ಮಂಗಳೂರಿನಲ್ಲಿ ನಾನಾ ಆಕಾರದ ಗಣೇಶ ವಿಗ್ರಹಗಳ ಭರದಿಂದ ತಯಾರಿ

3:05 PM, Friday, September 6th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

Ganapathiಮಂಗಳೂರು : ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಆರಾಧನೆ ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತದೆ.

ಶಿವ ಪಾರ್ವತಿಯರ ಪುತ್ರ ಗಣೇಶನ ಆಕಾರವು ವಿಚಿತ್ರ ಮತ್ತು ವಿಶೇಷವಾದದು. ಆನೆ ಮುಖದ ದೊಡ್ಡ ಕಿವಿಯ, ಡೊಳ್ಳು ಹೊಟ್ಟೆಯ ಈತ ದೇವತೆಗಳಿಗೂ ಮಾನವ ಕುಲಕ್ಕೂ ಪ್ರಥಮ ಪೂಜಿತ. ಶಿವ ಪುರಾಣದ ಪ್ರಕಾರ ಪಾರ್ವತಿಯು ತನ್ನ ಮೈ ಮೇಲಿನ ಮಣ್ಣಿನ ಕೊಳೆಯನ್ನು ಮೂರ್ತಿಯನ್ನಾಗಿಸಿ ಅದಕ್ಕೆ ಜೀವ ನೀಡಿದ್ದಳು ಎಂದು ಹೇಳಲಾಗುತ್ತದೆ. ಜೀವ ಪಡೆದ ಆ ಪಾರ್ವತಿಯ ಪುತ್ರನನ್ನು ತಾನು ಸ್ನಾನಕ್ಕೆ ಹೊರಟಾಗ ಕಾವಲು ಕಾಯಲು ನಿಲ್ಲಿಸುತ್ತಾಳೆ. ಶಿವನು ಈತ ಯಾರೆಂದು ತಿಳಿಯದೆ ಆತನನ್ನು ಪ್ರಶ್ನಿಸಿದಾಗ  ಪಾರ್ವತಿಯ ಆಜ್ಙೆಯನ್ನು  ಪಾಲಿಸಲು ಇಲ್ಲಿ ನಿಲ್ಲಿಸಿರುವುದಾಗಿ ತಿಳಿಸುತ್ತಾನೆ. ಶಿವನನ್ನು ಮುಂದೆ ಹೋಗಲು ತಡೆ ಯೊಡ್ಡುತ್ತಾನೆ. ಇದರಿಂದ ಕುಪಿತನಾದ ಶಿವನು ಅವನ ಶಿರಛೇದನ ಮಾಡುತ್ತಾನೆ.

ಪಾರ್ವತಿಯು ಸ್ನಾನ ಮುಗಿಸಿ ಬಂದಾಗ ತನ್ನ ಮಾನಸ ಪುತ್ರ ಶಿರಛೇಧಿತನಾಗಿ ಬಿದ್ದಿರುವುದ್ದನ್ನು ಕಂಡು ದುಖಿ:ತಳಾಗಿ ಶಿವನನ್ನು ತನ್ನ ಮಗನಿಗೆ ಜೀವ ಕೊಡುವಂತೆ ಕೇಳಿಕೊಳ್ಳುತ್ತಾಳೆ. ಶಿವ ಪರಮಾತ್ಮನಿಗೆ  ತನ್ನ ತಪ್ಪಿನ ಅರಿವಾಗಿ ಉತ್ತರ ದಿಕ್ಕಿಗೆ ತಲೆ ಮಾಡಿ ನಿದ್ರಿಸುತ್ತಿರುವ ಯಾವುದೇ ಜೀವಿಯ ತಲೆಯನ್ನು ತರುವಂತೆ ತನ್ನ ಗಣಗಳಿಗೆ ಆಜ್ಙಾಪಿಸುತ್ತಾಳೆ.

Ganapathiಶಿವನ ಆಣತಿಯಂತೆ ಹೊರಟ  ಆತನ ಗಣಗಳು ಎಲ್ಲಿ ಹುಡುಕಿದರೂ ಉತ್ತರ ದಿಕ್ಕಿಗೆ ತಲೆ ಮಾಡಿ ನಿದ್ರಿಸುವ ಪ್ರಾಣಿಯಾಗಲೀ, ಮನುಷ್ಯನಾಗಲೀ ಸಿಗಲಿಲ್ಲ. ಕೊನೆಗೆ ಆನೆಯೊಂದು ಸಿಕ್ಕಿತು. ಅದರ ಶಿರವನ್ನು ಕತ್ತರಿಸಿ ತಂದು ಶಿವನಿಗೊಪ್ಪಿಸಿದರು. ಅದನ್ನು ಜೋಡಿಸಿ ಪಾರ್ವತಿ ಮಗನಿಗೆ ಜೀವನೀಡಲಾಯಿತು. ಬಳಿಕ ಆತನನ್ನು ಗಣಪತಿ ಎಂದು ಕರೆಲಾಯಿತು.

