ಮಂಗಳೂರು: ಮಂಗಳಮುಖಿಯರ ಮೇಲಿನ ಅನುಕಂಪದಿಂದ ಮಂಗಳಮುಖಿಯರು ಬಳಿ ಬಂದಾಗ ಸಾರ್ವಜನಿಕರು ಅವರಿಗೆ ಹಣವನ್ನು ನೀಡುವುದು ಸಾಮಾನ್ಯ.
ಇದನ್ನು ದುರುಪಯೋಗ ಪಡಿಸಿಕೊಂಡು ಕೆಲವು ಯುವಕರು ಮಂಗಳಮುಖಿ ವೇಷ ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಸೌರಾಜ್ ಮಂಗಳೂರು ಬಯಲಿಗೆಳೆದಿದ್ದಾರೆ.
ಮಂಗಳೂರಿನ ಕದ್ರಿ ಪಾರ್ಕ್ ಗೆ ಬರುವ ಪ್ರೇಮಿಗಳಿಗೆ, ಸಾರ್ವಜನಿಕರಿಗೆ ಹಣಕ್ಕಾಗಿ ಪೀಡುಸುತ್ತಿದ್ದ ನಕಲಿ ಮಂಗಳಮುಖಿಯರನ್ನು ಸೌರಾಜ್ ಗುರುವಾರ ಫೇಸ್‌ಬುಕ್ ಲೈವ್ ಮಾಡುತ್ತಲೇ ಬಯಲಿಗೆಳೆದಿದ್ದಾರೆ.
ಹೊರರಾಜ್ಯದಿಂದ ಬಂದ ಯುವಕರು ಮಂಗಳಮುಖಿಯರ ವೇಷ ಧರಿಸಿ ಕದ್ರಿ ಪಾರ್ಕ್ ನಲ್ಲಿ ಇರುವುದನ್ನು ಕಂಡ ಸೌರಾಜ್ ಸಾರ್ವಜನಿಕವಾಗಿ ನಕಲಿಗಳ ಬಣ್ಣವನ್ನು ಬಯಲು ಮಾಡಿದ್ದಾರೆ. ತಲೆಗೆ ಟೋಪನ್ ಹಾಕಿ, ತಮ್ಮ ದೇಹವನ್ನು ಮಂಗಳಮುಖಿಯರಂತೆ ಕಾಣುವಂತೆ ವೇಷ ಧರಿಸಿ ಜನರನ್ನು ಸುಲಿಗೆ ಮಾಡುತ್ತಿದ್ದವರು ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Click this button or press Ctrl+G to toggle between Kannada and English