ಸುರತ್ಕಲ್ : 30ಕ್ಕೂ ಹೆಚ್ಚು ಯುವಕ – ಯುವತಿಯರಿಂದ ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 6 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ಸಂಬಂಧ ಪುತ್ತೂರು ಕೆಮ್ಮಿಂಜೆಯ ಯತೀಶ್(28) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಯು ಈ ಹಿಂದೆ ಖಾಸಗಿ ವಿಮಾನಯಾನ ಸಂಸ್ಥೆಯ ಕಚೇರಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಈತ ಶೋಕಿ ಜೀವನಕ್ಕಾಗಿ ಹಣ ಮಾಡುವ ಉದ್ದೇಶದಿಂದ ವಿವಿಧ ಏವಿಯೇಷನ್ ಕೋರ್ಸ್ ಮುಗಿಸಿ ಕೆಲಸ ಹುಡುಕುತ್ತಿದ್ದ ಯುವಜನ ರನ್ನೇ ಬಲೆಗೆ ಹಾಕಿಕೊಂಡಿದ್ದ. ಆತನು ಪ್ರತಿಯೊಬ್ಬ ರಿಂದಲೂ 28 ಸಾ.ರೂ.ಹಣ ಪಡೆ ದಿದ್ದು, ಜು.7ರಂದು ಕೇರಳದಲ್ಲಿ ಸಂದರ್ಶನವಿದೆ ಎಂದು ನಂಬಿಸಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದ. ಮೋಸ ಹೋದ ಹೊಸಬೆಟ್ಟಿನನ ಲಿಕಿಂಗ್ ಎಂಬವರು ನೀಡಿದ ದೂರಿನ ಮೇರೆಗೆ ಸುರತ್ಕಲ್ ಪೊಲೀಸರು ಆರೋಪಿಯನ್ನು ಕದ್ರಿ ಪಾರ್ಕ್ ಬಳಿಯಿಂದ ವಶಕ್ಕೆ ಪಡೆದರು. ಆತನಿಗೆ ನ್ಯಾಯಾಂಗ ಬಂಧನವಿಸಲಾಗಿದೆ.
Click this button or press Ctrl+G to toggle between Kannada and English