ಗಣಪತಿಯನ್ನು ಭಾದ್ರಪದ ಶುದ್ಧ ಶುಕ್ಲ ಪಕ್ಷದ ದಿನ ಪೂಜಿಸಲಾಗುತ್ತದೆ. ಅಂದು ಹಲವು ಗಾತ್ರಗಳಿಂದ, ನಾನಾ ರೂಪಗಳಿಂದ ಸಿದ್ದಗೊಳಿಸಿದ ಗಣೇಶನ ವಿಗ್ರಹಗಳಿಗೆ ಪೂಜೆ ಸಲ್ಲುತ್ತದೆ.

ಗಣಪತಿಯ ವಿಗ್ರಹಗವನ್ನು ನಿರ್ಮಿಸುವುದು. ಒಂದು ಕಲೆ ಮಂಗಳೂರಿನಲ್ಲಿ ರಥಬೀದಿ, ಮಣ್ಣಗುಡ್ಡೆ ಮತ್ತು ಶರವು ದೇವಸ್ಥಾನದ ಸಮೀಪ ಬಾಲಂಭಟ್ ಹಾಲಿನಲ್ಲಿ ರಥಬೀದಿ ದೇವಸ್ಥಾನದ ಬಳಿ ಗಣೇಶನ  ಉತ್ಸವ ಮೂರ್ತಿಗಳನ್ನು ಸಿದ್ದಗೊಳಿಸಲಾಗುತ್ತದೆ.

ರಥಬೀದಿಯಲ್ಲಿ 25 ವರ್ಷಗಳಿಂದ ಗಣೇಶ ವಿಗ್ರಹ ಸಿದ್ದಗೊಳಿಸುವ ವಿನಾಯಕ ಶೇಟ್ ವಿಗ್ರಹ ತಯಾರಿಯಲ್ಲಿ ನಿಪುಣರು. ಸುಮಾರು ಮೂರು ತಿಂಗಳಿಂದಲೇ ಮೂರ್ತಿ  ತಯಾರಿಯ ಕೆಲಸ ಆರಂಭಿಸುತ್ತಾರೆ. ಮೂರು ಜನ ಸಹಾಯಕರೊಂದಿಗೆ  ಪುಟ್ಟ ಗಣಪತಿಯಿಂದ ಹಿಡಿದು ದೊಡ್ಡ ಆಕಾರದ ಗಣಪತಿಯವರೆಗೆ  ಮೂರ್ತಿಗಳನ್ನು ಸಿದ್ದಗೊಳಿಸುತ್ತಾರೆ. ವಿಗ್ರಹಗಳನ್ನು ಯಾವುದೇ ಪೈಂಟ್ ಬಳಸದೆ, ಆವೆ ಮಣ್ಣಿಗೆ ನೀರಿನ ಬಣ್ಣವನ್ನು ಬಳಸಿ ತಯಾರು ಮಾಡುತ್ತಾರೆ. ಎಂ.ಎಸ್ ಕುಡ್ವರ ಶಿಷ್ಯರಾದ ಇವರು ವಿಗ್ರಹಗಳನ್ನು ಮಾರಾಟ ಉದ್ದೇಶದಿಂದ ಮಾಡದೆ ಭಕ್ತರಿಗೆ  ಅವರು ನೀಡಿದ  ಹಣಕ್ಕೆ ವಿಗ್ರಹಗಳನ್ನು ನೀಡುತ್ತಾರೆ.

