ವಿಟ್ಲ : ತುಳು ಭಾಷೆಯ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತುಳುನಾಡು, ತುಳು ಭಾಷೆ ಉಳಿವಿಗಾಗಿ ನಾವು ಒಟ್ಟಾಗಿ ಹೋರಾಡಬೇಕು. ಪ್ರೀತಿ-ವಿಶ್ವಾಸಕ್ಕೆ ಇನ್ನೊಂದು ಹೆಸರು ತುಳುನಾಡು; ತುಳುವರು.
ತುಳು ಮಾತನಾಡುವಾಗ ನಮ್ಮಲ್ಲಿ ಆತ್ಮೀಯತೆ ಉಕ್ಕಿ ಬರುವುದರೊಂದಿಗೆ ಪ್ರತಿಯೊಂದು ಶಬ್ದದ ಹಿಂದೆಯೂ ಪ್ರೀತಿಯ ಸೆಳೆ ಇದೆ. ಈ ನಿಟ್ಟಿನಲ್ಲಿ ತುಳು ಒರಿಪು ಕೇಂದ್ರ ಸ್ಥಾಪಿಸುವ ಇರಾದೆ ಇದೆ. ತುಳು ಸಂಸ್ಕೃತಿ ದರ್ಶನ ಕಾರ್ಯಕ್ರಮವನ್ನು ಆಯೋಜಿಸುವ ಸಂಕಲ್ಪ ಇದೆ. ತುಳುನಾಡಿನಲ್ಲಿ ಯಾರೆಲ್ಲ ಇದ್ದಾರೆಯೋ ಅವರೆಲ್ಲರೂ ತುಳುವರೇ. 8ನೇ ಪರಿಚ್ಚೇದದಲ್ಲಿ ತುಳು ಭಾಷೆ ಸೇರುವವರೆಗೆ ನಾವು ಹೋರಾಟವನ್ನು ನಿಲ್ಲಿಸಬಾರದು. ತುಳುನಾಡಿನಲ್ಲಿ ಪ್ರಕೃತಿಗೆ ವಿರೋಧವಾದ ಯಾವುದೇ ಯೋಜನೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀಕ್ಷೇತ್ರ ಒಡಿಯೂರ್ದ ತುಳುಕೂಟ ಮತ್ತು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ ಜಂಟಿಯಾಗಿ ಆಯೋಜಿಸಿದ ‘ಆಟಿದ ಆಯನೋ’ ಕಾರ್ಯಕ್ರಮವನ್ನು ಕಳಸೆಗೆ ಭತ್ತ ತುಂಬಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸುಸಂದರ್ಭ ಶ್ರೀ ಎ.ಸಿ. ಭಂಡಾರಿ, ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಪಿ. ರಘುರಾಮ ಶೆಟ್ಟಿ, ‘ಗುರುಶರಣ’ ಮುಳಿಯ ಶಂಕರ ಭಟ್ಟ, ಒಡಿಯೂರು ಶಾಲಾ ಮುಖ್ಯೋಪಾಧ್ಯಾಯ ಅಮೈ ಕೃಷ್ಣ ಭಟ್, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮಂಗಳೂರು ವಲಯದ ಅಧ್ಯಕ್ಷ ಜಯಂತ್ ಜೆ.ಕೋಟ್ಯಾನ್, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಆಟಿ ತಿಂಗಳ ವಿಶೇಷ ಶಾಖಾಹಾರಿ ಸುಮಾರು 77 ಖಾದ್ಯಗಳು ಸ್ಪಧರ್ೆಯಲ್ಲಿ ಪ್ರದರ್ಶನಕ್ಕಿದ್ದವು. ಪ್ರಥಮ ಬಹುಮಾನವನ್ನು ಶ್ರೀಮತಿ ಸುಗುಣಾ ಜಿ.ಕೆ., ಉರ್ವ, ಮಂಗಳೂರು (ಮೆಂತೆ ಸೊಪ್ಪು ಮತ್ತು ವಿಟಮಿನ್ ಸೊಪ್ಪಿನ ಚಟ್ಟಂಬಡೆ) ದ್ವಿತೀಯ ಬಹುಮಾನವನ್ನು ಚಂದ್ರಾವತಿ ಬೇಡಗುಡ್ಡೆ (ಹಲಸಿನ ಕೂಂಜಿಯ ಪತ್ರೊಡೆ) ಅತೀ ಹೆಚ್ಚು ಖಾದ್ಯಗಳನ್ನು ಮಾಡಿದ ಶ್ರೀಮತಿ ಸಬಿತಾ, ಕೊಂಚಾಡಿ ಇವರು ಪ್ರೋತ್ಸಾಹಕರ ಬಹುಮಾನವನ್ನು ಪಡೆದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ಟ ಸ್ವಾಗತಿಸಿ, ಸುಬ್ರಹ್ಮಣ್ಯ ಒಡಿಯೂರು ಧನ್ಯವಾದವಿತ್ತರು. ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English