ನಿಡ್ಡೋಡಿ : ಜುಲೈ 22ರಂದು ಸಂಸದ ನಳಿನ್ ಕುಮಾರ್ ಕಟೀಲ್ ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗಳಿರುವ ಪ್ರದೇಶಕ್ಕೆ ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದರು. ನಿಡ್ಡೋಡಿ ಗ್ರಾಮವು ಕೃಷಿಗೆ ಅನುಕೂಲಕರವಾದ ಭೂಮಿಯಾಗಿದೆ. ಇಲ್ಲಿ ಸರಕಾರವು 4000 ಮೆ.ವ್ಯಾಟ್ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆಯನ್ನು ಹಮ್ಮಿಕೊಂಡಿರುವ ವಿಷಯ ನಮಗೆ ತಿಳಿದಿದೆ. ಸ್ಥಾವರ ಸ್ಥಾಪನೆಯಾದರೆ ಭತ್ತ, ಕಬ್ಬು, ತೆಂಗಿನಮರ ಮತ್ತು ಬಾಳೆಹಣ್ಣು ಇತ್ಯಾದಿ ಬೆಳೆಗಳು ನಾಶವಾಗುತ್ತದೆ ಎಂದು ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಪೋನ್ಸ ಡಿ’ ಸೋಜ ತಿಳಿಸಿದರು.
ನಮಗೆ ಈ ಸ್ಥಾವರ ಬೇಡ ನಾವು ಈ ಸ್ಥಾವರ ಸ್ಥಾಪನೆಯಾಗಲು ಬಿಡುವುದಿಲ್ಲ ಎಂದು ಸಂಸದ ನಳಿನ್ ಕುಮಾರ್ ಹೇಳಿದರು. ಆಗಸ್ಟ್ 5ರಂದು ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಎತ್ತುವುದಾಗಿ ಹೇಳಿದರು. ನಳಿನ್ ಕುಮಾರ್ ಮತ್ತು ಕೃಷಿಕ ಪೂವಪ್ಪ ಗೌಡ ಮೊದಲಾದವರು ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗಳಿರುವ ಪ್ರದೇಶವನ್ನು ವೀಕ್ಷಿಸಿದರು.
ಈ ಸ್ಥಾವರದ ವಿರುದ್ದ ನಾಗರಿಕ ಹಿತ ರಕ್ಷಣಾ ಸಮಿತಿ ಇದೇ ತಿಂಗಳ 28ರಂದು ನಿಡ್ಡೋಡಿಯ ಮಾರ್ಕೆಟ್ ಎದುರುಗಡೆ ಉಪವಾಸ ಸತ್ಯಾಗ್ರಹ ನಡೆಸಲಿದೆ. ಈ ಉಪವಾಸ ಸತ್ಯಾಗ್ರಹ 28ರಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
Click this button or press Ctrl+G to toggle between Kannada and English