ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ “ಢುಂಢಿ” ಕಾದಂಬರಿಯ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ

6:42 PM, Friday, August 30th, 2013
Share
1 Star2 Stars3 Stars4 Stars5 Stars
(5 rating, 5 votes)
Loading...

Hindu Jagaran Vedikeಮಂಗಳುರು : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶ್ರೀಗಣೇಶನ ಅಪಮಾನ ಮಾಡಿದ “ಢುಂಢಿ” ಕಾದಂಬರಿಯನ್ನು ನಿಷೇಧಿಸಿ, ಲೇಖಕನಿಗೆ ಕಠಿಣ ಶಿಕ್ಷೆ ವಿಧಿಸಿ ಮತ್ತು ದೇವತೆಗಳ ಅಪಮಾನ ತಡೆಯಲು ಪ್ರತ್ಯೇಕ ಕಾನೂನು ಜಾರಿ ಮಾಡಲು ಆಗಸ್ಟ್ 30, ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸನಾತನ ಸಂಸ್ಥೆಯ ಸದಸ್ಯರಾದ ಸುಕನ್ಯ ಆಚಾರ್ ದಿನಾಂಕ 25.8.2013 ರಂದು ಬೆಂಗಳೂರಿನ ಸಭಾಂಗಣದಲ್ಲಿ ಯೊಗೀಶ್ ಮಾಸ್ಟರ್  ರಚಿಸಿದ  “ಢುಂಢಿ” ಅರಣ್ಯಕನೊಬ್ಬ ಗಣಪತಿಯಾದ ಕಥೆ ಎಂಬ ಕಾದಂಬರಿಯು ಬಿಡುಗಡೆಯಾಗಿದೆ. ಇದರಲ್ಲಿ  ಶ್ರೀಗಣೇಶನನ್ನು ರೌಡಿ, ಕ್ರೂರಿ, ಹಿಂದುಳಿದ, ಹೀನ ಜಾತಿಯ ಶೂದ್ರರ, ಉಚ್ಚಿಷ್ಟ ದೇವತೆ ಎಂದು ವಿಕೃತವಾಗಿ ಚಿತ್ರಿಸಿ ಕೊಟ್ಯಾಂತರ  ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ದೇಶವ್ಯಾಪಿ ಹಿಂದೂಗಳು ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಆಚರಿಸುವ ಮೊದಲೇ ಈ ರೀತಿ  ಶ್ರೀಗಣೇಶ ದೇವರನ್ನು ಅಪಮಾನಿಸಿರುವ ಹಿಂದೆ ಶ್ರೀಗಣೇಶನ ಮೇಲಿನ ಜನರ ಧಾಮರ್ಿಕ ಭಾವನೆಯನ್ನು ನೋಯಿಸುವ ವ್ಯವಸ್ಥಿತ ಷಡ್ಯಂತ್ರ ಇದೆ. ಲೇಖಕನು ಅತ್ಯಂತ ಕೀಳುಮಟ್ಟದಲ್ಲಿ ಪ್ರಚಾರ ಗಿಟ್ಟಿಸುವ ಹುನ್ನಾರ ಇದಾಗಿದೆ ಎಂದು ಹೇಳಿದರು.

Hindu Jagaran Vedikeಈ ಹಿಂದೆಯೂ ಗಣೇಶ ಚತುರ್ಥಿ ಸಂದರ್ಭದಲ್ಲಿ ಡಾ.ಝಾಕೀರ ನಾಯ್ಕ ಶ್ರೀಗಣೇಶನ ಅಪಮಾನವನ್ನು ಮಾಡಿ ಗಣೇಶ ಭಕ್ತರ ಧಾರ್ಮಿಕ ಭಾವನೆಯನ್ನು ನೋವುಂಟು ಮಾಡಿದ್ದನು. ಶ್ರೀ ಗಣೇಶನನ್ನು  ಪ್ರಥಮ ಪೂಜಕ, ವಿದ್ಯೆ, ಬುದ್ದಿ ಮತ್ತು ಸಿದ್ದಿ ದೇವತೆಯೆಂದು ಕೊಟ್ಯಾಂತರ ಜನರು ಆರಾಧಿಸುತ್ತಾರೆ. ಆದರೆ ಢುಂಡಿ ಕಾದಂಬರಿಯಲ್ಲಿ ಶ್ರೀಗಣೇಶನನ್ನು   ಅತ್ಯಂತ ಕೀಳು ಮಟ್ಟದಲ್ಲಿ ಚಿತ್ರಿಸುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಘೋರ ಅಪರಾಧವಾಗಿದೆ. ಹಾಗಾಗಿ ಸರಕಾರ ಲೇಖಕ, ಪ್ರಕಾಶಕರ ಮೇಲೆ ಅಪರಾಧವನ್ನು ದಾಖಲಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಸಂಬಂಧಿತ ಪುಸ್ತಕವನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತದೆ. ಅಷ್ಟೇ ಅಲ್ಲದೇ ದೇವತೆಗಳ ಅಪಮಾನ ತಡೆಯಲು ಪ್ರತ್ಯೇಕ ಕಾನೂನು ಮಾಡಲು ಆಗ್ರಹ ಮಾಡುತ್ತದೆ. ಇಲ್ಲದಿದ್ದರೆ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯವ್ಯಾಪಿ ಆಂದೋಲನವನ್ನು ಮಾಡಲಿದೆ ಎಂದು ಶ್ರೀರಾಮಸೇನೆ ಉಪಾಧ್ಯಕ್ಷ ಕುಮಾರ್ ಮಾಲೇಮಾರ್ ತಿಳಿಸಿದರು.

ಪ್ರತಿಭಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪ್ರಸನ್ನ ಕಾಮತ, ರಾಜ್ಯ ವಕ್ತಾರ, ಮೋಹನ್ ಗೌಡ ಸನಾತನ ಸಂಸ್ಥೆಯ ಸಂಗೀತ ಪ್ರಭು ಮತ್ತಿತರು ಉಪಸ್ಥಿತರಿದ್ದರು.

Hindu Jagaran Vedike

Hindu Jagaran Vedike

Hindu Jagaran Vedike

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English