ಸಾಮಾಜಿಕ ಜಾಲತಾಣದಲ್ಲಿ ಕದ್ರಿ ಪಾರ್ಕ್ ಜ್ಯೂಸ್ ವ್ಯಾಪಾರಿಗಳ ತೇಜೋವಧೆಗೆ ಯತ್ನಿಸಿದವರ ವಿರುದ್ಧ ದೂರು

9:33 AM, Thursday, February 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kadri

ಮಂಗಳೂರು : ಕದ್ರಿ ಪಾರ್ಕ್ ಬಳಿ ಇರುವ ಜ್ಯೂಸ್ ಅಂಗಡಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ನಾಯಿ ಒಂದು ಜ್ಯೂಸಿಗೆ ಬಳಸಲಾಗುವ ಮಂಜುಗಡ್ಡೆಯನ್ನು ತಿನ್ನುವ ವಿಡಿಯೋ ಒಂದನ್ನು ವಾಟ್ಸಾಪ್ ಗಳಲ್ಲಿ ಹರಿಯಬಿಟ್ಟು ಕದ್ರಿ ಪಾರ್ಕ್ ಜ್ಯೂಸ್ ಸ್ಟಾಲ್ ಗಳಲ್ಲಿ ಜ್ಯೂಸು ಕುಡಿಯಬಾರದೆಂದು ಈ ವಿಡಿಯೋ ವೈರಲ್ ಮಾಡಿ ಬಡ ಬೀದಿಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡುವಂತಹ ಕೆಲಸವನ್ನು ಕೆಲವು ವಾಟ್ಸಾಪ್ ವಿಘ್ನ ಸಂತೋಷಿಗಳು ಮಾಡಿರುತ್ತಾರೆ. ಈ ಹುನ್ನಾರವನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ತೀವ್ರವಾಗಿ ಖಂಡಿಸಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದು ಇದು ಕದ್ರಿ ಪಾರ್ಕ್ ಬಳಿ ಇರುವ ಜ್ಯೂಸು ಅಂಗಡಿಗಳಲ್ಲಿ ನಡೆದ ಪ್ರಕರಣ ಅಲ್ಲ ಎಂದು ಖಚಿತಪಡಿಸಿದ್ದಾರೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋ ಸಂದೇಶಗಳನ್ನು ವೈರಲ್ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ನೇತೃತ್ವದಲ್ಲಿ ಕದ್ರಿ ಪಾರ್ಕ್ ಜ್ಯೂಸು ಅಂಗಡಿದಾರರ ನಿಯೋಗ ನಗರ ಕೇಂದ್ರ ವಿಭಾಗದ ಎಸಿಪಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿತು.

ನಿಯೋಗದಲ್ಲಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಕಾರ್ಯದರ್ಶಿ ಹರೀಶ್ ಪೂಜಾರಿ ಮುಖಂಡರಾದ ಆದಮ್ ಬಜಾಲ್, ಆಸೀಫ್ ಬಾವು, ಸಿ.ಎಸ್ ಶಂಕರ್, ಕದ್ರಿ ಜ್ಯೂಸು ಮಾರಾಟಗಾರರ ಪ್ರತಿನಿಧಿಗಳಾದ ಕ್ಲೋಡಿ ಡಿಸೋಜಾ, ವಿಶ್ವನಾಥ್ ಶೆಟ್ಟಿ, ಅಬೂಬಕ್ಕರ್, ಬ್ರಹ್ಮಪುತ್ರ, ವಿಶ್ವನಾಥ್ ಪೂಜಾರಿ, ಧರ್ಮರಾಜ್ ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English