ಏಕ ಪೌರತ್ವದ ಕಾರ್ಡ್ ನೀಡಿ, ಸರ್ಕಾರಕ್ಕೆ ಎಂ.ಜಿ. ಹೆಗ್ಡೆ ಸೂಚನೆ

11:34 AM, Friday, July 26th, 2013
Share
1 Star2 Stars3 Stars4 Stars5 Stars
(4 rating, 4 votes)
Loading...

card  system

ಮಂಗಳೂರು : ಸರಕಾರದ ಬಗೆ ಬಗೆಯ ಕಾರ್ಡ್ ಬದಲು ಒಂದೇ ಕಾರ್ಡ್ ಮಾಡಿ ಗೊಂದಲ ನಿವಾರಿಸಲು  ಸಮಾನ ಮನಸ್ಕ ಸಂಘಟನೆಗಳಾದ ತುಳುನಾಡ ರಕ್ಷಣಾ ವೇದಿಕೆ, ಪ್ರೇಮ್ ಎಸೋಸಿಯೇಶನ್ ಸುರತ್ಕಲ್, ಕಡಲ ಸೇನೆ ಯುವ ಸೇವಾ ಟ್ರಸ್ಟ್ ಜಂಟಿಯಾಗಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿತು.

ಆಧಾರ್ ಕಾರ್ಡ್ ಪಡೆಯಲು ಹರಸಾಹಸ ಪಡಬೇಕಿದೆ. ಸರ್ಕಾರವು ಕಾರ್ಡ್ ಪದ್ದತಿಗಳನ್ನು ಜಾರಿ ಮಾಡುತ್ತಿದ್ದರೂ ಯಾವುದೇ ಕಾರ್ಡ್ ವ್ಯವಸ್ಥೆಯ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಜನತೆ ಕಾರ್ಡ್ ಪಡೆಯುವಲ್ಲಿ ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಹಲವಾರು ಕಾರ್ಡ್ ಮಾಡಿಸುವ ಬದಲು ಕೇವಲ ಏಕ ಪೌರತ್ವದ ಕಾರ್ಡ್ ನೀಡಬೇಕು. ಹಾಗೆಯೇ ಕಾರ್ಡ್ ಪಡೆಯಲು ಏಕ ಕೇಂದ್ರದ ವ್ಯವಸ್ಥೆಯಾಗಬೇಕಾಗಿದೆ. ಅನೇಕ ಕಾರ್ಡ್ ಗಳ ಚಲಾವಣೆ ಇದ್ದಲ್ಲಿ ದಂಧೆಕೋರರು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜನರಿಗೆ ಒಂದೇ ಕಾರ್ಡಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜನಜಾಗೃತಿಗಾಗಿ ಬೃಹತ್ ರ್‍ಯಾಲಿ ನಡೆಯಲಿದೆ ಎಂದು ಎಂ.ಜಿ. ಹೆಗ್ಡೆ ತಿಳಿಸಿದರು.

ಪ್ರತಿಭಟನೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಮುಖಂಡ ಯೋಗೀಶ್ ಶೆಟ್ಟಿ, ಕಡಲ ಸೇನೆ ಯುವ ಸೇವಾ ಟ್ರಸ್ಟ್ ನ ಮುಖಂಡ ಯಶವಂತ್ ಬೋಳೂರು, ಪ್ರೇಮ್ ಎಸೋಸಿಯೇಶನ್ ಸುರತ್ಕಲ್ ಇದರ ಮುಖಂಡ ಟೈಸನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

card  system

card  system

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English