ಮಂಗಳೂರು : ಎಪ್ರಿಲ್ 15ರಿಂದ ಕರ್ನಾಟಕ ರಾಜ್ಯದಾದ್ಯಂತ ನಡೆಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯವ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಕೈಬಿಡುವಂತೆ ಒತ್ತಾಯಿಸಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ‘ದಂಡಿ ಸತ್ಯಾಗ್ರಹ’ದ 90 ವರ್ಷಾಚರಣೆಯ ಇಂದು (ಮಾ.12) ನಗರದ ಮಿನಿ ವಿಧಾನ ಸೌಧದ ಮುಂಭಾಗ ಸಾರ್ವಜನಿಕ ಉಪವಾಸ ಸತ್ಯಾಗ್ರಹ ನಡೆಯಿತು.
‘ನಾವು ಭಾರತೀಯರು’ (We the People of India) ದ.ಕ. ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಜಿಲ್ಲಾ ಪ್ರತಿನಿಧಿ ಉಮರ್ ಯು.ಹೆಚ್. ಸಂವಿಧಾನದ ಪೀಠಿಕೆಯನ್ನು ಭೋದಿಸುವುದರ ಮೂಲಕ ಸತ್ಯಾಗ್ರಹ ಉದ್ಘಾಟಿಸಿದರು. ಬೆಳಿಗ್ಗೆ 10.00ರಿಂದ ಸಂಜೆ 5.00ರ ತನಕ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಮಾಜಿ ಶಾಸಕ ಜೆ.ಆರ್. ಲೋಬೊ, ಹೈದರ್ ಪರ್ತಿಪ್ಪಾಡಿ, ನಝೀರ್ ಉಳ್ಳಾಲ್, ರಫೀವುದ್ದೀನ್ ಕುದ್ರೋಳಿ, ಎಸ್. ನಂದಗೋಪಾಲ್, ಅಮೀರ್ ತುಂಬೆ, ಎ.ಕೆ. ಕುಕ್ಕಿಲ, ಶೇಖರ್ ಲಾಯಿಲ, ವಿಲ್ಲಿ ವಿಲ್ಸನ್, ಇಮ್ತಿಯಾಝ್ ಬಿ.ಕೆ., ಎಂ.ಜಿ. ಹೆಗ್ಡೆ, ಮೌಶೀರ್ ಸಾಮಣಿಗೆ, ಇಕ್ಬಾಲ್ ಬೆಳ್ಳಾರೆ, ಶ್ರೀಕಾಂತ್ ಸಾಲ್ಯಾನ್, ತಫ್‍ಲೀಲ್ ಉಪ್ಪಿನಂಗಡಿ, ನ್ಯಾಯವಾದಿ ಶರ್ಫರಾಝ್, ಯು.ಹೆಚ್. ಖಾಲಿದ್ ಉಜಿರೆ ಮತ್ತು ವಿದ್ಯಾ ದಿನಕರ್ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಸಮಾರೋಪ ಭಾಷಣ ಮಾಡಿದರು.
ಮನಪಾ ಮಾಜಿ ಮೇಯರ್‍ಗಳಾದ ಶಶಿದರ್ ಹೆಗ್ಡೆ ಮತ್ತು ಅಬ್ದುಲ್ ಅಝೀಝ್, ಮನಪಾ ಸದಸ್ಯರಾದ ಅಬ್ದುಲ್ ಲತೀಫ್, ಅಬ್ದುಲ್ ರವೂಫ್, ಶಂಶುದ್ದೀನ್, ಅಶ್ರಫ್ ಬಜಾಲ್, ಝೀನತ್ ಶಂಶಾದ್, ಶಂಶಾದ್ ಅಬೂಬಕರ್ ಮತ್ತು ಮುನೀಬ್ ಬೆಂಗ್ರೆ ಹಾಗೂ ಅಥಾವುಲ್ಲಾ ಜೋಕಟ್ಟೆ, ಮುಸ್ತಫಾ ಕೆಂಪಿ, ರಿಯಾಝ್ ಫರಂಗಿಪೇಟೆ, ಅಬ್ದುಲ್ ಜಲೀಲ್ ಕೃಷ್ಣಾಪುರ, ಕೆ.ಎಂ. ಶರೀಫ್, ಅಮೀನ್ ಅಹ್ಸನ್, ಸಚಿತಾ ಎಸ್. ನಂದಗೋಪಾಲ್, ಇಸ್ಮತ್ ಪಜೀರ್, ಹರಿಣಿ ಶೆಟ್ಟಿ, ಹುಸೈನ್ ಕಾಟಿಪಳ್ಳ, ರಫೀಕ್ ದಾರಿಮಿ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಸತ್ಯಾಗ್ರಹದ ಬಳಿಕ ರಾಜ್ಯದಲ್ಲಿ ಎನ್‍ಪಿಆರ್ ರದ್ದುಗೊಳಿಸುವಂತೆ ಒತ್ತಾಯಿಸಿ, ದ.ಕ. ಜಿಲ್ಲಾದಿಕಾರಿಯ ಮೂಲಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರಿಗೆ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
Click this button or press Ctrl+G to toggle between Kannada and English