Ganapathiಮಣ್ಣಗುಡ್ಡೆಯಲ್ಲಿ ದಿವಂಗತ ಮೋಹನರಾಯರ ಮಕ್ಕಳಾದ ಪ್ರಭಾಕರ ರಾವ್, ಸುಭಾಕರ ರಾವ್, ರಾಮಚಂದ್ರ ರಾವ್ ಮತ್ತು ಮನೆಯವರು ಸುಮಾರು 84 ವರ್ಷಗಳಿಂದ ಗಣೇಶ ವಿಗ್ರಹದ ತಯಾರಿಯಲ್ಲಿ ನಿರತರಾಗಿದ್ದಾರೆ. ಇವರು ಪರಿಸರ ಪ್ರೇಮಿ ಗಣಪತಿಗಳನ್ನು ನೀರಿನ ಬಣ್ಣ ಮತ್ತು ಮೂರ್ತಿ ಒಳಗಡೆ ಬೈಹುಲ್ಲುಗಳನ್ನು ತುಂಬಿಸಿ ಪರಿಸರಕ್ಕೆ ಪೂರಕವಾಗಿ ನಿಮರ್ಿಸುತ್ತಾರೆ. ಸುಮಾರು ಒಂದೂವರೆ ತಿಂಗಳಿನ ಮೊದಲು ಅಂದರೆ ಚಿತ್ರಾ ನಕ್ಷತ್ರದ ದಿನದಂದು ವಿಗ್ರಹಗಳನ್ನು ತಯಾರಿ ಮಾಡಲು ಆರಂಭಿಸುತ್ತಾರೆ. 198 ವಿಗ್ರಹಗಳನ್ನು  ಭಕ್ತರ ಬೇಡಿಕೆಗಳಂತೆ ತಯಾರಿಸಿ ಕೊಡುತ್ತಾರೆ. ಇವರು ತಯಾರಿಸಿದ  ವಿಗ್ರಹ ಅಮೇರಿಕ ಮತ್ತು ಇಂಗ್ಲೆಡಿಗೂ ಹೋಗುತ್ತದೆ. ತಾವೂ ಮಾಡಿದ ಕೆಲಸಕ್ಕೆ ಯಾವುದೇ ಬೇಡಿಕೆ ಇಡುವುದಿಲ್ಲ ಭಕ್ತರು ಕೊಟ್ಟಷ್ಟು ಸ್ವೀಕರಿಸುತ್ತಾರೆ ಇಲ್ಲದಿದ್ದರೆ ಕೇವಲ ತೆಂಗಿನ ಕಾಯಿ ಕೊಟ್ಟರೂ ವಿಗ್ರಹಗಳನ್ನು ಮಾಡಿ ಕೊಡುತ್ತಾರೆ. ಇವರೆಲ್ಲರೂ ವಿದ್ಯಾವಂತರಾಗಿದ್ದು, ಬ್ಯಾಂಕ್ ಉದ್ಯೋಗ ಕೈಗಾರಿಕೊದ್ಯಮಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.

ರಥಬೀದಿಯಲ್ಲಿ ದಾಮೋದರ್ ಶೆಣೈಯವರು 53 ವರ್ಷಗಳಿಮದ 25ಕ್ಕೂ ಹೆಚ್ಚು ವಿಗ್ರಹಗಳನ್ನು ಸಿದ್ದಗೊಳಿಸುತ್ತಿದ್ದಾರೆ. ಇವರಿಗೆ ವಿಗ್ರಹ ತಯಾರಿಕೆಗೆ ಹಲವಾರು ಪ್ರಶಸ್ತಿಗಳು ಬಂದಿವೆ. ವಿಗ್ರಹಗಳಿಗೆ ಸೂಕ್ಷ್ಮ  ಕಸೂತಿಗಳ ಮೂಲಕ ರೂಪ ನೀಡುತ್ತಾರೆ. ಕೇವಲ ಒಂದು ವಾರದಲ್ಲಿ ವಿಗ್ರಹಗಳನ್ನು ಸಿದ್ದಗೊಳಿಸುವುದು ಇವರ ನೈಪುಣ್ಯತೆ.

ರಥಬೀದಿಯ ಇನ್ನೊಂದು ಮನೆ ರೌಂಡ್ ಹೌಸ್ನಲ್ಲಿ. ಕಿಶೋರ್ ಪೈ ಯವರು ಗಣಪತಿಯ ವಿಗ್ರಹಗಳನ್ನು ನಿರ್ಮಿಸಿ ಹಳ್ಳಿಗಳ ಸಾರ್ವಜನಿಕ ಗಣೇಶೋತ್ಸವಗಳಿಗೆ ಒದಗಿಸುತ್ತಾರೆ. ಮುಂಬಯಿಯಲ್ಲಿ ಗಣೇಶ ವಿಗ್ರಹಗಳನ್ನು ನಿರ್ಮಿಸಲು ಕಲಿತ ಇವರು ಗಣೇಶನನ್ನು ವಿವಿಧ ರೂಪಗಳಲ್ಲಿ ಚಿತ್ರಿಸ ಬಲ್ಲರು, ಎರಡು ದಿನಗಳಲ್ಲಿ ವಿಗ್ರಹಗಳನ್ನು ಸಿದ್ದ ಪಡಿಸಿ ಒಣಗಿದ ನಂತರ ಬಣ್ಣ ಬಳಿಯಲಾಗುತ್ತದೆ ಎಂದು ಅವರು ಹೇಳುತ್ತಾರೆ.

