ಎನ್‍ಪಿಆರ್ ಕೈಬಿಡುವಂತೆ ಒತ್ತಾಯಿಸಿ  ಉಪವಾಸ ಸತ್ಯಾಗ್ರಹ

Thursday, March 12th, 2020
ncr

ಮಂಗಳೂರು  : ಎಪ್ರಿಲ್ 15ರಿಂದ ಕರ್ನಾಟಕ ರಾಜ್ಯದಾದ್ಯಂತ ನಡೆಸಲು ಉದ್ದೇಶಿಸಲಾಗಿರುವ  ರಾಷ್ಟ್ರೀಯವ  ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಕೈಬಿಡುವಂತೆ ಒತ್ತಾಯಿಸಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ‘ದಂಡಿ ಸತ್ಯಾಗ್ರಹ’ದ 90 ವರ್ಷಾಚರಣೆಯ ಇಂದು (ಮಾ.12) ನಗರದ ಮಿನಿ ವಿಧಾನ ಸೌಧದ ಮುಂಭಾಗ ಸಾರ್ವಜನಿಕ ಉಪವಾಸ ಸತ್ಯಾಗ್ರಹ ನಡೆಯಿತು. ‘ನಾವು ಭಾರತೀಯರು’ (We the People of India) ದ.ಕ. ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಜಿಲ್ಲಾ ಪ್ರತಿನಿಧಿ ಉಮರ್ ಯು.ಹೆಚ್. ಸಂವಿಧಾನದ ಪೀಠಿಕೆಯನ್ನು ಭೋದಿಸುವುದರ […]

ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ : ಗೋಡೆಗೆ ತಲೆ ಚಚ್ಚಿಕೊಂಡ ಅಪರಾಧಿ ವಿನಯ್ ಶರ್ಮಾ

Thursday, February 20th, 2020
vinay-sharma

ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಹೈ ಡ್ರಾಮಾ ನಡೆಸಿದ್ದು, ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದಾನೆ. ಈ ಕುರಿತು ಜೈಲಿನ ಮೂಲಗಳು ಮಾಹಿತಿ ನೀಡಿದ್ದು, ಫೆಬ್ರವರಿ 16ರಂದು ಈ ಘಟನೆ ನಡೆದಿದೆ. ತಕ್ಷಣವೇ ಜೈಲು ಅಧಿಕಾರಿಗಳು ತಡೆದಿದ್ದಾರೆ. ಗೋಡೆಗೆ ಬಲವಾಗಿ ತಲೆ ಚಚ್ಚಿಕೊಂಡಿದ್ದರಿಂದ ವಿನಯ್ ಶರ್ಮಾಗೆ ಗಾಯವಾಗಿದೆ. ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ನಿರ್ಭಯಾ ಅತ್ಯಾಚಾರಿಗಳ ಪೈಕಿ ಒಬ್ಬನಾಗಿರುವ ವಿನಯ್ […]

ಉಪವಾಸ ಸತ್ಯಾಗ್ರಹಕ್ಕೆ ಎಸ್.ಎಸ್.ಎಫ್ ಜಿಲ್ಲಾ ಸಮಿತಿ ಬೆಂಬಲ : ಎಂ.ಸಿ.ನಾಣಯ್ಯ,.ಕೆ ಎಂ.ಇಬ್ರಾಹಿಂ ಭೇಟಿ

Thursday, January 30th, 2020
satyagraha

ಮಡಿಕೇರಿ : ಪೌರತ್ವ ಕಾಯ್ದೆ ವಿರುದ್ಧ ಪ್ರಗತಿಪರ ಜನಾಂದೋಲನ ವೇದಿಕೆ ಗಾಂಧಿ ಮಂಟಪದ ಬಳಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಎಸ್.ಎಸ್.ಎಫ್ ನ ಜಿಲ್ಲಾ ಸಮಿತಿ ಪ್ರಮುಖರು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರು. ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಅವರು ಮಾತನಾಡಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುವ ಯಾವುದೇ ಅನ್ಯಾಯಗಳನ್ನು ಪ್ರತಿಭಟಿಸುವ ಮಂದಿಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ನಿರುದ್ಯೋಗ, ಬೆಲೆ ಏರಿಕೆಯಂತಹ ಆಡಳಿತಾತ್ಮಕ ವೈಫಲ್ಯಗಳನ್ನು ಮರೆಮಾಚಿ ಸಮಾಜವನ್ನುಒಡೆದು ಆಳುವ ಮನೋಭಾವವನ್ನು ಆಡಳಿತ […]

