ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಮಧ್ಯೆ ಮಂಗಳವಾರ ಸದನದಲ್ಲಿ ಭಾರಿ ಜಟಾಪಟಿ ನಡೆಯಿತು. ಇದರಿಂದ ಸದನದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು.
ಸದನದಲ್ಲಿ ಕುಮಾರಸ್ವಾಮಿ, ಹಿಂದುಳಿದ ವರ್ಗದವರನ್ನು ಉಪ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು. ಆದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಆಗಲಿಲ್ಲ ಎಂದು ಚೇಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದು, ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು, ನೀವೇ ಎಂದರು. ಇದರಿಂದ ಆಕ್ರೋಶಗೊಂಡ ಎಚ್‌ಡಿಕೆ, ಹೌದು ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ನಾನೇ, ಆದರೆ ಸಿದ್ದರಾಮಯ್ಯರನ್ನು ನಾಯಕನಾಗಿ ಬೆಳೆಸಿದ್ದೇ ಜೆಡಿಎಸ್ ಎಂದರು.
ನಾವು ದೇವಗೌಡರನ್ನು ಮುಖ್ಯಮಂತ್ರಿ ಮಾಡಲಿಲ್ವಾ? ಎಂದು ಸಿದ್ದು ಪ್ರಶ್ನಿಸಿದರು. ಸಿದ್ದು ಪ್ರಶ್ನೆಯಿಂದ ಕೆಂಡಾಮಂಡಲವಾದ ಕುಮಾರಸ್ವಾಮಿ, ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದು ನೀವಲ್ಲ, ರಾಜ್ಯದ ಲಕ್ಷಾಂತರ ಮಂದಿ ಮತ ಹಾಕಿ ಮುಖ್ಯಮಂತ್ರಿ ಮಾಡಿದ್ದರು ಎಂದರು. ಹೀಗೆ ಇಬ್ಬರು ನಾಯಕರ ನಡುವೆ ಹಳೆ ವಿಚಾರಗಳ ಬಗ್ಗೆ ತೀವ್ರ ವಾಗ್ವಾದ ನಡೆಯಿತು.
Click this button or press Ctrl+G to toggle between Kannada and English