ಮಂಗಳೂರು : ನಗರದ ಜ್ಯೋತಿ ಸರ್ಕಲ್ ಬಳಿ ಇರುವ ಹೋಟೆಲ್ ವುಡ್ ಲ್ಯಾಂಡ್ ನಲ್ಲಿ ಆಗಸ್ಟ್ 21ಕ್ಕೆ ಅಡಿಕೆ ಮತ್ತು ತೆಂಗು ಬೆಳೆಗಾರರ ಸಂಘಟನೆಗಳ ಮುಖಂಡರ ಸಮಾಲೋಚನೆ ಸಭೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ರೋಹಿತಾಕ್ಷ ರೈ ಕೆ.ರವರು ಆಗಸ್ಟ್ 17ರಂದು ನಡದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದರು.
ಬೃಹತ್ ಕೃಷಿಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನಾಧಾರ ತೋರುತ್ತಿರುವುದು ಬೆಳೆಗಾರರಿಗೆ ಸರಕಾದ ಮೇಲೆ ಜಿಗುಪ್ಸೆ ತಂದಿದೆ. ರೈತರ ಸಾಲ ಮನ್ನಾ,ಅಡಿಕೆ ಎಲೆ ಹಲದಿ ರೋಗದಿಂದ ತೋಟವನ್ನು ಕಳಕೊಂಡವರಿಗೆ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಸಂಘಟನೆಗಳು ಸರಕಾರದ ಗಮನಕ್ಕೆ ತಂದ್ದಿದ್ದು ಇದರ ಪರ ಹಲವಾರು ಪ್ರತಿಭಟನೆಗಳನ್ನು ನಡೆಸಿದೆ. ಅಡಿಕೆ ಮತ್ತು ತೆಂಗು ಬೆಳೆಗಾರರ ಬೇಡಿಕೆಗಳನ್ನು ರಾಷ್ಟ್ರಿಯ ಮಟ್ಟದಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ಈ ಸಭೆಯನ್ನು ಕರೆಯಲಾಗಿದೆ.
ಪತ್ರಿಕಾಘೋಷ್ಟಿಯಲ್ಲಿ ಗುಂಡ್ಯಡ್ಕ ವೆಂಕಟ್ರಮಣ ಭಟ್, ರವಿಕಿರಣ ಪುಣಚ, ರಮೇಶ್ ಪೈ, ಪ್ರಕಾಶ್ ಅಮನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English