ಹಡಗು ಅಪಹರಣ : 24 ಮಂದಿ ಭಾರತೀಯರ ಜೊತೆ ಕಾಸರಗೋಡಿನ ಇಬ್ಬರಿಗೆ ದಿಗ್ಬಂಧನ

6:38 PM, Thursday, July 18th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

Somaliyaಕಾಸರಗೋಡು:  ಸೋಮವಾರ, ಜುಲೈ 15 ರಂದು ಗೆಂಟಿಲ್ ಪೋರ್ಟ್ ನಿಂದ 15 ನ್ಯುಟ್ರಿಕಲ್ ಮೈಲಿ ದೂರದಲ್ಲಿ ಸೊಮಾಲಿಯಾದ ಕಡಲ್ಗಳ್ಳರಿಂದ ಅಪರಿಸಲ್ಪಟ್ಟಿರುವ ಎಂ.ವಿ.ಕೋಟನ್ ಹಡಗಿನಲ್ಲಿ 24 ಮಂದಿ ಭಾರತೀಯರಿದ್ದರು.

ಹಡಗು ಅಪಹರಣಕಾರರ ಹೋತೋಟಿಯಲ್ಲಿದ್ದು ನೌಕರರಿಗೆ ದಿಗ್ಬಂಧನ ಹೇರಲಾಗಿದೆ, ರವಿವಾರದಿಂದ ಹಡಗು ಸಂಪರ್ಕ ಕಡಿದುಕೊಂಡಿದೆ ಅಪಹರಣಕಾರರು ಹಡಗನ್ನು ನೈಜೀರಿಯಾದ ಕಡೆ ಕೊಂಡೊಯ್ಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಹೃತ ಹಡಗಿನಲ್ಲಿ ಇಬ್ಬರು ಕಾಸರಗೋಡಿನವರಿದ್ದಾರೆ. ಕೆಲವು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ಕಳನಾಡು ನಿವಾಸಿ ವಸಂತ ಕುಮಾರ್(35) ಮತ್ತು ಪಾಲಕುನ್ನು ನಿವಾಸಿ ಬಾಬು(32) ಅವರು  ಹಡಗಿನಲ್ಲಿದ್ದಾರೆ. ವಸಂತ್ ಕುಮಾರ್ ಜನವರಿಯ ಮತ್ತು ಬಾಬು ಎಪ್ರಿಲ್ ನಲ್ಲಿ ಕೆಲಸಕ್ಕೆ ಸೇರಿದ್ದರು. ಎರಡು ವಾರಗಳ ಹಿಂದೆ ಮುಂಬಯಿಗೆ ಬಂದಿದ್ದ ವಸಂತ್ ಕುಮಾರ್ ಅಲ್ಲಿಂದ ಆಫ್ರಿಕಾಕ್ಕೆ ತೆರಳುತ್ತೇನೆಂದು ಮನೆಯವರಿಗೆ ಕರೆ ಮಾಡಿದ್ದರು. ಆದರೆ ಜುಲೈ 10ರ ಬಳಿಕ ಯಾವುದೇ ಕರೆ ಬಂದಿಲ್ಲ ಎಂದು ಹೇಳಿದ್ದಾರೆ.

ಹಡಗನ್ನು ಅಪಹರಣಕಾರರಿಂದ ಬಿಡಿಸಲು ಟರ್ಕಿ ಸೇನೆ ಕಾರ್ಯಾಚರಣೆಗಿಳಿದಿದೆ. ಟರ್ಕಿ ರಾಯಭಾರಿಗಳು ಈ ಬಗ್ಗೆ ಮಾತುಕತೆ ನಡೆಸಿ ಪ್ರಕರಣವನ್ನು ಬಗೆಹರಿಸಲು ಮುಂದೆ ಬಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English