ಮೂರು ದಿನ ಪೂರೈಸಿದ ಉಪವಾಸ ಸತ್ಯಾಗ್ರಹ : ನಾಳೆ ಗಾಂಧಿ ಸ್ಮರಣೆಯೊಂದಿಗೆ ಧರಣಿ ಅಂತ್ಯ

9:32 AM, Wednesday, January 29th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

protest

ಮಡಿಕೇರಿ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ನಗರದ ಗಾಂಧಿ ಮಂಟಪದ ಎದುರು ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಮೂರು ದಿನಗಳನ್ನು ಪೂರೈಸಿದೆ. ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯ ದಿನವಾದ ಜ.30 ರಂದು ಧರಣಿ ಅಂತ್ಯಗೊಳ್ಳಲಿದೆ.

ವೇದಿಕೆಯ ಪ್ರಮುಖರಾದ ಎಸ್.ಐ.ಮುನೀರ್ ಅಹಮ್ಮದ್, ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರ ಮೈನಾ, ಸಿಪಿಐಎಂನ ಮಹದೇವು, ನಗರಸಭಾ ಮಾಜಿ ಸದಸ್ಯರುಗಳಾದ ಕೆ.ಜಿ.ಪೀಟರ್, ಮನ್ಸೂರ್, ಜುಲೇಕಾಬಿ, ಕೆ.ಟಿ.ಬೇಬಿಮ್ಯಾಥ್ಯು, ಲೀಲಾಶೇಷಮ್ಮ, ಪ್ರಕಾಶ್ ಆಚಾರ್, ಎಸ್‌ಡಿಪಿಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಮುಖರಾದ ಚಂದ್ರಶೇಖರ್, ಅಂಬೇಕಲ್ ಕುಶಾಲಪ್ಪ, ಪ್ರೇಮಾಕೃಷ್ಣಪ್ಪ, ಜಯಮ್ಮ, ಗೋಪಾಲಕೃಷ್ಣ, ಅಬ್ದುಲ್ ಖಾದರ್, ರಾಮದಾಸ್, ಮುನೀರ್ ಮಾಚರ್, ಸುನಂದ ಮೊದಲಾದವರು ಉಪವಾಸ ಕೈಗೊಂಡಿರುವ ಪ್ರಗತಿಪರ ಜನಾಂದೋಲನ ವೇದಿಕೆಯ ಸಂಚಾಲಕ ವಿ.ಪಿ.ಶಶಿಧರ್, ಕಾರ್ಮಿಕ ಮುಖಂಡ ಪಿ.ಆರ್.ಭರತ್, ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ಹಾಗೂ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಬಷೀರ್ ಅವರಿಗೆ ಬೆಂಬಲ ಸೂಚಿಸಿದರು.

ಕೇಂದ್ರ ಸರ್ಕಾರ ಧರ್ಮ ಆಧಾರಿತ ಕಾಯ್ದೆಗಳನ್ನು ಕೈಬಿಡುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ವಿ.ಪಿ.ಶಶಿಧರ್ ತಿಳಿಸಿದರು. ಮಹಾತ್ಮ ಗಾಂಧಿಯ ಪುಣ್ಯ ದಿನವಾದ ಗುರುವಾರ ಗಾಂಧಿ ಸ್ಮರಣೆಯ ಮೂಲಕ ಶಾಂತಿಯುತ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಗುವುದು ಎಂದರು.

ನೆರವಂಡ ಉಮೇಶ್ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದ ಸೌಹಾರ್ದ ವಾತಾವರಣವನ್ನು ಕದಡುವ ಯತ್ನಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಬಷೀರ್ ಮಾತನಾಡಿ ಸಂವಿಧಾನ ವಿರೋಧಿ ನೀತಿಗಳ ಮೂಲಕ ಕೇಂದ್ರ ಸರ್ಕಾರ ದೇಶದಲ್ಲಿ ಅಶಾಂತಿಯನ್ನು ಮೂಡಿಸುತ್ತಿದೆ ಎಂದು ಟೀಕಿಸಿದರು.
ತೆನ್ನಿರ ಮೈನಾ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English