ಜಿಲ್ಲೆಯ ವಿವಿಧ ದೇವಸ್ಥಾನಗಳಿಂದ ಕದ್ದ 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಶ

12:59 AM, Saturday, July 20th, 2013
Share
1 Star2 Stars3 Stars4 Stars5 Stars
(4 rating, 8 votes)
Loading...

six temple thievesಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ದೇವಸ್ಥಾನ ಹಾಗೂ ಬಸದಿಗಳಲ್ಲಿ ದರೋಡೆ ನಡೆಸಿದ್ದ ಕಳ್ಳರ ತಂಡವನ್ನು ಬಂಟ್ವಾಳ ಪೊಲೀಸರು ಬಂಧಿಸಿ, ಅವರಲ್ಲಿದ್ದ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ಪ್ರಾಚೀನ ಜೈನ ತೀರ್ಥಂಕರ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಂದು ಅವರ ಕಚೇರಿಯಲ್ಲಿ ಜುಲೈ 19ರಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಬಂಟ್ವಾಳ ಪೊಲೀಸರು  ಜೂನ್ 12ರಂದು ವಾಹನ ತಪಾಸಣೆ ಮಾಡುತ್ತಿದ್ದಾಗ ಕೆಎ-19-ಬಿ-9116 ನಂಬರಿನ ಕಾರು ಪೊಲೀಸರ ಸೂಚನೆಯನ್ನು ಉಲ್ಲಂಘಿಸಿ ಮುಂದೆಹೋಯಿತು.  ಬಂಟ್ವಾಳ ಕಡೆಗೆ ಬರುತ್ತಿದ್ದ ಆ ಕಾರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ತಡೆದು ನಿಲ್ಲಿಸಿ ಕಾರಿನಲ್ಲಿದ್ದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು. ವಿಚಾರಣೆಯ ವೇಳೆಯಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದು ಗೋಯಲ್ ತಿಳಿಸಿದ್ದಾರೆ.

six temple thievesಚಿಕ್ಕಮಗಳೂರಿನ ತಿಮ್ಮಯ್ಯ(55), ಹಾಸನ ಜಿಲ್ಲೆಯ ಕುವೆಂಪು ನಗರದ ಜಯರಾಜ್ ಸ್ವಾಮಿ(45) ಅರಸಿಕೆರೆಯ ಸೋಮನಾಥ(45), ಹೋಬಳಿ ಗಂಗರಾಜ್, ಶಿವಮೊಗ್ಗದ ನೇತ್ರಾವತಿ(38), ಉಪ್ಪಿನಂಗಡಿಯ ಬಾಬು(55) ಹಾಗೂ ರಾಜೇಂದ್ರ(65) ಬಂಧಿತ ಆರೋಪಿಗಳು.

ಬಂಟ್ವಾಳ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದ ದೇವರ ಪ್ರಭಾವಳಿಯನ್ನು ಕರಗಿಸಿ ತಯಾರಿಸಿದ 4.5ಕೆ.ಜಿ ಬೆಳ್ಳಿಯ ಗಟ್ಟಿ, ಬ್ರಹ್ಮರಕೂಟ್ಲು ಶ್ರೀ ರಾಮ ಭಜನಾ ಮಂದಿರದ ಒಂದು ಕಾಲು ಕೆ.ಜಿ. ಬೆಳ್ಳಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಮರವಂತೆಯ ಶ್ರೀ ವರಾಹ ದೇವಸ್ಥಾನದಿಂದ ಕಳವು ಮಾಡಿದ ಬಾಗಿಲಿಗೆ ಅಳವಡಿಸಿದ ಬೆಳ್ಳಿಯ ಪಟ್ಟಿಯನ್ನು ಕರಗಿಸಿ ತಯಾರಿಸಿದ 5 ಕೆ.ಜಿ. ಬೆಳ್ಳಿಯ ಗಟ್ಟಿ, ಸುಳ್ಯ ಜಲದುರ್ಗಾ ದೇವಸ್ಥಾನದಿಂದ ಕಳವು ಮಾಡಿದ ಬೆಳ್ಳಿಯ ಕವಳಿಗೆ ಮತ್ತು ಸೌಟು, ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದಿಂದ ಕದ್ದಿರುವ ಪ್ರಭಾವಳಿ ಹಾಗೂ ಬೆಳ್ಳಿಯ ಆಭರಣಗಳನ್ನು ಭಾಗಶಃ ಮೂಲ ಸ್ವರೂಪದಲ್ಲಿ ವಶಪಡಿಸಿಕೊಳ್ಳಲಾಗಿದೆ ಹಾಗೂ ಆರೋಪಿಗಳಿಂದ 18 ಗ್ರಾಂ ಚಿನ್ನ, 20 ಕೆ.ಜಿ. ಬೆಳ್ಳಿಯ ಆಭರಣಗಳನ್ನು, 2 ಕಾರುಗಳು ಸೇರಿದಂತೆ ಒಟ್ಟು 17 ಲಕ್ಷ ಮುಖಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಟ್ವಾಳ ವೃತ್ತ ನಿರೀಕ್ಷಕರಾದ ಅನಿಲ್ ಎಸ್ ಕುಲಕರ್ಣಿ, ಬೆಳ್ತಂಗಡಿ ಪಿಎಸ್ ಐ ಯೋಗೀಶ್ ಕುಮಾರ್, ಪುಂಜಾಲಕಟ್ಟೆಯ ಪಿಎಸ್ ಐ ಜಯಾನಂದ, ಉಪ್ಪಿನಂಗಡಿ ಪಿಎಸ್ ಐ ರವಿ ಬಿ.ಎಸ್., ಸಿಬ್ಬಂದಿಯವರಾದ ಬಂಟ್ವಾಳ ಗ್ರಾಮಾಂತರ ಠಾಣೆಯ ಜಗನ್ನಾಥ್ ಶೆಟ್ಟಿ, ಜಯಕುಮಾರ್, ಗಿರೀಶ್, ಮಾಧವ, ಸುನೀತ ಹಾಗೂ ಬಂಟ್ವಾಳ ಠಾಣೆಯ ಸಿಬ್ಬಂದಿಯವರಾದ ರಮೇಶ್, ಧರ್ಮಪಾಲ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

six temple thieves

six temple thieves

six temple thieves

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English