ಊರಿಗೆ ಬರುವ ಮಾರಿ ಕಳೆವ ‘ಆಟಿ ಕಳೆಂಜ’: ತುಳುನಾಡಿನ ವಿಶಿಷ್ಟ ಆಚರಣೆ

Thursday, August 5th, 2021
Ati Kalanja

ಸುರತ್ಕಲ್ : ವಿನಾಯಕ ಫ್ರೆಂಡ್ಸ್ ಕ್ಲಬ್ ಮೂರನೇ ಬ್ಲಾಕ್ ಕಾಟಿಪಳ್ಳ ಮತ್ತು ಗಗ್ಗರ ದೈವೋಲೆನ ಪದಿನಾಜಿ ಕಟ್ಲೆ ಇದರ ಸಹಯೋಗದಲ್ಲಿ ‘ಆಟಿ ಕಳೆಂಜ ನಿಮ್ಮ ಮನೆಗೆ’ ಎಂಬ ಆಟಿಕಳಂಜ ಮನೆ ಮನೆ ಗೆ ಭೇಟಿ ನೀಡುವ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ದೈವದ ಮಧ್ಯಸ್ಥ ರವಿರಾಜ ಶೆಟ್ಟಿ ಮಾತನಾಡಿ ಅಳಿಯುತ್ತಿರುವ ಆಟಿಕಳಂಜ ಸಂಪ್ರದಾಯದ ಉಳಿಯುವಿಕೆಗಾಗಿ ವಿನಾಯಕ ಫ್ರೆಂಡ್ಸ್ ಕ್ಲಬ್ ಕಾಟಿಪಳ್ಳ ಮತ್ತು ಗಗ್ಗರ ದೈವೋಲೆನ ಪದಿನಾಜಿ ಕಟ್ಲೆ ಇದರ ಪ್ರಯತ್ನ ಶ್ಲಾಘನೀಯ ಎಂದರು. ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ […]

‘ತುಳು ಇತಿಹಾಸದಲ್ಲಿ ಹವ್ಯಾಸಿಗಳ ಕೊಡುಗೆ ಅನನ್ಯʼ : ಡಾ. ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಮತ

Sunday, July 11th, 2021
Ganapathi Bhat

ಮಂಗಳೂರು: ಪ್ರಾಚೀನ ತುಳು ಇತಿಹಾಸವನ್ನು ಯಾರೂ ದಾಖಲಿಸಿಲ್ಲ ಎಂಬುದು ಆಧುನಿಕ ದೃಷ್ಟಿಕೋನವಷ್ಟೇ. ನಮ್ಮ ಹಿರಿಯರು ಮಿತಿಯೊಳಗೆ, ಅಸಂಪ್ರದಾಯಿಕ ರೀತಿಯಲ್ಲಿ ಇತಿಹಾಸ ದಾಖಲಿಸಿದ್ದಾರೆ, ಎಂದು ಮೂಡಬಿದ್ರಿ ಶ್ರೀ ದವಳಾ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮಾನುಷ (ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘ) ದ ಸಹಯೋಗದೊಂದಿಗೆ ಆರಂಭಿಸಿರುವ ತುಳುನಾಡು, ಕೊಡಗುಗಳ ಇತಿಹಾಸ […]

ಖಡ್ಸಲೆಗೆ ಕಾಂಗ್ರೆಸ್ಸಿನಿಂದ ಅಪಮಾನ : ಸುನಿಲ್ ಕುಮಾರ್ ಖಂಡನೆ

Thursday, July 8th, 2021
SunilKumar

ಕಾರ್ಕಳ : ತುಳುನಾಡಿನ ದೈವಾರಾಧನೆಯು ಬಹು ಹಿಂದಿನ ಕಾಲದಿಂದಲೂ ಕಟ್ಟು ಕಟ್ಟಲೆಗಳನ್ನೊಳಗೊಂಡು ನಡೆದು ಬರುತ್ತಿರುವ ಧಾರ್ಮಿಕ ಆಚರಣೆ. ಇದರಲ್ಲಿ ದೈವಗಳು ನುಡಿ ಕೊಡುವ ಖಡ್ಸಲೆ (ದೈವದ ಖಡ್ಗ) ಇದಕ್ಕೆ ಅದರದೇ ಆದ ವಿಶಿಷ್ಟ ಪ್ರಾದಾನ್ಯತೆ ಇದೆ. ದೈವಾರಾಧನೆಗೆ ಒಂದು ಶಕ್ತಿ ಇದೆ. ಆ ಖಡ್ಸಲೆಯಲ್ಲಿ ಕೊಡುವ ನುಡಿಯನ್ನು ಇಡೀ ತುಳುನಾಡು ಪಾಲನೆ ಮಾಡಿಕೊಂಡು ಬರುತ್ತಿದೆ. ಇಂತಹ ಪ್ರಾಮುಖ್ಯತೆ ಹೊಂದಿರುವ ಖಡ್ಸಲೆಯನ್ನು ಒಂದು ರಾಜಕೀಯ ವೇದಿಕೆಯಲ್ಲಿ ರಾಜಕೀಯ ಮುಖಂಡರಿಗೆ ಸ್ಮರಣಿಕೆಯಾಗಿ ಕೊಟ್ಟಿರುವುದು ಕಾಂಗ್ರೆಸ್ ಪಕ್ಷದ ದಿವಾಳಿತನ, ಕಾಂಗ್ರೆಸ್ ಪಕ್ಷ […]

