ಖಡ್ಸಲೆಗೆ ಕಾಂಗ್ರೆಸ್ಸಿನಿಂದ ಅಪಮಾನ : ಸುನಿಲ್ ಕುಮಾರ್ ಖಂಡನೆ

6:01 PM, Thursday, July 8th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

SunilKumar ಕಾರ್ಕಳ : ತುಳುನಾಡಿನ ದೈವಾರಾಧನೆಯು ಬಹು ಹಿಂದಿನ ಕಾಲದಿಂದಲೂ ಕಟ್ಟು ಕಟ್ಟಲೆಗಳನ್ನೊಳಗೊಂಡು ನಡೆದು ಬರುತ್ತಿರುವ ಧಾರ್ಮಿಕ ಆಚರಣೆ. ಇದರಲ್ಲಿ ದೈವಗಳು ನುಡಿ ಕೊಡುವ ಖಡ್ಸಲೆ (ದೈವದ ಖಡ್ಗ) ಇದಕ್ಕೆ ಅದರದೇ ಆದ ವಿಶಿಷ್ಟ ಪ್ರಾದಾನ್ಯತೆ ಇದೆ. ದೈವಾರಾಧನೆಗೆ ಒಂದು ಶಕ್ತಿ ಇದೆ. ಆ ಖಡ್ಸಲೆಯಲ್ಲಿ ಕೊಡುವ ನುಡಿಯನ್ನು ಇಡೀ ತುಳುನಾಡು ಪಾಲನೆ ಮಾಡಿಕೊಂಡು ಬರುತ್ತಿದೆ.

ಇಂತಹ ಪ್ರಾಮುಖ್ಯತೆ ಹೊಂದಿರುವ ಖಡ್ಸಲೆಯನ್ನು ಒಂದು ರಾಜಕೀಯ ವೇದಿಕೆಯಲ್ಲಿ ರಾಜಕೀಯ ಮುಖಂಡರಿಗೆ ಸ್ಮರಣಿಕೆಯಾಗಿ ಕೊಟ್ಟಿರುವುದು ಕಾಂಗ್ರೆಸ್ ಪಕ್ಷದ ದಿವಾಳಿತನ, ಕಾಂಗ್ರೆಸ್ ಪಕ್ಷ ಇಡೀ ತುಳುನಾಡಿಗೆ ಅಪಮಾನ ಮಾಡಿದೆ. ಸ್ಮರಣಿಕೆ ನೀಡಲು ಬೇಕಾದಷ್ಟು ಬೇರೆ ಬೇರೆ ಅವಕಾಶ ಇದ್ದರೂ ಸಹ ಕಾಂಗ್ರೆಸ್ ಮುಖಂಡರು ದೈವಾರಾಧನೆಯ ಖಡ್ಸಲೆ ನೀಡಿರುವುದು ಖಂಡನೀಯ. ಈ ಕ್ಷಣವೇ ಇಡೀ ತುಳುನಾಡಿಗೆ ಕ್ಷಮೆ ಯಾಚಿಸುವಂತೆ ಆಗ್ರಹಿಸುತ್ತೇನೆ.

ಕಾಂಗ್ರೆಸ್ ಈ ತರಹ ತುಳುನಾಡಿಗೆ ಅವಮಾನ ಮಾಡುತ್ತಿರುವುದು ಹೊಸತೇನಲ್ಲ. ಇಂತಹ ಅನೇಕ ನಡವಳಿಕೆಯಲ್ಲಿ ಬೇರೆ ಬೇರೆ ಸಮಯಗಳಲ್ಲಿ ಅವಮಾನ ಮಾಡುತ್ತಾ ಬಂದಿದೆ. ಇನ್ನಾದರೂ ಕಾಂಗ್ರೆಸ್ ಇಂತಹ ಬುದ್ದಿಯನ್ನು ಬಿಡಬೇಕು ಎಂದು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

DK-Shivakumar

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English