ಮಂಗಳೂರು : ಕಾರ್ಮಿಕ ಕ್ಷೇತ್ರದಲ್ಲಿನ ಅವ್ಯವಸ್ಥೆಗಳನ್ನು ಖಂಡಿಸಿ ಸಿಐಟಿಯು ವತಿಯಿಂದ, ಕನಿಷ್ಠ ಕೂಲಿ, ಮನೆ ನಿವೇಶನ ಎಲ್ಲಾ ಕುಟುಂಬಗಳಿಗೂ ರೇಷನ್, ಕಾರ್ಮಿಕ ಕಾನೂನಿನ ಕಟ್ಟುನಿಟ್ಟಿನ ಜಾರಿ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಶುಕ್ರವಾರ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನಾ ಪ್ರದರ್ಶನ ನಡೆಯಿತು.
ಸಿಐಟಿಯು ಕೇಂದ್ರ ಸಮಿತಿ ಮುಖಂಡ ಬಿ.ಮಾಧವ ಪ್ರತಿಭಟನಕಾರರನ್ನು ಉದ್ದೇಶಿಸಿ ಕಾರ್ಮಿಕರು ಬಿಪಿಎಲ್ ರೇಷನ್ ಕಾರ್ಡ್, ಸಂಬಳದಲ್ಲಿ ಹೆಚ್ಚಳ, ಸಾಮಾಜಿಕ ಭದ್ರತೆ, ಪಿಂಚಣಿ ಸೌಲಭ್ಯ ಹಾಗೂ ಎಫ್ ಡಿಐ ನಿಷೇಧಿಸಬೇಕು ಎಂಬ ಹಲವು ಬೇಡಿಕೆಗಳನ್ನು ನೀಡಿದ್ದರೂ ಸರ್ಕಾರಗಳು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಇಂತಹ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಆಟೋ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ಸುನೀಲ್ ಕುಮಾರ್, ಮಹೇಶ್, ರವಿಕಲ, ಪ್ರಧಾನ ಶೆಟ್ಟಿ, ಬಾಲಾಜಿ ಶೇಖರ್ , ಬೀಡಿ ಕಾರ್ಮಿಕರ ಸಂಘದ ರಮೇಶ್ ಕುಮಾರ್,ಹಾಗೂ ಮತ್ತಿತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English