ಪಿಸಿ ಮಲ್ಲಪ್ಪ ಆ್ಯಂಡ್ ಕಂಪನಿಗೆ ನುಗ್ಗಿದ ಕಳ್ಳರು, ನಗದು ಮತ್ತು ಸ್ಯಾನಿಟರಿ ವಸ್ತುಗಳ ಲೂಟಿ

12:35 AM, Saturday, July 20th, 2013
Share
1 Star2 Stars3 Stars4 Stars5 Stars
(5 rating, 3 votes)
Loading...

 PC Mallappa &Coಮಂಗಳೂರು: ಪಳ್ನೀರ್ ನ ಹೈಲ್ಯಾಂಡ್ ಆಸ್ಪತ್ರೆ ಸಮೀಪವಿರುವ ಪಿಸಿ ಮಲ್ಲಪ್ಪ ಆ್ಯಂಡ್ ಕಂಪನಿ ಯಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು. ಸುಮಾರು  50 ಸಾವಿರ ರೂ. ನಗದು ಮತ್ತು ಸ್ಯಾನಿಟರಿವೇರ್ ನ ಹಲವಾರು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ಶೋರೂಮ್ ನ ಮುಂದಿನ ಶಟರ್ ನ್ನು ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ. ಬೆಲೆಬಾಳುವ ಜಾಕ್ವರ್ ವಾಲ್ ಮಿಕ್ಸರ್ ತ್ರೀ ಇನ್ ವನ್ ನ  ಬಾಕ್ಸ್ ಗಳು ಹಾಗೂ 50 ಸಾವಿರ ರೂ. ನಗದನ್ನು ಕಳ್ಳತನ ಮಾಡಲಾಗಿದೆ.

ಜಾಕ್ವರ್ ವಾಲ್ ಮಿಕ್ಸರ್ ನ ಪ್ರತೀ ಬಾಕ್ಸ್ ಗೆ ಸುಮಾರು 3000 ರೂ. ಬೆಲೆಯಿದೆ. ಇದರ ಹಲವಾರು ಬಾಕ್ಸ್ ಗಳನ್ನು ಕಳ್ಳರು ಲಪಟಾಯಿಸಿದ್ದಾರೆ.

ಶೋರೂಮ್ ನಲ್ಲಿ ಸುಮಾರು 15 ಸಿಸಿ ಕ್ಯಾಮಾರಗಳಿವೆ. ಆದರೆ ಹಿಂದಿನ ದಿನ ರಾತ್ರಿ ಈ ಸಿಸಿ ಕ್ಯಾಮಾರಗಳ ಮೈನ್ ಸ್ವಿಚ್ ನ್ನು ಆಫ್ ಮಾಡಲಾಗಿತ್ತು ಎಂದು ಶೋ ರೂಮ್ ನ ಮ್ಯಾನೇಜರ್ ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 PC Mallappa &Co

 PC Mallappa &Co

 PC Mallappa &Co

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English