ಮೂರು ದಿನ ಪೂರೈಸಿದ ಉಪವಾಸ ಸತ್ಯಾಗ್ರಹ : ನಾಳೆ ಗಾಂಧಿ ಸ್ಮರಣೆಯೊಂದಿಗೆ ಧರಣಿ ಅಂತ್ಯ

Wednesday, January 29th, 2020
protest

ಮಡಿಕೇರಿ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ನಗರದ ಗಾಂಧಿ ಮಂಟಪದ ಎದುರು ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಮೂರು ದಿನಗಳನ್ನು ಪೂರೈಸಿದೆ. ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯ ದಿನವಾದ ಜ.30 ರಂದು ಧರಣಿ ಅಂತ್ಯಗೊಳ್ಳಲಿದೆ. ವೇದಿಕೆಯ ಪ್ರಮುಖರಾದ ಎಸ್.ಐ.ಮುನೀರ್ ಅಹಮ್ಮದ್, ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರ ಮೈನಾ, ಸಿಪಿಐಎಂನ ಮಹದೇವು, ನಗರಸಭಾ […]

ಹೆಚ್.ಡಿ.ದೇವೇಗೌಡರ ಉಪವಾಸ ಸತ್ಯಾಗ್ರಹ ಸುಪ್ರೀಂಕೋರ್ಟ್ ನ್ಯಾಯಾಧೀಶರ ಕಣ್ಣು ತೆರೆಸಬಹುದು: ಜಿ.ಪರಮೇಶ್ವರ್

Saturday, October 1st, 2016
devegouda

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಉಪವಾಸ ಸತ್ಯಾಗ್ರಹ ಸುಪ್ರೀಂಕೋರ್ಟ್ ನ್ಯಾಯಾಧೀಶರ ಕಣ್ಣು ತೆರೆಸಬಹುದು ಎನ್ನುವ ಭಾವನೆಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವ್ಯಕ್ತಪಡಿಸಿದರು. ಕಾವೇರಿ ವಿವಾದದಲ್ಲಿ ಪ್ರಧಾನಿಗಳ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದರು. ದೇವೇಗೌಡರೊಂದಿಗೆ ಕೆಲ ಕಾಲು ಮಾತುಕತೆ ನಡೆಸಿದರು. ನೀರು ಹರಿಸದಿರುವ […]

ಮಡೆ ಸ್ನಾನವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ : ಶಿವರಾಮು

Thursday, December 5th, 2013
K-S-Shivaram

ಮಂಗಳೂರು : ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಸ್ನಾನವನ್ನು ವಿರೋಧಿಸಿ ಮತ್ತು ಈ ಕೂಡಲೇ ರಾಜ್ಯ ಸರ್ಕಾರ ಈ ಸಂಪ್ರದಾಯಕ್ಕೆ ತಡೆ ನೀಡ ಬೇಕೆಂದು ಒತ್ತಾಯಿಸಿ ಬರುವ ಡಿಸೆಂಬರ್ 7ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ  ಬುಧವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದ್ದಾರೆ. ಶಿವರಾಮು ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಸಂಪ್ರದಾಯ, ನಂಬಿಕೆಯ ಹೆಸರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಇತರೆ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಮಡೆ ಸ್ನಾನ ಅಮಾನವೀಯವಾಗಿದೆ. […]

ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರಿಂದ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ

Friday, October 4th, 2013
nantoor

ಮಂಗಳೂರು : ಗುರುವಾರ ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರು ವರ್ಷಗಳು ಕಳೆದರೂ ತಾಂತ್ರಿಕ ದೋಷ ಪೂರಿತ ನಂತೂರು ವೃತ್ತದಲ್ಲಿನ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ  ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿದರು . ಸ್ಥಳೀಯ ನಾಗರಿಕರಾದ ಎ.ಜಿ.ಶರ್ಮ ಅವರು, ಪ್ರತಿಭಟನೆಯನ್ನುದ್ದೇಶಿಸಿ ನಂತೂರು ವೃತ್ತದ ದುಸ್ಥಿತಿ ಕೇಳುವವರಿಲ್ಲ. ಇಲ್ಲಿಯ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ, ರಾಷ್ಟ್ರೀಯ ಇಲಾಖೆಯ ಗಮನಕ್ಕೆ ತಂದರೂ ಈ ಬಗ್ಗೆ ಯಾರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಗಾಲದಲ್ಲಂತೂ ಕೆಸರು ನೀರುಗಳು ರಸ್ತೆಯ […]

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಇ.ಎಸ್.ಐ. ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ

