾ.ಮಾಧವ, ಪ್ರಕಾಶ್ ಕೆ. ಐಶ್ವರ್ಯ ಜೆ.ಎಸ್ ಮುಂತಾದವರು ಉಪಸ್ಥಿತರಿದ್ದರು.

Roshani Nilaya NSS Programme

Roshani Nilaya NSS Programme

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English