ಪತ್ರಕರ್ತರ ಸಂಘ ಮತ್ತು ಅರಣ್ಯ ಸಂರಕ್ಷಣಾ ಇಲಾಖೆ ಕದ್ರಿ ಪಾರ್ಕ್ ನಲ್ಲಿ ವನಮಹೋತ್ಸವ

1:28 AM, Saturday, August 3rd, 2013
Share
1 Star2 Stars3 Stars4 Stars5 Stars
(5 rating, 5 votes)
Loading...

vanamahostava ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮಂಗಳೂರು ಅರಣ್ಯ ಸಂರಕ್ಷಣಾ ಇಲಾಖೆ ವತಿಯಿಂದ ನಗರದಕದ್ರಿ ಪಾರ್ಕ್ ನಲ್ಲಿ ಆಗಸ್ಟ್2 ರಂದು ಗಿಡ ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಗಿಡನೆಟ್ಟು ನೀರೆರೆಯುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿ ಲಕ್ಷವೃಕ್ಷ ಅಭಿಯಾನ ನಾಳೆಯಿಂದ ಪ್ರಾರಂಭವಾಗಲಿದ್ದು, ಮಂಗಳೂರಿನಲ್ಲಿ ನಾಳೆ ಚಾಲನೆ ನೀಡಲಾಗುವುದು. ಇದು ರಾಷ್ಟೀಯ ಮಟ್ಟದ ಕಾರ್ಯಕ್ರಮವಾಗಿರದೆ ಅಂತರಾಷ್ಟೀಯ ಮಟ್ಟದ ಕಾರ್ಯಕ್ರಮವಾಗಬೇಕಾಗಿದೆ.  ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಸ್ವಯಂ ಸೇವಾ ಸಂಘದವರು ಜೊತೆಗೂಡಿ ಕೆಲಸ ಮಾಡಬೇಕಾಗಿದೆ. ಶುದ್ದಗಾಳಿ ಸೇವನೆಗಾಗಿ ಸಸ್ಯಸಂಕುಲನ ಅಗತ್ಯವಿದೆ, ಅದರಿಂದ ಸಸ್ಯಸಂಕುಲನ ಬೇಳೆಯಬೇಕಾಗಿದೆ  ಎಂದು ಹೇಳಿದರು.

vanamahostava ನಂತರ ಪತ್ರಕರ್ತರೊಂದಿಗೆ ಮಾತಾಡಿ ಈ ಬಾರಿ ರಾಜ್ಯದೆಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ನೆಡಬೇಕಾಗಿದೆ. ರಾಜ್ಯಮಟ್ಟದಲ್ಲಿ ಎಲ್ಲಾ ಬಯಲುಸೀಮೆಯಲ್ಲಿ ಗಿಡಗಳನ್ನು ನೇಡಲಾಗುವುದು. ಅಂತೆಯೇ ಗೋಕಳ್ಳರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ವಿನಾ ಕಾರಣ ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳುವಂತಿಲ್ಲ. ಹಾಗಂತ ಕಾನೂನನ್ನು ಕೈಗೆ ತೆಗೆದುಕೊಂಡವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಮುಂಬರುವ ದಿನಗಳಲ್ಲಿ ಯಾವುದೇ ಕಾಲೇಜಿನಲ್ಲಿ  ಅನಾವಶ್ಯಕ ಮತೀಯ ಭೇದ ಸೃಸ್ಟಿಸುವ ಹಿನ್ನೆಲೆಯಲ್ಲಿ ಗಲಾಟೆ ಮಾಡುತ್ತಿರುವುದು ಕಂಡುಬಂದರೆ ಅಂತಹ ಕಾಲೇಜಿನಲ್ಲಿ ಚುಣಾವಣಾ ಪ್ರಕ್ರಿಯೆಯನ್ನು ನಿಷೇದಿಸಲಾಗುವುದು. ಎಂದು ಹೇಳಿದರು.

ಮಾಜಿ ಮೇಯರ್ ಶಶಿದರ್ ಹೆಗ್ಡೆ, ಕಾರ್ಪೋರೇಟರ್ ಮಹಾಬಲಾ ಮಾರ್ಲಾ,  ಮಂಗಳೂರು ವಲಯ ಅರಣ್ಯಧಿಕಾರಿ ಕ್ಲಿಪರ್ಡ್ ಲೋಬೋ, ಅರಣ್ಯ ಸಂರಕ್ಷಣಾಧಿಕಾರಿ ಪಾಲಯ್ಯ, ಉಪ ಸಂರಕ್ಷಣಾಧಿಕಾರಿ ಶಾಂತಪ್ಪ, ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ.ಹರೀಶ್ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English