Ganapathiಗಣೇಶ ವಿಗ್ರಹಗಳನ್ನು  ಆವೆ ಮಣ್ಣಿನಿಂದ ತಯಾರಿಸಲಾಗುತ್ತದೆ. ಮಣ್ಣಿನ ಮುದ್ದೆಯಿಂದ ಗಣೇಶನಿಗೆ ರೂಪ ನೀಡಲಾಗುತ್ತದೆ. ಮೊದಲಿಗೆ ಹೊಟ್ಟೆ, ನಂತರ ಕಾಲು, ಕೈ, ಕೊನೆಗೆ ಮುಖದ  ರೂಪಗಳನ್ನು ನೀಡಲಾಗುತ್ತದೆ.ಪ್ಲಾಸ್ಟ್ ರ್  ಆಪ್ ಪ್ಯಾರಿಸ್ ಮೂಲಕವೂ ವಿಗ್ರಹಗಳನ್ನು ನಿರ್ಮಿಸಲಾಗುತ್ತಗೆ. ಇದು  ಹೆಚ್ಚಾಗಿ ಮುಂಬಯಿಯಲ್ಲಿ ತಯಾರಿಸುವ ವಿಧಾನ. ಮಂಗಳೂರಿನಲ್ಲಿ  ಹೆಚ್ಚಾಗಿ ಬಳಸುವುದು ಆವೆ ಮಣ್ಣು, ಮೂರ್ತಿ  ಸಿದ್ದಗೊಂಡ ಬಳಿಕ ಅವುಗಳಿಗೆ ನೀರಿನ ಬಣ್ಣದಿಂದ ಅಲಂಕರಿಸಲಾಗುತ್ತದೆ. ಗಣಪತಿಯ ವಿಗ್ರಹಗಳಿಗೆ ಬೇಡಿಕೆ ಇರುವವರು ಮೊದಲಿಗೆ ವಿಗ್ರಹ ಮಾಡುವವರಿಗೆ ಗಣಪತಿ ಕುಳಿತು ಕೊಳ್ಳುವ ಪೀಠವನ್ನು ನೀಡಬೇಕು. ಆನಂತರವೇ ವಿಗ್ರಹಗಳನ್ನು ಸಿದ್ದಗೊಳಿಸಲಾಗುವುದು. ಹಿಂದೆ ಕೇವಲ ವಿಳ್ಯದೆಲೆ ಮತ್ತು ಕಾಣಿಕೆ ನೀಡಿ ವಿಗ್ರಹಗಳನ್ನು ಭಕ್ತರು ಕೊಂಡು ಹೋಗುತ್ತಿದ್ದರು. ನೂರು, ಇನ್ನೂರು , ಐನ್ನೂರು ರೂ. ಕೊಟ್ಟು ಖರೀದಿಸುತ್ತಿದ್ದರು. ಈಗ ವಿಗ್ರಹಗಳ ಬೆಲೆ 3000 ದಿಂದ 15 ಸಾವಿರದ ವರೆಗೆ ನೀಡಲಾಗುತ್ತದೆ. ವಿಗ್ರಹ ತಯಾರಕರು ಇಂತಿಷ್ಟೇ ನೀಡಿ ಎಂದು ಹೇಳುವುದಿಲ್ಲ.  ಭಕ್ತರೇ ನೀಡಿ ವಿಗ್ರಹಗಳನ್ನು ಖರೀದಿಸುತ್ತಾರೆ ಎಂದು ವಿಗ್ರಹ ತಯಾರಕರು ಹೇಳುತ್ತಾರೆ.

ಒಟ್ಟಿನಲ್ಲಿ ಗಣೇಶ ಹಬ್ಬ ಸಾರ್ವಜನಿಕವಾದುದು. ಪಂಡಿತ್ ಜವಹಾರ್ಲಾಲ್ ನೆಹರೂ ಕಾಲದಲ್ಲೇ ಗಣೇಶ ಹಬ್ಬ ವೈಶಿಷ್ಟ್ಯ ಪಡೆದಿತ್ತು. ಗಣೇಶ ಹಬ್ಬದಿಂದ ಸಮಾಜದಲ್ಲಿ ಸೌಹಾರ್ದತೆ ಬೆಳೆಯುತ್ತದೆ, ಬೇರೆ ಬೇರೆ ಧರ್ಮದವರು ಒಟ್ಟು ಸೇರುವ ಅವಕಾಶ ಉಂಟಾಗುತ್ತದೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಜೀವನ ಬೆಳೆಯುತ್ತದೆ. ಅದಕ್ಕಾಗಿ ಗಣೇಶ ಹಬ್ಬವನ್ನು ಜಾತಿಭೇದ ಮರೆತು ಆಚರಿಸಬೇಕು ಎಂಬುದು ನಮ್ಮ ಹಾರೈಕೆ. Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi

Ganapathi
ವಿಡಿಯೊ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English