ಮಂಗಳೂರು: ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಪ್ರಪ್ರಥಮ ಬಾರಿಗೆ ಚರ್ಮದ ಕ್ಯಾನ್ಸರ್ ಗೆ ಎಲೆಕ್ಟ್ರಾನ್ ಥೆರಪಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.
78 ವರ್ಷದ ಮಹಿಳೆಯೋರ್ವರು ಒಂದು ವರ್ಷದಿಂದ ಕತ್ತಿನ ಭಾಗದಲ್ಲಿ ಹುಣ್ಣಿನಿಂದ ಕೂಡಿದ ಕಲೆಯಿಂದ ಬಳಲುತ್ತಿದ್ದರು. ಈ ಹುಣ್ಣು ಗುಣವಾಗುತ್ತಿರಲಿಲ್ಲ ಹಾಗೂ ಕಲೆಯು ದಿನದಿಂದ ದಿನಕ್ಕೆ ಬೆಳೆಯುತ್ತಿತ್ತು. ರೋಗಿಯು ಎ.ಜೆ. ಆಸ್ಪತ್ರೆಗೆ ಬಂದಾಗ ಈ ಕಲೆಯು ಅನಿರ್ದಿಷ್ಟ ಆಕಾರವನ್ನು ಹೊಂದಿದ್ದು, 3×3ಸೆ.ಮೀ.ನಷ್ಟು ದೊಡ್ಡದಾಗಿತ್ತು. ಈ ರೋಗಿಗೆ ಎಲೆಕ್ಟ್ರಾನ್ ಚಿಕಿತ್ಸೆಯನ್ನು ಸೂಚಿಸಿ 8 MeVಎಲೆಕ್ಟ್ರಾನ್ ಚಿಕಿತ್ಸೆಯನ್ನು ಇದೇ ಮೇ ತಿಂಗಳ 27ರಂದು ನೀಡಲಾಯಿತು. ಚಿಕಿತ್ಸೆಯಿಂದ ರೋಗಿಯು ಸಂಪೂರ್ಣ ಗುಣಮುಖ ಹೊಂದಿದ್ದು, ಗಾಯದ ಗಾತ್ರವು ಕುಗ್ಗಿದ್ದು ರೇಡಿಯೇಶನ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದೆ. ರೋಗಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ಚೇತರಿಸಿ ಕೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಕೆ. ಇಂದು ಪ್ರೆಸ್ ಕ್ಲಬ್ಬಿ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಸ್ತ್ರ ಇಕಿತ್ಸೆಯಿಂದ ಗಾಯದ ಗುರುತು ಮತ್ತು ಚರ್ಮವು ವಿಕಾರಗೊಳ್ಳುವುದರಿಂದ ಹೈ ಎಂಡ್ ಲೀನಿಯರ್ ಎಕ್ಸಿಲರೇಟರ್ ಉತ್ಪಾದಿಸುವ ಎಲೆಕ್ಟ್ರಾನ್ ಗಳ ಮೂಲಕ ಇಂತಹ ಗಡ್ಡೆಗಳನ್ನು ಯಶಸ್ವಿಯಾಗಿ ಚಿಕಿತ್ಸೆಗೊಳಪಡಿಸಬಹುದು ಎಂದು ಪ್ರಶಾಂತ್ ಮಾರ್ಲ ಹೇಳಿದರು.
ಎ.ಜೆ. ಆಸ್ಪತ್ರೆಯ ಕ್ಯಾನ್ಸರ್ ಇನ್ಸಿ ಸ್ಟಿಟ್ಯೂಟ್ ನ ರೇಡಿಯೇಶನ್ ವಿಭಾಗದಲ್ಲಿ ಅಳವಡಿಸಲಾಗಿರುವ ಆರು ಶಕ್ತಿಯ ಎಲೆಕ್ಟ್ರಾನ್ ಚಿಕಿತ್ಸೆ ಚರ್ಮದಲ್ಲಿ ಕಂಡುಬರುವ ಸೂಪರ್ ಫೀಶಿಯಲ್ ಟ್ಯೂಮರ್ ಗಳಾದ ವಿವಿಧ ಗಾತ್ರದ ಕ್ಯಾನ್ಸರನ್ನು ಚಿಕಿತ್ಸಿಸುವಲ್ಲಿ ಪರಿಣಾಮಕಾರಿ. ಗಡ್ಡೆಯ ಗಾತ್ರಕ್ಕೆ ಅನುಗುಣವಾಗಿ ಎಲೆಕ್ಟ್ರಾನ್ ಶಕ್ತಿಯನ್ನು ಆಯ್ದುಕೊಳ್ಳುವ ಮೂಲಕ ಎಲೆಕ್ಟ್ರಾನ್ ಕೋನಿನ ಸಹಾಯದಿಂದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಲೀಡ್ ಕಟ್ ಔಟ್ ಮೂಲಕ ಕ್ಯಾನ್ಸರ್ ರಹಿತ ಕೋಶಗಳನ್ನು ಹಾನಿಗೊಳ್ಳದಂತೆ ಸಂರಕ್ಷಿಸಲಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಪ್ರಸಾದ್ ಶೆಟ್ಟಿ, ಭಾಸ್ಕರ್ ಅರಸ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English