ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಯ ವೈಪಲ್ಯವಿದ್ದು ಅದನ್ನು ಸರಿಪಡಿಸುವ ಪರವಾಗಿ ಬಲಿಷ್ಠ ಗೋರಕ್ಷಣಾ ಕಾನೂನು ಜಾರಿಗೆ ತರಲು ಜನಜಾಗ್ರತಿ ಸಮಿತಿಯಿಂದ ಆಗಸ್ಟ್ 19 ಸೋಮವಾರ ರಂದು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಯಿತು.
ಜನಜಾಗ್ರತಿ ಸಮಿತಿಯ ಸಂಚಾಲಕರಾದ ಕಟೀಲು ದಿನೇಶ್ ಪೈಯವರು ಮಾತಾಡಿ ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಗೋಸಂಬಂಧಿ ಅಪರಾಧಗಳು ತೀವ್ರವಾಗಿ ಹೆಚ್ಚುತ್ತಿವೆ. ಕೃಷಿಕರ ಮತ್ತು ಹೈನುಗಾರಿಕೆ ಮಾಡುವವರ ಮನೆಯಿಂದ ಗೋವುಗಳನ್ನು ಕಳವು ಮಾಡಿ ಕೊಂಡೊಯ್ಯಲಾಗುತ್ತದೆ. ಗೋಹತ್ಯೆ ಮಾಡಿ ಕದ್ದು ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಈ ರೀತಿ ಕದಿಯುವವರನ್ನು ಹಿಡಿಯಲು ಆರಕ್ಷಕದಳರಿಂದ ಸಾಧ್ಯವಾಗುತ್ತಿಲ್ಲ. ಆರಕ್ಷಕ ದಳದವರಿಂದ ಇಂತಹ ಕಳ್ಳರನ್ನು ಹಿಡಿಯುವ ಕೆಲಸವನ್ನು ಪ್ರಾಮಾಣಿಕ ಹಾಗೂ ತೀವ್ರವಾಗಿ ಆಗುತ್ತಿಲ್ಲ ಎಂದರು.
ಗೋವುಗಳನ್ನು ಕಳೆದು ಕೊಂಡವರಿಗೆ 50,000ರೂ. ಪರಿಹಾರ ನೀಡಬೇಕು,ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಬೇಕು, ಹೈನು ಕೃಷಿಕರ ರಕ್ಷಣೆಗೆ ಕೋವಿಯನ್ನು ನೀಡಬೇಕು, ಗೋವುಗಳ ರಕ್ಷಣೆಗೆ ಗ್ರಾಮ ಗೋ ರಕ್ಷಾದಳ ಸ್ಥಾಪಿಸಬೇಕು ಮೊದಲಾದ ಬೇಡಿಕೆಗಳನ್ನು ಪ್ರತಿಭಟನೆಯಲ್ಲಿ ಕೂಗಿದರು.
ಪ್ರತಿಭಟನೆಯಲ್ಲಿ ವಿದ್ಯಾಧರ ಹೆಗ್ಡೆ, ಜಗಧೀಶ ಶೇಣವ, ಜಯ ಗೌಡ,ಶರಣ್ ಪಂಪುವೆಲ್, ಮಂಜುನಾಥ, ಕಿಶೋರ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English