ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರ ಸೆರೆ

Friday, December 8th, 2023
MMDA

ಮಂಗಳೂರು : “ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮುಂದುವರಿಸಿದ ಕಾರ್ಯಾಚರಣೆಯಲ್ಲಿ ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ (Methylene dioxy methamphetamine) MDMA ನ್ನು ಮಾರಾಟ ಮಾಡುತ್ತಿದ್ದವವರನ್ನು ದಸ್ತಗಿರಿ ಮಾಡಿ 6 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ. ಮಂಗಳೂರು ನಗರದ ಕದ್ರಿ ಪಾರ್ಕ್ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ […]

ದ.ಕ.: ವಾರಾಂತ್ಯ ರಸ್ತೆಬದಿ ಉತ್ಸವಕ್ಕೆ ಜಿಲ್ಲಾಡಳಿತ ಯೋಜನೆ

Friday, September 24th, 2021
DC Rajendra

ಮಂಗಳೂರು  : ಕೊರೋನ 2 ನೆ ಅಲೆ ತಗ್ಗುತ್ತಿರುವಂತೆಯೇ ಜಿಲ್ಲೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ವ್ಯಾಪಾರಿಗಳಿಗೆ ವೇದಿಕೆಯ ಜತೆಗೆ ಜಿಲ್ಲೆಯ ಜನರಿಗೆ ವೀಕೆಂಡ್ ಮನರಂಜನೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ನಗರದ ಪ್ರಮುಖ ರಸ್ತೆಗಳಾದ ಕದ್ರಿ ಪಾರ್ಕ್ ಎದುರು ಹಾಗೂ ಕ್ಲಾಕ್‌ ಟವರ್ ನಿಂದ ಎಬಿಶೆಟ್ಟಿ ಸರ್ಕಲ್ ರಸ್ತೆಯಲ್ಲಿ ವಾರಾಂತ್ಯ ರಸ್ತೆಬದಿ ಉತ್ಸವ(ವೀಕೆಂಡ್ ಸ್ಟ್ರೀಟ್  ಫೆಸ್ಟಿವಲ್)ಕ್ಕೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಉತ್ಸುಕತೆ ತೋರಿದ್ದಾರೆ. ದ.ಕ. ಜಿಲ್ಲಾ ಕಾರ್ಯಕರ್ತರ  ಪತ್ರಕರ್ತರ ಸಂಘದ ವತಿಯಿಂದ ಇಂದು ಆಯೋಜಿಸಲಾದ ಜಿಲ್ಲಾಧಿಕಾರಿ ಜತೆಗಿನ ಸಂವಾದ […]

ಸಾಮಾಜಿಕ ಜಾಲತಾಣದಲ್ಲಿ ಕದ್ರಿ ಪಾರ್ಕ್ ಜ್ಯೂಸ್ ವ್ಯಾಪಾರಿಗಳ ತೇಜೋವಧೆಗೆ ಯತ್ನಿಸಿದವರ ವಿರುದ್ಧ ದೂರು

Thursday, February 13th, 2020
kadri

ಮಂಗಳೂರು : ಕದ್ರಿ ಪಾರ್ಕ್ ಬಳಿ ಇರುವ ಜ್ಯೂಸ್ ಅಂಗಡಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ನಾಯಿ ಒಂದು ಜ್ಯೂಸಿಗೆ ಬಳಸಲಾಗುವ ಮಂಜುಗಡ್ಡೆಯನ್ನು ತಿನ್ನುವ ವಿಡಿಯೋ ಒಂದನ್ನು ವಾಟ್ಸಾಪ್ ಗಳಲ್ಲಿ ಹರಿಯಬಿಟ್ಟು ಕದ್ರಿ ಪಾರ್ಕ್ ಜ್ಯೂಸ್ ಸ್ಟಾಲ್ ಗಳಲ್ಲಿ ಜ್ಯೂಸು ಕುಡಿಯಬಾರದೆಂದು ಈ ವಿಡಿಯೋ ವೈರಲ್ ಮಾಡಿ ಬಡ ಬೀದಿಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡುವಂತಹ ಕೆಲಸವನ್ನು ಕೆಲವು ವಾಟ್ಸಾಪ್ ವಿಘ್ನ ಸಂತೋಷಿಗಳು ಮಾಡಿರುತ್ತಾರೆ. ಈ ಹುನ್ನಾರವನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ತೀವ್ರವಾಗಿ ಖಂಡಿಸಿದೆ. ಮಹಾನಗರ […]

ಇಂಡಿಗೋ ವಿಮಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ 30 ಮಂದಿ ಯುವಕ – ಯುವತಿಯರಿಗೆ ವಂಚನೆ

