ಮಂಗಳೂರು : ಕಾರ್ಮಿಕರ ಮತ್ತು ನಾಗರಿಕರ ವಿವಿಧ ಬೇಡಿಕೆಗಳ ಬಗ್ಗೆ ಮತ್ತು ಕದ್ರಿ ಶಿವಭಾಗನ ಇ.ಎಸ್.ಐ. ಆಸ್ಪತ್ರೆಯನ್ನು ಸಂಪೂರ್ಣ ಕೇಂದ್ರ ಸರಕಾರ ವಹಿಸಿಕೊಳ್ಳಬೇಕು ಮತ್ತು ದ.ಕ. ಜಿಲ್ಲೆಯ ವ್ಯಾಪ್ತಿಯ ಅಸುರಕ್ಷಿತ ಸ್ಥಳದ ಕಾರ್ಮಿಕರರಿಗೆ ಇ.ಎಸ್.ಐ.ಸಿ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಸುದತ್ತ್ ಜೈನ್ ಶಿರ್ತಡಿಯವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದರು.
ಆಗಸ್ಟ್19 ರಂದು ಜಿಲ್ಲಾಧಿಕಾರಿ ಕಛೇರಿಯಿಂದ ಬೆಳಿಗ್ಗೆ 10ಕ್ಕೆ ಪಾದಯಾತ್ರೆಯ ಮೂಲಕ ಕದ್ರಿ ಇ.ಎಸ್.ಐ. ಆಸ್ಪತ್ರೆಯ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಮಾನ ಮನಸ್ಕ ಸಂಘಟನೆಗಳು, ಕಾರ್ಮಿಕರ ನಾಯಕರು ಮತ್ತು ದ.ಕ. ಜಿಲ್ಲೆಯ ಎಲ್ಲಾ ವರ್ಗದ ಕಾರ್ಮಿಕರು ತಮ್ಮ ವೈಯುಕ್ತಿಕ ಬೆಂಬಲ ನೀಡಬೇಕೆಂದು ಜೈನ್ ವಿನಂತಿಸಿದರು.
ಪತ್ರಿಕಾಘೋಷ್ಠಿಯಲ್ಲಿ ಪುನೀತ್ ಅತ್ತಾವರ,ಹರೀಶ್ ಕುಮಾರ್ ಶೆಟ್ಟಿ ಜಕ್ರಿಬೆಟ್ಟು, ಮಹೇಂದ್ರ ಮಾಯಿಲೋಡಿ ಪಡುಕೊಣಾಜೆ, ಎಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಉಳ್ಳಾಲ ಮತ್ತಿತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English