Saturday, August 17th, 2013
upavasa-sathyagraha

ಮಂಗಳೂರು : ಕಾರ್ಮಿಕರ ಮತ್ತು ನಾಗರಿಕರ ವಿವಿಧ ಬೇಡಿಕೆಗಳ ಬಗ್ಗೆ ಮತ್ತು ಕದ್ರಿ ಶಿವಭಾಗನ ಇ.ಎಸ್.ಐ.  ಆಸ್ಪತ್ರೆಯನ್ನು ಸಂಪೂರ್ಣ ಕೇಂದ್ರ ಸರಕಾರ ವಹಿಸಿಕೊಳ್ಳಬೇಕು ಮತ್ತು ದ.ಕ. ಜಿಲ್ಲೆಯ ವ್ಯಾಪ್ತಿಯ ಅಸುರಕ್ಷಿತ ಸ್ಥಳದ ಕಾರ್ಮಿಕರರಿಗೆ ಇ.ಎಸ್.ಐ.ಸಿ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಸುದತ್ತ್ ಜೈನ್  ಶಿರ್ತಡಿಯವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದರು. ಆಗಸ್ಟ್19 ರಂದು  ಜಿಲ್ಲಾಧಿಕಾರಿ ಕಛೇರಿಯಿಂದ ಬೆಳಿಗ್ಗೆ 10ಕ್ಕೆ ಪಾದಯಾತ್ರೆಯ ಮೂಲಕ  ಕದ್ರಿ ಇ.ಎಸ್.ಐ. ಆಸ್ಪತ್ರೆಯ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು  ತಿಳಿಸಿದರು. ಸಮಾನ […]

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಕ್ಯಾರಿ ಓವರ್ ಸಮಸ್ಯೆಯ ಪರಿಹಾರಕ್ಕಾಗಿ ಉಪವಾಸ ಸತ್ಯಾಗ್ರಹ

Saturday, August 3rd, 2013
polytechnic student

ಮಂಗಳೂರು : ಕರ್ನಾಟಕ ಪಾಲಿಟೆಕ್ನಿಕ್ ಕ್ಯಾರಿ ಓವರ್ ಸಮಸ್ಯೆಯ ಪರಿಹಾರಕ್ಕೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಉಪವಾಸ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಮುಂಬಾಗದಲಲಿ ಶನಿವಾರ ಬೆಳಿಗ್ಗೆ 8 ರಿಂದ ಸಂಜೆ 5 ರ ತನಕ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ನಡೆಯಿತು. ಉಪವಾಸ ನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಮಾತನಾಡಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುವ ಕ್ಯಾರಿ ಓವರ್ ನಿಯಮದಿಂದ ಸಮಸ್ಯೆ ಉದ್ಭವಿಸಿದ್ದು, ಕರಾವಳಿ ಕರ್ನಾಟಕ ಭಾಗದ ಸುಮಾರು 5000ಕ್ಕೂ […]

ಜುಲೈ 28ರಂದು ನಿಡ್ಡೋಡಿಯಲ್ಲಿ ಉಪವಾಸ ಸತ್ಯಾಗ್ರಹ

Tuesday, July 23rd, 2013
Niddodi ultra mega power plant

ನಿಡ್ಡೋಡಿ :  ಜುಲೈ 22ರಂದು ಸಂಸದ ನಳಿನ್ ಕುಮಾರ್ ಕಟೀಲ್ ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗಳಿರುವ ಪ್ರದೇಶಕ್ಕೆ ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದರು.  ನಿಡ್ಡೋಡಿ ಗ್ರಾಮವು ಕೃಷಿಗೆ ಅನುಕೂಲಕರವಾದ ಭೂಮಿಯಾಗಿದೆ. ಇಲ್ಲಿ ಸರಕಾರವು 4000 ಮೆ.ವ್ಯಾಟ್ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆಯನ್ನು ಹಮ್ಮಿಕೊಂಡಿರುವ ವಿಷಯ ನಮಗೆ ತಿಳಿದಿದೆ. ಸ್ಥಾವರ ಸ್ಥಾಪನೆಯಾದರೆ ಭತ್ತ, ಕಬ್ಬು, ತೆಂಗಿನಮರ ಮತ್ತು ಬಾಳೆಹಣ್ಣು ಇತ್ಯಾದಿ ಬೆಳೆಗಳು ನಾಶವಾಗುತ್ತದೆ ಎಂದು ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಪೋನ್ಸ ಡಿ’ ಸೋಜ ತಿಳಿಸಿದರು. ನಮಗೆ […]