ತುಳುನಾಡಿನ ದೈವ ದೇವರ ನಿಂದನೆ, ಉತ್ತರ ಕನ್ನಡದ ವ್ಯಕ್ತಿಯ ಬಂಧನ

Tuesday, October 29th, 2019
Mudduraj

ಮಂಗಳೂರು: ತುಳುನಾಡಿನ ದೈವ ದೇವರು ಮತ್ತು ಇತರ ಪವಿತ್ರ ಸಂಪ್ರದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಸೈಬರ್ ಅಪರಾಧ ಪೊಲೀಸರು ಭಾನುವಾರ ಉತ್ತರ ಕನ್ನಡದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಿದ್ದಾಪುರ ನಿವಾಸಿ ದೇಸಾಯಿ ಗೌಡರ ಮಗ ಮುದುರಾಜ್ ಕನ್ನಡಿಗ  ಎಂದು ಗುರುತಿಸಲಾಗಿದೆ. ಈ ಆರೋಪದ ವಿರುದ್ಧ ಅರ್ನಾಲ್ಡ್ ತುಲುವೆ (29)  ದೂರು ದಾಖಲಿಸಿದ್ದು, ‘ಟ್ರೋಲ್ ಕನ್ನಡಿಗ’, ಫೇಸ್‌ಬುಕ್‌ ಪುಟದ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.  ದೈವರದೇನ ಬಗ್ಗೆ ಅಗೌರವದ ಮಾತುಗಳನ್ನು ರವಾನಿಸಿ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ದೂರಲಾಗಿದೆ. […]

ತುಳುನಾಡಿನ ಉದಯಕ್ಕೆ ಹೋರಾಟಕ್ಕೂ ಸಿದ್ಧ – ಒಡಿಯೂರು ಶ್ರೀ

Friday, August 9th, 2013
odiyooru Tulu Nadu

ವಿಟ್ಲ : ತುಳು ಭಾಷೆಯ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತುಳುನಾಡು, ತುಳು ಭಾಷೆ ಉಳಿವಿಗಾಗಿ ನಾವು ಒಟ್ಟಾಗಿ ಹೋರಾಡಬೇಕು. ಪ್ರೀತಿ-ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುನಾಡು; ತುಳುವರು. ತುಳು ಮಾತನಾಡುವಾಗ ನಮ್ಮಲ್ಲಿ ಆತ್ಮೀಯತೆ ಉಕ್ಕಿ ಬರುವುದರೊಂದಿಗೆ ಪ್ರತಿಯೊಂದು ಶಬ್ದದ ಹಿಂದೆಯೂ ಪ್ರೀತಿಯ ಸೆಳೆ ಇದೆ. ಈ ನಿಟ್ಟಿನಲ್ಲಿ ತುಳು ಒರಿಪು ಕೇಂದ್ರ ಸ್ಥಾಪಿಸುವ ಇರಾದೆ ಇದೆ. ತುಳು ಸಂಸ್ಕೃತಿ ದರ್ಶನ ಕಾರ್ಯಕ್ರಮವನ್ನು ಆಯೋಜಿಸುವ ಸಂಕಲ್ಪ ಇದೆ. ತುಳುನಾಡಿನಲ್ಲಿ ಯಾರೆಲ್ಲ ಇದ್ದಾರೆಯೋ ಅವರೆಲ್ಲರೂ ತುಳುವರೇ. […]

ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಟಿದ ತಮ್ಮನ

Tuesday, August 6th, 2013
ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಟಿದ ತಮ್ಮನ

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ಬಿಲ್ಲವರ ಮಹಿಳಾ ಸಂಘ ಕುದ್ರೋಳಿ ಇವರ ಸಹಯೋಗದೊಂದಿಗೆ ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ಆಗಸ್ಟ್ 4 ರಂದು ಆಟಿದ ತಮ್ಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃಧ್ದಿ ಸಚಿವ ವಿನಯಕುಮಾರ್ ಸೊರಕೆಯವರು ನೆರವೇರಿಸಿದರು. ನಂತರ ಅವರು ಮಾತಾಡಿ ಇಂದು ತುಳುನಾಡಿನ ಸಂಪ್ರಾದಾಯ ಆಚರಣೆಗಳು ಮರೆಯಾಗುತ್ತಿದ್ದು ಅದನ್ನು ರಕ್ಷಿಸುವ ಕೆಲಸವಾಗಬೇಕು, ಜನತೆ ನಗರ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದು ಹಳ್ಳಿಭಾಗದ ಆಚರಣೆಗಳು ಮರೆಯಾಗುತ್ತಿವೆ ಎಂದರು. ಇಂತಹ ಅಟಿಯ ಕಾರ್ಯಕ್ರಮಗಳು ನಗರದ ಜನತೆಗೆ ತುಳುನಾಡಿನ […]