ಮಂಗಳೂರು : ಕರ್ನಾಟಕ ಪಾಲಿಟೆಕ್ನಿಕ್ ಕ್ಯಾರಿ ಓವರ್ ಸಮಸ್ಯೆಯ ಪರಿಹಾರಕ್ಕೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಉಪವಾಸ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಮುಂಬಾಗದಲಲಿ ಶನಿವಾರ ಬೆಳಿಗ್ಗೆ 8 ರಿಂದ ಸಂಜೆ 5 ರ ತನಕ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ನಡೆಯಿತು.
ಉಪವಾಸ ನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಮಾತನಾಡಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುವ ಕ್ಯಾರಿ ಓವರ್ ನಿಯಮದಿಂದ ಸಮಸ್ಯೆ ಉದ್ಭವಿಸಿದ್ದು, ಕರಾವಳಿ ಕರ್ನಾಟಕ ಭಾಗದ ಸುಮಾರು 5000ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಜೀವನ ಕಳೆದುಕೊಳ್ಳುವಂತಾಗಿದೆ. ಕಳೆದ ಬಾರಿ ಸರಕಾರ ಬೇಜವಬ್ದಾರಿತನದಿಂದ ವರ್ತಿಸಿರುವುದರಿಂದ ವಿದ್ಯಾರ್ಥಿಗಳು ಉಚ್ಚನ್ಯಾಯಾಲಯಕ್ಕೆ ಹೋಗಿ 4ರ ಬದಲು 10 ವಿಷಯದಲ್ಲಿ ಅನುತ್ತೀರ್ಣರಾಗಿದ್ದಲ್ಲಿ ಪ್ರವೇಶ ಪಡೆಯಬಹುದೆಂದು ಆದೇಶ ಪಡೆದಿತ್ತು. ಈ ಬಾರಿ 4 ವಿಷಯಕ್ಕೆ ಸೀಮಿತಗೊಳಿಸಲಾಗಿದೆ. ವಿದ್ಯಾರ್ಥಿಗಳು ಸರ್ವಕಾಲೇಜ್ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ, ಶಿಕ್ಷಣ ಮಂತ್ರಿಗೆ, ಆಡಳಿತ ಮಂಡಳಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಿರುತ್ತದೆ. ದಿನಾಂಕ 24 ರಂದು ಬೆಂಗಳೂರಿನಲ್ಲಿ ಸ.ಕಾ.ವಿ.ಸ. ನಿಯೋಗ ಶಿಕ್ಷಣ ಮಂತ್ರಿ ದೇಶ್ಪಾಂಡೆಯವರನ್ನು ಮುಖತ: ಬೇಟಿಯಾಗಿ ಸಮಸ್ಯೆಯ ಬಗ್ಗೆ ಮನವರಿಕೆಮಾಡಿಕೊಡಲಾಗಿದೆ. ಆದರೆ ಅವರು ಸಮಸ್ಯೆ ಬಗೆಹರಿಸುವ ಬಗ್ಗೆ ಉತ್ಸಾಹ ತೋರಲಿಲ್ಲ ಎಂದು ಹೇಳಿದರು.
ಉಪವಾಸ ಪ್ರತಿಭಟನೆಯ ನೇತೃತ್ವವನ್ನು ಅಧ್ಯಕ್ಷ ರಮಿತ್ ಕುಮಾರ್, ಉಪಾಧ್ಯಕ್ಷ ವಿನಯ್ ಎಚ್.ಜೆ.,ಸಚಿನ್ ಬಂಗೇರ, ದೀಕ್ಷಿತ್, ಕರಿಷ್ಮ ಡಿ. ಉಳ್ಳಾಲ್, ಉಡುಪಿ ಅಧ್ಯಕ್ಷ ಜೋವಿನ್, ಬೆಳ್ತಂಗಡಿ ಅಧ್ಯಕ್ಷ ಮೊಹಮ್ಮದ್ ಆರಿಫ್, ಸುಳ್ಯ ಅಧ್ಯಕ್ಷ ಪ್ರಜ್ವಲ್ ಕೆ.ಟಿ, ಕಾರ್ಕಳ ಅಧ್ಯಕ್ಷಿ ನಿಶಾ ಎನ್. ಶೆಟ್ಟಿ, ಮೂಡಬಿದಿರೆ ಅಧ್ಯಕ್ಷ ಜಾನ್ಸನ್, ಅವಳಿ ಜಿಲ್ಲಾಧ್ಯಕ್ಷ ಅಶ್ವಿತ್ ಬಿ., ತಾಲೂಕು ಅಧ್ಯಕ್ಷ ಲೋಹಿತ್ ಕುಮಾರ್, ರಾಜ್ಯ ಕಾರ್ಯದರ್ಶಿ ಶಿಫರ್ರಾಜ್, ಶ್ರೀಲತ, ಭರತ್, ಅಶ್ವಿತ್ ಕೊಟ್ಟಾರಿ, ಉತ್ತಮ್ ಆಳ್ವ, ಪ್ರಕಾಶ್ ಕೌಶಿಕ್, ಸಚಿನ್ ಮೋರೆ ನೇತೃತ್ವ ವಹಿಸಿದರು.
Click this button or press Ctrl+G to toggle between Kannada and English