ಮಂಗಳೂರು ; ಅಕ್ಕತಂಗಿಯರು ತಮ್ಮ ನೆಚ್ಚಿನ ಅಣ್ಣ ತಮ್ಮಂದಿರುಗಳ ಕೈಗೆ ರಕ್ಷಾ ಬಂಧನ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಪ್ರತಿವರ್ಷ ನೂಲು ಹುಣ್ಣಿಮೆಯಂದು ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳು ತವರಿಗೆ ಬಂದು ತಮ್ಮ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ಬಲಗೈಗೆ ರಾಖಿ ಕಟ್ಟಿ ಆರತಿ ಬೆಳಗುತ್ತಾರೆ. ಹಳ್ಳಿ ಸಂಪ್ರದಾಯದಂತೆ ಒಂದು ಕಟ್ಟಿಗೆಯ ಮಣೆಯ ಮೇಲೆ ಸಹೋದರರನ್ನು ಕುಳ್ಳರಿಸುತ್ತಾರೆ. ನಂತರ ಹಣೆ ತೊಳೆದು ವಿಭೂತಿ, ಕುಂಕುಮದ ತಿಲಕವನ್ನಿಡುತ್ತಾರೆ.
ನಮ್ಮನ್ನು ಕಷ್ಟದಲ್ಲಿ ಪೊರೆಯುತ್ತಾ ಬಂದ ಸಹೋದರರು ಬಾಳೆಲ್ಲಾ ನಗುನಗುತಿರಲಿ ಎಂದು ಹಾರೈಸುತ್ತಾ ಬಾಯಲ್ಲಿ ಸಿಹಿಯನ್ನು ಹಾಕಿ ಹರಸುತ್ತಾರೆ. ಅಕ್ಕತಂಗಿಯರು ತಮ್ಮ ಸಹೋದರರ ಮೇಲಿಟ್ಟಿರುವ ಪ್ರೀತಿಯ ಶಕ್ತಿ ಅಣ್ಣ ತಮ್ಮಂದಿರನ್ನು ಕಷ್ಟಕಾಲದಲ್ಲಿ ಕಾಪಾಡುತ್ತದೆ ಎನ್ನುವುದು ಕಥೆಯ ನೀತಿ.
ರಕ್ಷಾ ಬಂಧನವೆನ್ನುವುದು ಒಡಹುಟ್ಟಿದವರು ಒಟ್ಟಾಗಿ ಆಚರಿಸುವ ಒಟ್ಟಾಗಿ ಹಬ್ಬ.ರಕ್ಷಾ ಬಂಧನವೆನ್ನುವುದು ಬದುಕಿಗೆ ಬೆಳಕಾಗಿಸಿದವರನ್ನು ನೆನೆಯುವ ಕಾಲ. ನೊಂದವರಿಗೆ ಆಸರೆಯಾದವರ ಸ್ಮರಿಸುವ ಅಮೃತ ಘಳಿಗೆ. ಹಿರಿಯ ಕಿರಿಯರೆನ್ನುವ ವಯಸ್ಸಿನ ಬೇಧವಿಲ್ಲ. ಜಾತಿ, ಧರ್ಮ, ಕುಲ,ಗೋತ್ರ, ಅಂತಸ್ತು ಇಲ್ಲಿ ಬರುವುದಿಲ್ಲ. ನನ್ನ ಸಹೋದರ ಸಹೋದರಿಯರೇ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ, ಅಷ್ಟೇ ಹೃದಯ ವೈಶಾಲ್ಯತೆಯಿಂದ ಆಚರಿಸುವ ಆಚರಣೆಯಿದು.
Click this button or press Ctrl+G to toggle between Kannada and English