ಮಡೆ ಸ್ನಾನವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ : ಶಿವರಾಮು

5:00 PM, Thursday, December 5th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

K-S-Shivaram

ಮಂಗಳೂರು : ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಸ್ನಾನವನ್ನು ವಿರೋಧಿಸಿ ಮತ್ತು ಈ ಕೂಡಲೇ ರಾಜ್ಯ ಸರ್ಕಾರ ಈ ಸಂಪ್ರದಾಯಕ್ಕೆ ತಡೆ ನೀಡ ಬೇಕೆಂದು ಒತ್ತಾಯಿಸಿ ಬರುವ ಡಿಸೆಂಬರ್ 7ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ  ಬುಧವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದ್ದಾರೆ.

ಶಿವರಾಮು ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಸಂಪ್ರದಾಯ, ನಂಬಿಕೆಯ ಹೆಸರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಇತರೆ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಮಡೆ ಸ್ನಾನ ಅಮಾನವೀಯವಾಗಿದೆ. ಈ ಬಗ್ಗೆ ಕಳೆದೆರೆಡು ವರ್ಷಗಳಿಂದ ಚರ್ಚೆಗಳು ನಡೆಯು ತ್ತಿದ್ದರೂ ಈ ಬಾರಿಯೂ ಮಡೆ ಸ್ನಾನ ರದ್ದಾಗದೇ ಇರುವುದು ಸಾಂಸ್ಕಂತಿಕ ಮತ್ತು ರಾಜಕೀಯ ದಿಗ್ಬ್ರಮೆಯಾಗಿದೆ. ಇದೇ ಕಾರಣಕ್ಕೆ ಈ ಪುರೋಹಿತ ಶಾಹಿ ವರ್ಗ ಸರ್ಕಾರ ತರಲು ಉದ್ದೇಶಿಸಿರುವ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ವಿರೋಧಿ ಸುತ್ತಿದೆ. ಆದರೆ ಇಂತಹ ಅನಿಷ್ಠ ಪದ್ಧತಿಗಳ ನಿವಾರಣೆಗೆ ಈ ಕಾಯ್ದೆಯ ಅಗತ್ಯವಿದ್ದು, ಈ ಕೂಡಲೇ ಕಾಯ್ದೆ ಯನ್ನು ಜಾರಿಗೊಳಿಸಬೇಕು. ಸರ್ಕಾರ ಮಧ್ಯ ಪ್ರವೇಶಿಸಿ ತಕ್ಷಣ ಮಡೆ ಸ್ನಾನವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಸರ್ಕಾರಕ್ಕೆ ಒತ್ತಡ ತರುವ ಹಿನ್ನೆಲೆಯಲ್ಲಿ ಡಿಸೆಂಬರ್ 7 ರಂದು ದ.ಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಇದರಲ್ಲಿ ಪ್ರಗತಿಪರ ಮಠಾಧಿಪತಿಗಳು, ಸಮತಾಸೈನಿಕ ದಳ, ದಲಿತ ಸಂಘರ್ಷ ಸಮಿತಿ ಮತ್ತು ಡಿವೈ ಎಫ್‍ಐ ಸಂಘಟನೆಗಳು ಬೆಂಬಲ ನೀಡ ಲಿವೆ ಎಂದರು.

ಈ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ವಿಶ್ವಕರ್ಮ ಮಹಾಮಂಡಲದ ಮೈಸೂರು ಜಿಲ್ಲಾಧ್ಯಕ್ಷ ಸಿ.ಟಿ. ಆಚಾರ್ಯ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English