Friday, July 19th, 2019
Indigo

ಸುರತ್ಕಲ್‌ : 30ಕ್ಕೂ ಹೆಚ್ಚು ಯುವಕ – ಯುವತಿಯರಿಂದ  ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 6 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣ ಸುರತ್ಕಲ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ಸಂಬಂಧ ಪುತ್ತೂರು ಕೆಮ್ಮಿಂಜೆಯ ಯತೀಶ್‌(28) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯು ಈ ಹಿಂದೆ ಖಾಸಗಿ ವಿಮಾನಯಾನ ಸಂಸ್ಥೆಯ ಕಚೇರಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಈತ ಶೋಕಿ ಜೀವನಕ್ಕಾಗಿ ಹಣ ಮಾಡುವ ಉದ್ದೇಶದಿಂದ ವಿವಿಧ ಏವಿಯೇಷನ್‌ ಕೋರ್ಸ್‌ ಮುಗಿಸಿ ಕೆಲಸ ಹುಡುಕುತ್ತಿದ್ದ ಯುವಜನ ರನ್ನೇ […]

ಕದ್ರಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಒಂದು ಕೋಟಿ ಹದಿನಾರು ಲಕ್ಷ ರೂಪಾಯಿ: ವೇದವ್ಯಾಸ ಕಾಮತ್

Saturday, December 1st, 2018
vedvyas-kamath

ಮಂಗಳೂರು: ಮಂಗಳೂರಿನ ಕದ್ರಿ ಪಾರ್ಕ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಮಾರು ಒಂದು ಕೋಟಿ ಹದಿನಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದರು. ಕದ್ರಿ ಪಾರ್ಕಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಶಾಸಕರು, ವಾಕಿಂಗ್ ಟ್ಯಾಕ್ ಗೆ ಈಗಾಗಲೇ ಇಂಟರ್ ಲಾಕ್ ಅಳವಡಿಸಲಾಗಿದ್ದು, ಇದು ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಅದರೊಂದಿಗೆ ಮಡ್ ವಾಯಿಂಗ್ ಟ್ರಾಕ್ ಕಾಮಗಾರಿಗೆ 15 […]

ಕದ್ರಿ ಪಾರ್ಕ್​ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ!

Tuesday, November 27th, 2018
Kasaragod-lovers

ಮಂಗಳೂರು: ನಗರದ ಕದ್ರಿ ಪಾರ್ಕ್ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. ಕಾಸರಗೋಡಿನ ಹರ್ಷಿತ್ ಕುಮಾರ್ ಹಾಗೂ ಆತನ ಪ್ರಿಯತಮೆ ಆತ್ಮಹತ್ಯೆಗೆ ಯತ್ನಿಸಿದವರು. ಇಂದು ಸಂಜೆ ಕದ್ರಿ ಪಾರ್ಕ್ಗೆ ಬಂದ ಪ್ರೇಮಿಗಳಿಬ್ಬರು, ಸ್ವಲ್ಪ ಹೊತ್ತು ಪಾರ್ಕ್ನಲ್ಲಿ ಸುತ್ತಾಡಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ […]

ಯುವಕರ ಮಂಗಳಮುಖಿ ವೇಷ: ಕದ್ರಿ ಪಾರ್ಕ್ ನಲ್ಲಿ ನಕಲಿ ಬಣ್ಣ ಬಯಲು ಮಾಡಿದ ಕಾರ್ಯಕರ್ತ ಸೌರಾಜ್

Friday, October 5th, 2018
acttivist

ಮಂಗಳೂರು: ಮಂಗಳಮುಖಿಯರ ಮೇಲಿನ ಅನುಕಂಪದಿಂದ ಮಂಗಳಮುಖಿಯರು ಬಳಿ ಬಂದಾಗ ಸಾರ್ವಜನಿಕರು ಅವರಿಗೆ ಹಣವನ್ನು ನೀಡುವುದು ಸಾಮಾನ್ಯ. ಇದನ್ನು ದುರುಪಯೋಗ ಪಡಿಸಿಕೊಂಡು ಕೆಲವು ಯುವಕರು ಮಂಗಳಮುಖಿ ವೇಷ ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಸೌರಾಜ್ ಮಂಗಳೂರು ಬಯಲಿಗೆಳೆದಿದ್ದಾರೆ. ಮಂಗಳೂರಿನ ಕದ್ರಿ ಪಾರ್ಕ್ ಗೆ ಬರುವ ಪ್ರೇಮಿಗಳಿಗೆ, ಸಾರ್ವಜನಿಕರಿಗೆ ಹಣಕ್ಕಾಗಿ ಪೀಡುಸುತ್ತಿದ್ದ ನಕಲಿ ಮಂಗಳಮುಖಿಯರನ್ನು ಸೌರಾಜ್ ಗುರುವಾರ ಫೇಸ್‌ಬುಕ್‌ ಲೈವ್ ಮಾಡುತ್ತಲೇ ಬಯಲಿಗೆಳೆದಿದ್ದಾರೆ. ಹೊರರಾಜ್ಯದಿಂದ ಬಂದ ಯುವಕರು ಮಂಗಳಮುಖಿಯರ ವೇಷ ಧರಿಸಿ ಕದ್ರಿ ಪಾರ್ಕ್ ನಲ್ಲಿ […]

