ಗ್ರಾಮಾಂತರ ರಿಕ್ಷಾಗಳ ನಗರ ಪ್ರವೇಶ ವಿರೋಧಿಸಿ ವಿವಿಧ ರಿಕ್ಷಾ ಸಂಘಟನೆಗಳಿಂದ ಪ್ರತಿಭಟನೆ

5:52 PM, Friday, July 12th, 2013
Share
1 Star2 Stars3 Stars4 Stars5 Stars
(0 rating, 5 votes)
Loading...

auto drivers protestಮಂಗಳೂರು: ಗ್ರಾಮಾಂತರ ರಿಕ್ಷಾಗಳು ಮಂಗಳೂರು ನಗರವನ್ನು ಪ್ರವೇಶಿಸುವುದನ್ನು ವಿರೋಧಿಸಿ ಮಂಗಳೂರಿನ ವಿವಿಧ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಜ್ಯೊತಿ ವೃತ್ತ ದಿಂದ ಮೆರವಣಿಗೆ ಮೂಲಕ ಬಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ದ.ಕ ಜಿಲ್ಲಾ ಆಟೋರಿಕ್ಷಾ ಸಮನ್ವಯ ಸಮಿತಿಯ ಅಧ್ಯಕ್ಷರಾದ ಅಲಿಹಸನ್ ಮಾತನಾಡಿ,  ಗ್ರಾಮಾಂತರ ರಿಕ್ಷಾಗಳು ಕಾನೂನು ಬಾಹಿರವಾಗಿ ನಗರದೊಳಗೆ ಪ್ರವೇಶಿಸಿ ಬಾಡಿಗೆ ಮಾಡುತ್ತಿದೆ.  ಗ್ರಾಮದಲ್ಲಿ ಸುಮಾರು 20  ಸಾವಿರ ರಿಕ್ಷಾಗಳು ಒಡಾಡುತ್ತಿವೆ. ಗ್ರಾಮದ ರಿಕ್ಷಾವನ್ನು ನಗರಕ್ಕೆ ತಂದು ಬಾಡಿಗೆ ಮಾಡುತ್ತಿದ್ದಾರೆ.  ಅನಾಹುತದ ಸಂದರ್ಭದಲ್ಲಿ, ಇಲ್ಲವೇ ಆರ್.ಟಿ.ಓ ಕಚೇರಿಗೆ ಸಂಬಂಧಿಸಿದ ಕೆಲಸಕಾರ್ಯಗಳಿದ್ದಲ್ಲಿ  ಮಾತ್ರ ಬರಲು ಅವಕಾಶವಿದ್ದು, ಬಾಡಿಗೆಗೆಂದು ಇಲ್ಲಿ ಬರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹಸನ್ ಹೇಳಿದರು.

ಗ್ರಾಮೀಣ ಆಟೋರಿಕ್ಷಾಗಳಿಗೆ 1997 ರಲ್ಲಿ ನಗರ ಪ್ರವೇಶ  ನಿರ್ಭಂದ ಹೇರಿ ಪರ್ಮಿಟ್ ನೀಡಲಾಗಿತ್ತು. ಬಳಿಕ ಗ್ರಾಮಾಂತರ ಪ್ರದೇಶಗಳ ಜನರ ಒತ್ತಡಗಳಿಂದಾಗಿ ಗ್ರಾಮಾಂತರದಲ್ಲಿ ಮಾತ್ರ ಓಡಾಡಬೇಕೆಂಬ ಶರತ್ತಿನೊಂದಿಗೆ 1998 ರ ನಂತರ ಪರ್ಮಿಟ್ ಗಳನ್ನು ನವೀಕರಿಸಿ ನೀಡಲಾಯಿತು. ಆದರೂ ಗ್ರಾಮೀಣ ಆಟೋರಿಕ್ಷಾಗಳು ನಿರಂತರವಾಗಿ ನಗರದಲ್ಲಿ ಓಡಾಡುತ್ತಿವೆ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

auto drivers protestದ.ಕ. ಜಿಲ್ಲಾ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ, ಕಳೆದ ಎಂಟು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ನಿಯಮಗಳನ್ನು ಉಲ್ಲಂಘಿಸಿ, ಸಾರಿಗೆ ಇಲಾಖೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಈಗಾಗಲೇ ನಗರದಲ್ಲಿ ಗರಿಷ್ಟ ಸಂಚಾರ ದಟ್ಟಣೆಯಿದ್ದು, ಇದರ ನಂತರ ಹದಿಮೂರು ಸಾವಿರದಿಂದ ಇಪ್ಪತ್ತು ಸಾವಿರ ರಿಕ್ಷಾಗಳು ನಗರಕ್ಕೆ ಬಂದರೆ ನಗರದಲ್ಲಿ ಸಂಚಾರಿಸುವುದು ಹೇಗೆ? ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಮೊದಲು ಇದ್ದ ನಿಯಮಗಳನ್ನೇ ಅನುಸರಿಸಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಎಚ್.ಎಮ್.ಎಸ್ ನ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅರುಣ್ ಕುಮಾರ್, ಸುರತ್ಕಲ್ ರಿಕ್ಷಾ ಸಂಘದ ಅಧ್ಯಕ್ಷ ಅಬೂಬಕ್ಕರ್ ಸುರತ್ಕಲ್, ಹಾಗೂ ಇತರ ರಿಕ್ಷಾ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

auto drivers protest

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English