ನಿವೃತ್ತ ಸೈನಿಕನ ಪತ್ನಿ ತನ್ನ ಮಗಳನ್ನು ಬಾವಿಗೆ ಎಸೆದು ತಾನು ಆತ್ಮಹತ್ಯೆ !

4:22 PM, Thursday, July 11th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Bantwal Deathಬಂಟ್ವಾಳ:  ನಿವೃತ್ತ ಸೈನಿಕ ನವೀನ್ ಚಂದ್ರ ಎಂಬವರ ಪತ್ನಿ ಪ್ರತಿಮಾ(32) ತನ್ನ ಮಗಳು ದಿಯಾ(9) ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಂಟ್ವಾಳ ಸಮೀಪದ ಮೆಲ್ಕಾರ್ ಎಂಬಲ್ಲಿ ನಡೆದಿದೆ.

ಗುರುವಾರ ಮುಂಜಾನೆ ಈರ್ವರ ಶವ  ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ, ಕೌಟುಂಬಿಕ ವಿರಸದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆಯಾದರೂ, ಸ್ಪಷ್ಟ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಮೆಲ್ಕಾರ್ ನಲ್ಲಿ ವಾಸ್ತವ್ಯ ವಿರುವ ಪ್ರತಿಮಾ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗಳು ದಿಯಾ ಪಾಣೆಮಂಗಳೂರು ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಳು.

ಬುಧವಾರ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಪ್ರತಿಮಾ  ಸಂಜೆ ಮನೆಗೆ ಬಂದ ಬಳಿಕ ಆತ್ಮಹತ್ಯೆ ನಿರ್ಧಾರ ಕೈಗೊಂಡಿರಬಹುದೆಂದು ಶಂಕಿಸಲಾಗಿದೆ. ಗುರುವಾರ ಮುಂಜಾನೆ ಮನೆಯ ಬಾವಿಯಲ್ಲಿಯೇ ಇವರಿಬ್ಬರ ಶವ ಪತ್ತೆಯಾಗಿದೆ.

ಶವವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಮಹಜರು ನಡೆಸಲಾಗಿದೆ. ಘಟನೆ ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಜನ ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂದೆ ನೆರೆದಿದ್ದರು. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English