ದೇಶದಲ್ಲೆಡೆ ಸಹೋದರ ಭಾಂಧವ್ಯದ ರಕ್ಷಾ ಬಂಧನ ಆಚರಣೆ
Tuesday, August 20th, 2013ಮಂಗಳೂರು ; ಅಕ್ಕತಂಗಿಯರು ತಮ್ಮ ನೆಚ್ಚಿನ ಅಣ್ಣ ತಮ್ಮಂದಿರುಗಳ ಕೈಗೆ ರಕ್ಷಾ ಬಂಧನ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಪ್ರತಿವರ್ಷ ನೂಲು ಹುಣ್ಣಿಮೆಯಂದು ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳು ತವರಿಗೆ ಬಂದು ತಮ್ಮ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ಬಲಗೈಗೆ ರಾಖಿ ಕಟ್ಟಿ ಆರತಿ ಬೆಳಗುತ್ತಾರೆ. ಹಳ್ಳಿ ಸಂಪ್ರದಾಯದಂತೆ ಒಂದು ಕಟ್ಟಿಗೆಯ ಮಣೆಯ ಮೇಲೆ ಸಹೋದರರನ್ನು ಕುಳ್ಳರಿಸುತ್ತಾರೆ. ನಂತರ ಹಣೆ ತೊಳೆದು ವಿಭೂತಿ, ಕುಂಕುಮದ ತಿಲಕವನ್ನಿಡುತ್ತಾರೆ. ನಮ್ಮನ್ನು ಕಷ್ಟದಲ್ಲಿ ಪೊರೆಯುತ್ತಾ ಬಂದ ಸಹೋದರರು ಬಾಳೆಲ್ಲಾ ನಗುನಗುತಿರಲಿ ಎಂದು […]