ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ಬಿಲ್ಲವರ ಮಹಿಳಾ ಸಂಘ ಕುದ್ರೋಳಿ ಇವರ ಸಹಯೋಗದೊಂದಿಗೆ ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ಆಗಸ್ಟ್ 4 ರಂದು ಆಟಿದ ತಮ್ಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃಧ್ದಿ ಸಚಿವ ವಿನಯಕುಮಾರ್ ಸೊರಕೆಯವರು ನೆರವೇರಿಸಿದರು. ನಂತರ ಅವರು ಮಾತಾಡಿ ಇಂದು ತುಳುನಾಡಿನ ಸಂಪ್ರಾದಾಯ ಆಚರಣೆಗಳು ಮರೆಯಾಗುತ್ತಿದ್ದು ಅದನ್ನು ರಕ್ಷಿಸುವ ಕೆಲಸವಾಗಬೇಕು, ಜನತೆ ನಗರ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದು ಹಳ್ಳಿಭಾಗದ ಆಚರಣೆಗಳು ಮರೆಯಾಗುತ್ತಿವೆ ಎಂದರು.
ಇಂತಹ ಅಟಿಯ ಕಾರ್ಯಕ್ರಮಗಳು ನಗರದ ಜನತೆಗೆ ತುಳುನಾಡಿನ ಸಂಪ್ರಾದಾಯ ಬಗ್ಗೆ ಅರಿವು ಮೂಡಿಸುತ್ತದೆ. ಹಿರಿಯರು ಮಕ್ಕಳಿಗೆ ಸಂಸ್ಕಾರವನ್ನು ಭೋಧಿಸುವ ಕೆಲಸ ಮಾಡಬೇಕು. ಮಕ್ಕಳು ಸಂಸ್ಕ್ರತಿಯಿಂದ ದೂರವಾಗಬಾರದು. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಮೌಲ್ಯವನ್ನು ಬಿತ್ತುವ ಕೆಲಸ ಮಾಡವ ಜವಾಬ್ದಾರಿ ಪೋಷಕರದ್ದಾಗಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸುಮಲತ ಎನ್ ಸುವರ್ಣ ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗಿಶ್ ಕೈರೋಡಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ಚಂದ್ರ ಡಿ.ಸುವರ್ಣ, ಯೂನಿಯನ್ ಉಪಾಧ್ಯಕ್ಷ ಮೋಹನ್ ದಾಸ್ ಮುಗಿಲ, ಮಹಿಳಾ ಸಂಘದ ಅಧ್ಯಕ್ಷ ಸುಖಾಲಕ್ಷಿ ವೈ ಸುವರ್ಣ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English