ಸದ್ದಿಲ್ಲದೆ ಕೆಲಸ ಮಾಡಿ ಜನಮನ ಗೆದ್ದ ಜೆ.ಆರ್. ಲೋಬೊ

Friday, May 11th, 2018
j-r-lobo

ಮಂಗಳೂರು: ಸರಕಾರಿ ಅಧಿಕಾರಿಯಾಗಿದ್ದ ಜೆ.ಆರ್.ಲೋಬೊ ಅವರು ಸದ್ದಿಲ್ಲದೆ ಸಾಧಿಸಿದ ಶಾಸಕ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಎಲ್ಲ ಸ್ತರದ ಜನರಿಗೆ ಪ್ರಯೋಜನ ಆಗುವಂತೆ ಸಕಲ ಸೌಲಭ್ಯಗಳು ಮಂಗಳೂರಿನಲ್ಲಿ ಅನುಷ್ಠಾನ ಆಗುವಂತೆ ಶ್ರಮಿಸಿದ ಶಾಸಕ ಲೋಬೊ. ನಗರ ಪ್ರದೇಶದಲ್ಲಿ ಕೆಲಸ ಮಾಡಲು ಹೇಳಿ ಮಾಡಿಸಿದಂತ ಶಾಸಕ ಲೋಬೊ ಎಂದುಹೇಳಬೇಕಾಗುತ್ತದೆ. ಏಕೆಂದರೆ, ನಗರದಲ್ಲಿ ಅತೀ ಶ್ರೀಮಂತರು ಇರುತ್ತಾರೆ ಜೀವನೋಪಾಯಯಕ್ಕಾಗಿ ವಲಸೆ ಬಂದಿರುವ ಬಡ ಕಾರ್ಮಿಕರು ಇರುತ್ತಾರೆ. ಈ ಎಲ್ಲ ಸ್ತರದ ಜನರ ಆಶೋತ್ತಾರಗಳನ್ನು ಪೂರೈಸಲು ನಾಯಕನಾದವನಿಗೆ ಅಂತಹುದೇ ಆದ ಮನಸ್ಸು ಇರಬೇಕಾಗುತ್ತದೆ. […]

ಪುಟಾಣಿ ರೈಲು ಬೋಗಿ ಒಂದೆರಡು ದಿನಗಳಲ್ಲಿ ಮಂಗಳೂರಿಗೆ : ಶಾಸಕ ಜೆ.ಆರ್.ಲೋಬೊ

Saturday, December 16th, 2017
putani-railu

ಮಂಗಳೂರು: ಕದ್ರಿ ಪಾರ್ಕ್ ಪುಟಾಣಿ ರೈಲಿನ ಬೋಗಿ ಇನ್ನೊಂದೆರಡು ದಿನಗಳಲ್ಲಿ ಮೈಸೂರಿನಿಂದ ಮಂಗಳೂರಿಗೆ ಬರಲಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಕದ್ರಿ ಪಾರ್ಕ್ ಪುಟಾಣಿ ರೈಲಿನ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು. ಈ ಕಾಮಗಾರಿ ವಿಳಂಭವಾಯಿತು ಎನ್ನುವುದನ್ನು ಅಲ್ಲಗಳೆದ ಜೆ.ಆರ್.ಲೋಬೊ ಇಲ್ಲಿ ತಾಂತ್ರಿಕ ಸಮಸ್ಯೆಗಳಿದ್ದವು. ಅವುಗಳನ್ನು ನಿವಾರಿಸುವುದಕ್ಕೆ ವಿಳಂಭವಾಯಿತೇ ಹೊರತು ಈ ಕಾಮಗಾರಿಯಲ್ಲಿ ವಿಳಂಭವಾಗಿಲ್ಲ ಎಂದರು. ಇದು ಆರಂಭದಲ್ಲಿ 30 ಲಕ್ಷ ರೂಪಾಯಿ ಇದ್ದುದು ಈಗ 1.30 ಕೋಟಿ ರೂಪಾಯಿಗೆ ಬಂದಿದೆ. ಈ ಕಾಮಗಾರಿಯನ್ನು ಮಾಡುತ್ತಾ […]

ಅಂತಾರಾಷ್ಟ್ರೀಯ ದ್ರಾಕ್ಷಾರಸ ಉತ್ಸವಕ್ಕೆ ಮಂಗಳೂರಿನಲ್ಲಿ ಉತ್ತಮ ಚಾಲನೆ

Saturday, December 9th, 2017
wine-festival

ಮಂಗಳೂರು: ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಡಿ.8ರಿಂದ 10ರವರೆಗೆ ಕದ್ರಿ ಪಾರ್ಕ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದ್ರಾಕ್ಷಾರಸ ಉತ್ಸವ-2017ಕ್ಕೆ  ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು . ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಸುಮಾರು 12ರಿಂದ 15 ವೈನರಿಗಳು ಭಾಗವಹಿಸಿ ಸುಮಾರು 150ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಉತ್ಸವದಲ್ಲಿ ಪ್ರದರ್ಶಿಸಿದವು. ಹಳೆಯ ವೈನ್ ಪ್ರದೇಶಗಳಾದ ಯುರೋಪ್ ಖಂಡ ಮತ್ತು ಹೊಸ ವೈನ್ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚಿಲಿ, ಅಮೆರಿಕ ಮೊದಲಾದ ದೇಶಗಳ ವೈನ್‌ಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಉತ್ಸವದಲ್ಲಿ […]