ಬಿಎಸ್ಸ್ ಡಬ್ಲ್ಯೂನಲ್ಲಿ ಕಲಿಯುತ್ತಿರುವ ದಲಿತ ವಿದ್ಯಾರ್ಥಿನಿಯನ್ನು ಕಾಡೋಂಮ್ ಹಾಕಿ ರೇಪ್ ಮಾಡಿದ ಕಾರು ಚಾಲಕ

3:48 PM, Saturday, July 27th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Prasanth Shettyಮಂಗಳೂರು: ಕಾರ್ ಡ್ರೈವರ್ ಒಬ್ಬ ರೋಶನಿ ನಿಲಯದ ಬಿಎಸ್ಸ್ ಡಬ್ಲ್ಯೂನಲ್ಲಿ ಕಲಿಯುತ್ತಿರುವ ದಲಿತ ವಿದ್ಯಾರ್ಥಿನಿಯೋರ್ವಳನ್ನು ತನ್ನ ಮನೆಗೆ ಕರೆಸಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ನೀರುಮಾರ್ಗದ ಪಾಲ್ದಾನೆಯಲ್ಲಿ ನಡೆದಿದೆ.

ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ತನಗಾದ ನೋವನ್ನು ತನ್ನ ತಾಯಿಯಲ್ಲಿ ಹೇಳಿದ್ದಳು. ತಾಯಿ ತನ್ನ ಮಗಳೊಂದಿಗೆ ಕಂಕನಾಡಿ ಗ್ರಾಮಾಂತರ ಠಾಣೆಗೆ ಜುಲೈ 25ರಂದು ಘಟನೆಯ ಬಗ್ಗೆ ದೂರು ನೀಡಿದರು.

ಪ್ರಶಾಂತ್ ಶೆಟ್ಟಿ (30)ಅತ್ಯಾಚಾರ ನಡೆಸಿದ ವ್ಯಕ್ತಿ. ಎರಡು ತಿಂಗಳುಗಳಿಂದ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ, ಈತನಿಗೆ ಮದುವೆಯಾಗಿದ್ದು, 2 ಹೆಣ್ಣು ಮಕ್ಕಳಿದ್ದಾರೆ. ಕಾರುಚಾಲಕನ ಮನೆಯ ಪಕ್ಕದಲ್ಲೇ ವಿದ್ಯಾರ್ಥಿನಿಯ ಮನೆ ಇದೆ. ಅಂದು ಶನಿವಾರ ಜುಲೈ 22 ಹೆಂಡತಿ ತನ್ನ ಮಕ್ಕಳೊಂದಿಗೆ ಸಮೀಪವೇ ಇರುವ ದೇವಸ್ಥಾನಕ್ಕೆ ತೆರಳಿದ್ದರು. ಪಕ್ಕದ ಮನೆಯಲ್ಲಿ ಹುಡುಗಿ ಒಬ್ಬಂಟಿಯಾಗಿದ್ದಳು.

ಇದೇ ಸಮಯಕ್ಕಾಗಿ ಹೊಂಚುಹಾಕಿ ಕುಳಿತಿದ್ದ ಪ್ರಶಾಂತ ಆಕೆಯನ್ನು ಮನೆಯೊಳಗೆ ಕರೆದಿದ್ದಾನೆ. ಪಕ್ಕದ ಮನೆಯಾದುದರಿಂದ ಹುಡುಗಿ ಏನೂ ಮಾತಾಡದೆ ಒಳನಡೆದಿದ್ದಾಳೆ. ಆಗ ಪ್ರಶಾಂತ ನಿನಗೆ ರೂಮಿನೊಳಗೆ ಏನೋ ತೋರಿಸುವುದಿದೆ ಒಳಗೆ ಬಾ ಎಂದು ಕರೆದ. ಬಳಿಕ ಆಕೆಯನ್ನು ಸಲುಗೆಯಿಂದ ಮುಟ್ಟಲಾರಂಬಿಸಿದ. ಒಂದು ಕ್ಷಣ ಮೈಮರೆತ ಹುಡುಗಿಯನ್ನು ಬೆಡ್ ರೂಮಿನಲ್ಲಿ ಮಲಗಿಸಿ ರೇಪ್ ಮಾಡಿಯೇ ಬಿಟ್ಟ. ಆಕೆ ಪ್ರತಿಭಟಿಸಿದರೂ ಆತ ಬಿಡಲಿಲ್ಲ ಎಂದು ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸರಿಗೆ ಹೇಳಿದ್ದಾಳೆ.

ರೇಪ್ ಮಾಡುವ ಮೊದಲು ಪ್ರಶಾಂತ ಕಾಡೋಂಮ್ ಹಾಕಿದ್ದನಂತೆ. ಪ್ರಶಾಂತ ನನ್ನನ್ನು ಕೆಲವು ದಿನಗಳಿಂದ ಒಂಥರಾ ನೋಡುತ್ತಿದ್ದ ಎಂದು ಆಕೆ ಹೇಳಿದ್ದಾಳೆ.

ರೂಮಿನೊಳಗೆ ಕರೆದು ರೇಪ್ ಮಾಡುವಲ್ಲಿವರೆಗೆ ಹುಡುಗಿ ಸುಮ್ಮನಿದ್ದುದು ಏಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ,

ಪ್ರಶಾಂತ ಶೆಟ್ಟಿಯನ್ನು ಆಕೆ ನೀಡಿದ ದೂರಿನಂತೆ ಜುಲೈ 26ರಂದು ಬಂಧಿಸಲಾಗಿದೆ. ಪೊಲೀಸರು ಆತನನ್ನು ನ್ಯಾಯಾದೀಶರ ಮುಂದೆ ಹಾಜರು ಪಡಿಸಿದಾಗ ಆತನಿಗೆ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English