ಮಂಗಳೂರು: ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆರ್.ಎಸ್.ಎಸ್ ಮುಖಂಡ ಸುದರ್ಶನ್ ಜೀ ಹೇಳಿಕೆಯನ್ನು ಖಂಡಿಸಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಯಿತು.
ದಿವಂಗತ ರಾಜೀವ್ ಗಾಂಧೀ ಹಾಗೂ ಇಂದಿರಾ ಗಾಂಧಿಯವರನ್ನು ಕೊಂದಿದ್ದು ಸೋನಿಯಾಗಾಂಧಿ ಎಂದು ಆರ್.ಎಸ್.ಎಸ್ ಮಾಜಿ ಗುರು ಸುದರ್ಶನ್ ಜೀ ಹೇಳಿಕೆ ಅವಿವೇಕ ತನದ್ದು. ಅಲ್ಲದೆ ಸೋನಿಯಾ ಗಾಂಧಿಯವರನ್ನು ಸಿಐಎ ಏಜೆಂಟ್ ಎಂದು ಬಿಂಬಿಸಿರುವುದು ತೀರ ಕೀಳುಮಟ್ಟದ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಂ.ಜಿ ಹೆಗ್ಡೆ ಹೇಳಿದರು.
ಬಿಜೆಪಿಯು ಎಲ್ಲಾ ನಿರ್ಣಯಗಳು ಜ್ಯಾರಿಯಾಗುವುದು. ಆರ್.ಎಸ್.ಎಸ್ ಪ್ರಧಾನ ಕಛೇರಿಯಲ್ಲಿ ಬಿಜೆಪಿಯ ಓಟ್ ಬ್ಯಾಂಕ್ ಏಜೆಂಟ್ ಆಗಿ ಆರ್.ಎಸ್.ಎಸ್. ಕಾರ್ಯನಿರ್ವಹಿಸುತ್ತಿದೆ. ಆರ್.ಎಸ್.ಎಸ್ ನ ಶಕ್ತಿ ಕುಂದಿ ಬೀದಿಗೆ ಬೀಳುತ್ತಿದೆ, ಹಾಗಾಗಿ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷ ಐವನ್ ಡಿಸೋಜಾ ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಯುವಕಾಂಗ್ರೆಸ್ನ ನಾಗೇಂದ್ರ, ಜಿಲ್ಲಾ ಕಾಂಗ್ರೆಸ್ ನ ಕಾರ್ಯದದರ್ಶಿ ಸದಾಶಿವ ಉಳ್ಳಾಲ, ಯುವ ಕಾಂಗ್ರೆಸ್ನ ನಗರಾಧ್ಯಕ್ಷ ಅರುಣ್ ಕುವೆಲ್ಲೋ, ಪ್ರವೀಣ್ ಆಳ್ವಾ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English